ನವದೆಹಲಿ: ಕೋವಿಡ್-19 ಸೋಂಕು ರೋಗ ತೀವ್ರಗತಿಯಲ್ಲಿ ಹರಡುತ್ತಿರುವ ಹಿನ್ನೆಲೆಯಲ್ಲಿ ಐಸಿಎಸ್ ಇ ಬೋರ್ಡ್ ಎಸ್ಸೆಸ್ಸೆಲ್ಸಿ ಮತ್ತು ದ್ವಿತೀಯ ಪಿಯುಸಿ ಪರೀಕ್ಷೆಗಳನ್ನು ಗುರುವಾರ ಮುಂದೂಡಿದೆ.
ಹತ್ತನೇ ತರಗತಿ ಮತ್ತು ದ್ವಿತೀಯ ಪಿಯುಸಿ ಪರೀಕ್ಷೆಗಳನ್ನು ಮಾರ್ಚ್ 31ರವರೆಗೆ ಮುಂದೂಡಲಾಗಿದೆ ಎಂದು ಇಂಡಿಯನ್ ಸ್ಕೂಲ್ ಸರ್ಟಿಫಿಕೇಟ್ ಎಕ್ಸಾಮಿನೇಷನ್ಸ್ (ಸಿಐಎಸ್ ಸಿಇ) ಚೀಫ್ ಎಕ್ಸಿಕ್ಯೂಟಿವ್ ಗೇರೈ ಅರ್ಥೂನ್ ತಿಳಿಸಿರುವುದಾಗಿ ಪಿಟಿಐ ವರದಿ ಮಾಡಿದೆ.
ಈಗಾಗಲೇ ಸಿಬಿಎಸ್ ಇ ವೇಳಾಪಟ್ಟಿ ಘೋಷಿಸಿತ್ತು. ಆದರೆ ಕೋವಿಡ್-19 ವೈರಸ್ ಹಿನ್ನೆಲೆಯಲ್ಲಿ ಮಾರ್ಚ್ 31ರವರೆಗೆ ಪರೀಕ್ಷೆ ಮುಂದೂಡಲಾಗಿದೆ. ಕೇಂದ್ರದ ಎಚ್ ಆರ್ ಡಿ ಸಚಿವಾಲಯ ನಿರ್ದೇಶನದ ಮೇರೆಗೆ ಈ ನಿರ್ಧಾರ ತೆಗೆದುಕೊಳ್ಳಲಾಗಿದೆ ಎಂದು ತಿಳಿಸಿದರು.
ಎಲ್ಲಾ ಪರೀಕ್ಷೆಗಳ ವೇಳಾಪಟ್ಟಿಯನ್ನು ಮಾರ್ಚ್ 31ರ ನಂತರ ಘೋಷಿಸುವ ಸಾಧ್ಯತೆ ಇದ್ದಿರುವುದಾಗಿ ತಿಳಿಸಿದೆ. ಸಿಬಿಎಸ್ ಇ, ಎನ್ ಐಒಎಸ್ ಪರೀಕ್ಷೆಯನ್ನು ಒಳಗೊಂಡಿದೆ. ಅಲ್ಲದೇ ಮೌಲ್ಯಮಾಪನ ಕೆಲಸ ಕೂಡಾ ಮಾರ್ಚ್ 31ರಂದು ಮರು ನಿಗದಿಪಡಿಸಲಾಗುವುದು ಎಂದು ವರದಿ ವಿವರಿಸಿದೆ.
ಭಾರತದಲ್ಲಿ ಕೋವಿಡ್-19 ಸೋಂಕಿತರ ಸಂಖ್ಯೆ 180ಕ್ಕೆ ಏರಿಕೆಯಾಗಿದೆ. ಕರ್ನಾಟ, ಮಹಾರಾಷ್ಟ್ರದಲ್ಲಿ ಸೋಂಕು ಪೀಡಿತರ ಸಂಖ್ಯೆ ಹೆಚ್ಚಳವಾಗುವ ಜತೆಗೆ ಇಂದು ದೇಶಾದ್ಯಂತ ಕೋವಿಡ್-19 ಪೀಡಿತರ ಸಂಖ್ಯೆ 180ಕ್ಕೆ ಏರಿದೆ.