Advertisement
ಅಡಿಕೆ ಹಳದಿ ಎಲೆರೋಗಕ್ಕೆ ಸುಳ್ಯ ತಾಲೂಕಿನ ಸಂಪಾಜೆ ಹಾಗೂ ಕೊಡಗು ಜಿಲ್ಲೆ ಯ ಚೆಂಬು ಪ್ರದೇಶವು ಹಾಟ್‌ಸ್ಪಾಟ್ ಎಂದು ಗುರುತಿಸಲಾಗಿತ್ತು. ಅನೇಕ ವರ್ಷಗಳಿಂದಲೂ ಹಳದಿ ಎಲೆರೋಗ ಇರುವ ತೋಟಗಳಲ್ಲೂ ಈಗಲೂ ಹಸಿರಾಗಿರುವ ಮರಗಳಿಗೆ ರೋಗ ನಿರೋಧಕ ಶಕ್ತಿ ಇದೆ ಎಂಬುದು ಸಾಮಾನ್ಯವಾಗಿರುವ ಅಧ್ಯಯನ. ಇದೀಗ ಅಂತಹ ಮರಗಳನ್ನು ಗುರುತಿಸುವ ಕಾರ್ಯ ಮಾಡಲಾಗುತ್ತಿದೆ.
ಸಂಪಾಜೆ ಸಹಕಾರಿ ಸಂಘದ ಅಧ್ಯಕ್ಷ ಸೋಮಶೇಖರ ಕೊಯಿಂಗಾಜೆ ನೇತೃತ್ವದ ತಂಡ ಸಹಕಾರ ನೀಡಿತು. ಸಹಕಾರಿ ಯೂನಿಯನ್ ಅಧ್ಯಕ್ಷ ರಮೇಶ್ ದೇಲಂಪಾಡಿ, ಅ.ಭಾ.ಅಡಿಕೆ ಬೆಳೆಗಾರರ ಸಂಘದ ಕಾರ್ಯದರ್ಶಿ ಮಹೇಶ್ ಪುಚ್ಚಪ್ಪಾಡಿ ಇದ್ದರು. ಗುರುತಿಸಲಾದ ಮರಗಳ ಆರೈಕೆ ಮಾಡಿ ರೋಗದ ಅಂಶಗಳನ್ನು ಪ್ರಯೋಗಾಲಯದಲ್ಲಿ ಪರೀಕ್ಷೆ ಮಾಡಿ ರೋಗ ಮುಕ್ತವಾಗಿರುವ ಮರ ಎಂಬ ಖಾತ್ರಿ ಬಳಿಕ ಮುಂದಿನ ವರ್ಷ ಅಂತಹದ್ದೇ ಮರಗಳ ನಡುವೆ ಪರಾಗಸ್ಪರ್ಶ ನಡೆಸಿ ರೋಗ ನಿರೋಧಕ ತಳಿ ಅಭಿವೃದ್ಧಿ ಮಾಡುವುದು ಈ ಯೋಜನೆಯ ಉದ್ದೇಶವಾಗಿದೆ.