Advertisement

Covaxin ಸೈಡ್‌ಎಫೆಕ್ಟ್ ವರದಿಗೆ ಐಸಿಎಂಆರ್‌ ಕಿಡಿ

01:22 AM May 21, 2024 | Team Udayavani |

ಹೊಸದಿಲ್ಲಿ: ಸ್ವದೇಶಿ ಕೋವಿಡ್‌ ಲಸಿಕೆ ಕೋವ್ಯಾಕ್ಸಿನ್‌ನಿಂದಲೂ ಗಂಭೀರ ಅಡ್ಡ ಪರಿ ಣಾ ಮಗಳಾಗುತ್ತಿವೆ ಎಂಬ ಬನಾರಸ್‌ ಹಿಂದೂ ವಿವಿ (ಬಿಎಚ್‌ಯು) ಸಂಶೋಧನಾ ವರದಿಯಿಂದ ಭಾರತೀಯ ವೈದ್ಯಕೀಯ ಸಂಶೋಧನ ಸಮಿತಿ (ಐಸಿಎಂಆರ್‌) ಅಂತರ ಕಾಯ್ದುಕೊಂಡಿದೆ.

Advertisement

ಅಲ್ಲದೇ, ತಪ್ಪು ವರದಿ ನೀಡಿದ್ದಕ್ಕಾಗಿ ಕ್ಷಮೆ ಕೋರಬೇಕೆಂದೂ ಆಗ್ರಹಿಸಿದೆ. ಬನಾರಸ್‌ ವಿವಿಯ ಇಬ್ಬರು ಪ್ರಾ ಧ್ಯಾಪಕರು ಕೋವ್ಯಾಕ್ಸಿನ್‌ ಪಡೆದವರ ಪೈಕಿ 926 ಮಂದಿ ಗಂಭೀರ ಅಡ್ಡ ಪರಿಣಾಮವನ್ನು ಎದುರಿಸುತ್ತಿದ್ದಾರೆಂದು ತಮ್ಮ ವರದಿಯಲ್ಲಿ ತಿಳಿಸಿ ದ್ದರು.

ವರದಿಯಲ್ಲಿ ಲಸಿಕೆ ಪಡೆಯದವರ ಜತೆ ಲಸಿಕೆ ಪಡೆದವರ ಗಂಭೀರ ಅಡ್ಡ ಪರಿಣಾಮಗಳನ್ನು (ಎಇಎಸ್‌ಐ) ಹೋಲಿಕೆ ಮಾಡಲಾಗಿಲ್ಲ. ಆದ್ದರಿಂದ ಅಡ್ಡ ಪರಿಣಾಮಗಳಿಗೂ ಮತ್ತು ಕೋವ್ಯಾಕ್ಸಿನ್‌ ಲಸಿಕೆಗೆ ಸಂಬಂಧ ಕಲ್ಪಿಸುವುದು ತರವಲ್ಲ ಎಂದು ಐಸಿಎಂಆರ್‌ ಪ್ರಧಾನ ನಿರ್ದೇಶಕ ರಾಜೀವ್‌ ಬಹಲ್‌ ಹೇಳಿದ್ದಾರೆ. ಅಲ್ಲದೆ, ವರದಿಯ ತನ್ನ ಸಂಗತಿಗಳಿಗೆ ಯಾವುದೇ ಪೂರಕ ಹಿನ್ನಲೆಯನ್ನು ಒದಗಿಸಿಲ್ಲ. ಅಂದರೆ, ಲಸಿಕೆ ಪಡೆಯುವುದಕ್ಕಿಂತ ಮುಂಚಿನ ಡೇಟಾ ನೀಡಿಲ್ಲ ಎಂದೂ ಅವರು ತಿಳಿಸಿದ್ದಾರೆ. ಸಂಶೋಧಕರು ತಪ್ಪೊಪ್ಪಿಗೆ ಪ್ರಕಟಿಸಬೇಕು ಎಂದು ಅವರು ಆಗ್ರಹಿಸಿದ್ದಾರೆ.

 

Advertisement

Udayavani is now on Telegram. Click here to join our channel and stay updated with the latest news.

Next