Advertisement

ಪ್ರೀಮಿಯರ್‌ ಸ್ಟುಡಿಯೋ ನೆಲಸಮ

06:30 AM Sep 23, 2018 | Team Udayavani |

ಮೈಸೂರು: ಕನ್ನಡ ಚಿತ್ರರಂಗ ಸೇರಿ ಭಾರತೀಯ ಚಿತ್ರರಂಗದ ಪಾಲಿಗೆ ಮೈಲುಗಲ್ಲಾಗಿದ್ದ ಮೈಸೂರಿನ ಪ್ರೀಮಿಯರ್‌ ಸ್ಟುಡಿಯೋ ಇದೀಗ ಇತಿಹಾಸದ ಪುಟ ಸೇರಿದೆ.

Advertisement

ಒಂದು ಕಾಲದಲ್ಲಿ ಚಿತ್ರರಂಗದ ಚಿತ್ರೀಕರಣಕ್ಕೆ ನೆಚ್ಚಿನ ತಾಣವಾಗಿದ್ದ ಪ್ರೀಮಿಯರ್‌ ಸ್ಟುಡಿಯೋ ಕಟ್ಟಡವನ್ನು
ನೆಲಸಮಗೊಳಿಸಿ ಅಪಾರ್ಟ್‌ಮೆಂಟ್‌ ನಿರ್ಮಿಸಲು ಸ್ಟುಡಿಯೋ ಮಾಲೀಕರು ಮುಂದಾಗಿದ್ದಾರೆ. ಮೈಸೂರಿನ ಜಯಲಕ್ಷ್ಮಿಪುರಂನ ಮೈಸೂರು-ಹುಣಸೂರು ಮುಖ್ಯರಸ್ತೆಯ ಅಂದಾಜು 20 ಸಾವಿರ ಚದರಡಿ ವಿಸ್ತೀರ್ಣದಲ್ಲಿ ನಿರ್ಮಿಸಲಾಗಿದ್ದ ಸ್ಟುಡಿಯೋವನ್ನು ನೆಲಸಮಗೊಳಿಸಲಾಗಿದೆ. ಹಲವು ವರ್ಷಗಳಷ್ಟು ಹಳೆಯದಾದ ಕಟ್ಟಡ ಶಿಥಿಲಾವಸ್ಥೆ ತಲುಪಿದ್ದು, ಇದರ ಜತೆಗೆ ಆಧುನಿಕ ತಂತ್ರಜ್ಞಾನದ ಕೊರತೆ, ವರ್ಷದಿಂದ ವರ್ಷಕ್ಕೆ ಚಲನಚಿತ್ರಗಳ ಶೂಟಿಂಗ್‌ ಪ್ರಕ್ರಿಯೆ ಕಡಿಮೆಯಾಗಿದೆ. ಈ ಎಲ್ಲ ಕಾರಣದಿಂದ ಸದರಿ ಜಾಗದಲ್ಲಿದ್ದ ಪ್ರೀಮಿಯರ್‌ ಸ್ಟುಡಿಯೋ ಕಟ್ಟಡವನ್ನು ನೆಲಸಮಗೊಳಿಸಿ, ಅಪಾರ್ಟ್‌ಮೆಂಟ್‌ ನಿರ್ಮಿಸಲು ಕಟ್ಟಡದ ಮಾಲೀಕರು ತೀರ್ಮಾನಿಸಿದ್ದಾರೆ.

ಪ್ರೀಮಿಯರ್‌ ಸ್ಟುಡಿಯೋ ಎಂಬುದು ಬಸವರಾಜಯ್ಯ ಅವರ ಕನಸಾಗಿದ್ದು, 1954ರಲ್ಲಿ ಸ್ಟುಡಿಯೋ ಆರಂಭಿಸಿದರು. ಸುಮಾರು 10 ಎಕರೆಯಷ್ಟು ವಿಶಾಲವಾದ ಪ್ರದೇಶದಲ್ಲಿ 7 ಅಂತಸ್ತುಗಳ ಬೃಹತ್‌ ಸ್ಟುಡಿಯೋ ನಿರ್ಮಾಣಗೊಂಡಿತು. ಏಕಕಾಲದಲ್ಲಿ 7 ಚಿತ್ರಗಳನ್ನು ಚಿತ್ರೀಕರಿಸುವಷ್ಟು ಸೌಲಭ್ಯಗಳಿದ್ದ ಸ್ಟುಡಿಯೋ ಚಿತ್ರ ನಿರ್ಮಾಣಕ್ಕೆ ಬೇಕಾದ ಹಲವು ಸೌಲಭ್ಯಗಳನ್ನುಇಲ್ಲಿತ್ತು. 

ಕನ್ನಡ ಚಿತ್ರರಂಗದ ಮೇರುನಟ ಡಾ. ರಾಜ್‌ಕುಮಾರ್‌, ವಿಷ್ಣುವರ್ಧನ್‌, ಅಂಬರೀಶ್‌, ಅನಂತನಾಗ್‌, ಶಂಕರ್‌
ನಾಗ್‌ ಹೀಗೆ ಹಲವು ಖ್ಯಾತ ನಟರ ಚಿತ್ರಗಳ ಚಿತ್ರೀಕರಣಕ್ಕೆ ಪ್ರೀಮಿಯರ್‌ ಸ್ಟುಡಿಯೋ ಸಾಕ್ಷಿಯಾಗಿತ್ತು. ಕೇವಲ ಕನ್ನಡ
ಮಾತ್ರವಲ್ಲದೆ ತುಮಿಳು, ತೆಲುಗು, ಹಿಂದಿ ಚಿತ್ರಗಳು ಇಲ್ಲೇ ಚಿತ್ರೀಕರಣಗೊಂಡಿವೆ. ಅಲ್ಲದೆ ಇಂಗ್ಲಿಷ್‌ ಸಿನಿಮಾ “ದಿ
ಎಲಿಫೆಂಟ್‌’ ಚಿತ್ರದ ಶೂಟಿಂಗ್‌ ಸಹ ಇದೇ ಸ್ಟುಡಿಯೋದಲ್ಲಿ ನಡೆದಿದ್ದು ವಿಶೇಷ.

Advertisement

Udayavani is now on Telegram. Click here to join our channel and stay updated with the latest news.

Next