Advertisement
ಈ ವಿಶಿಷ್ಟ ಐಸಿಯು ಬಸ್ ಆ್ಯಂಬುಲೆನ್ಸ್‌ನಲ್ಲಿ ಆಮ್ಲಜನಕ, ವೆಂಟಿಲೇಟರ್ ಸೇರಿದಂತೆ ಸೋಂಕಿತರಿಗೆ ತುರ್ತು ಸೇವೆಗೆ ಅಗತ್ಯವಿರುವ ಎಲ್ಲ ಸೌಲಭ್ಯ ಗಳು ಇರಲಿದ್ದು, ನಿಗಮದಲ್ಲೇ ಆಂತರಿಕವಾಗಿ ಈ ವಿನೂತನ ವ್ಯವಸ್ಥೆ ರೂಪಿಸಲಾಗಿದೆ. ಇನ್ನೆರಡು ದಿನಗಳಲ್ಲಿ ಸಾರ್ವಜನಿಕ ಸೇವೆಗೆ ಇದು ಸಿದ್ಧಗೊಳ್ಳಲಿದೆ. ಆಕ್ಸಿ ಬಸ್‌ನ ಮುಂದುವರಿದ ಭಾಗ ಇದಾಗಿದ್ದು, ಈ ರೀತಿಯ ಪ್ರಯತ್ನ ಇದೇ ಮೊದಲು ಎಂದು ವಿಶ್ಲೇಷಿಸಲಾಗುತ್ತಿದೆ.
Related Articles
Advertisement
ಕೆಎಸ್‌ಆರ್‌ಟಿಸಿಯು ಫೌಂಡೇಶನ್ ಇಂಡಿಯಾ ಸಹಯೋಗದಲ್ಲಿ ಸಂಚಾರಿ ಆಮ್ಲಜನಕ ಬಸ್ (Oxygen on Wheels) ಮತ್ತು ಆ್ಯಂಬುಲೆನ್ಸ್ ಅನ್ನು ಆನೇಕಲ್ ಹಾಗೂ ಚಿಕ್ಕಬಳ್ಳಾಪುರಕ್ಕೆ ನೀಡಲಾಯಿತು. ಬಸ್ ಆ್ಯಂಬುಲೆನ್ಸ್‌ನಲ್ಲಿ ಆರುಆಸನಗಳು ಹಾಗೂ ಎರಡು ಬೆಡ್‌ಗಳ ವ್ಯವಸ್ಥೆ ಇದ್ದು, 4ಆಕ್ಸಿಜನ್ ಸಿಲಿಂಡರ್‌ಮತ್ತು2ಆಕ್ಸಿಜನ್‌ಕಾನ್ಸಂಟ್ರೇಟರ್ ಗಳನ್ನು ಅಳವಡಿಸಲಾಗಿದೆ. ಸುಮಾರು 7ರಿಂದ 8 ರೋಗಿಗಳು ಒಂದು ಬಾರಿಗೆ ಎರಡರಿಂದ ನಾಲ್ಕು ಗಂಟೆವರೆಗೆ ಈ ಸೌಲಭ್ಯವನ್ನು ಪಡೆಯಬಹುದಾಗಿದೆ.
ಆರೋಗ್ಯ ಸಿಬ್ಬಂದಿ ವ್ಯವಸ್ಥೆ ಮೇಲ್ವಿಚಾರಣೆಯನ್ನು ಫೌಂಡೇಶನ್ ಇಂಡಿಯಾ ನಿರ್ವಹಿಸಲಿದೆ. ಕೆಎಸ್‌ಆರ್ ಟಿಸಿ ವ್ಯವಸ್ಥಾಪಕ ನಿರ್ದೇಶಕ ಶಿವಯೋಗಿ ಕಳಸದ ಈ ಸೇವೆಗೆ ಚಾಲನೆ ನೀಡಿದರು. ಈ ಸಂದರ್ಭದಲ್ಲಿ ಫೌಂಡೇಶನ್ ಇಂಡಿಯಾ ಗೌರವ ಕಾರ್ಯದರ್ಶಿ ಸಂಜಯ್ ಗುಪ್ತ ಇತರರು ಇದ್ದರು.
ಸಂಚಾರಿಐಸಿಯುನಲ್ಲಿ ಏನು ಇರಲಿದೆ? :
ಐದು ಹಾಸಿಗೆಗಳುಳ್ಳ ಆ್ಯಂಬುಲೆನ್ಸ್ ಇದಾಗಿದೆ
ಪ್ರತಿ ಬೆಡ್‌ಗೆ ಆಮ್ಲಜನಕ ವ್ಯವಸ್ಥೆ, ರೋಗಿಗಳ ಆರೋಗ್ಯದ ಮೇಲೆ ನಿಗಾ ಇಡಲು ಹೃದಯದೊತ್ತಡ, ರಕ್ತದಲ್ಲಿ ಆಮ್ಲಜನಕ ಪ್ರಮಾಣ, ಇಸಿಜಿ, ದೇಹದ ಉಷ್ಣಾಂಶ ಅಳೆಯುವ ಮಾಪನ, ಐವಿ, ವೆಂಟಿಲೇಟರ್ ಅಳವಡಿಸುವ ಸೌಲಭ್ಯ.
ತುರ್ತು ಔಷಧ, ಜನರೇಟರ್ ವ್ಯವಸ್ಥೆ ಲಭ್ಯ