Advertisement
ಪ್ಲಾಸ್ಮಾ ಥೆರಪಿ ಅಳವಡಿಸಿಕೊಳ್ಳಲು ಅನುಮತಿ ನೀಡಲು ಐಸಿಎಂಆರ್‌ಗೆ ರಾಜ್ಯ ಮನವಿ ಮಾಡಿತ್ತು. ಇದಕ್ಕೆ ಸ್ಪಂದಿಸಿದ ಐಸಿಎಂಆರ್ ಎಚ್‌ಸಿಜಿ ಬೆಂಗಳೂರು ಇನ್ಸ್ಟಿಟ್ಯೂಟ್ ಆಫ್ ಆಂಕಾಲಾಜಿಯ ಡಾ|ವಿಶಾಲ್ ರಾವ್ ನೇತೃತ್ವದ ತಜ್ಞ ವೈದ್ಯರ ತಂಡದಿಂದ ಪ್ಲಾಸ್ಮಾ ಚಿಕಿತ್ಸೆ ಅಧ್ಯಯನ ಆರಂಭಿಸಲು ಅನುಮತಿ ನೀಡಿದೆ.
Related Articles
ಕೋವಿಡ್ 19 ವೈರಸ್ ನಿಂದ ಚೇತರಿಸಿಕೊಂಡವರ ದೇಹದಿಂದ ರಕ್ತ ಪಡೆದು ಅದರಲ್ಲಿನ ರೋಗ ನಿರೋಧಕ ಕಣಗಳನ್ನು (ಪ್ಲಾಸ್ಮಾ) ಬೇರ್ಪಡಿಸಿ ಅದನ್ನು ಮತ್ತೂಬ್ಬ ಸೋಂಕಿತ ರೋಗಿಯ ದೇಹಕ್ಕೆ ಸೇರಿಸುತ್ತಾರೆ.
Advertisement
ಒಬ್ಬ ವ್ಯಕ್ತಿಯ ದೇಹದಿಂದ ರೋಗ ನಿರೋಧಕ ಕಣ ತೆಗೆದು, ಒಂದು ಡೋಸ್‌ನಂತೆ ಇಬ್ಬರು ರೋಗಿಗಳಿಗೆ ನೀಡಬಹುದಾಗಿದೆ. ಕೋವಿಡ್ 19 ವೈರಸ್ ನಿಂದ ಚೇತರಿಸಿಕೊಂಡವರ ದೇಹದಲ್ಲಿ ವೈರಾಣು ವಿರುದ್ಧ ಹೋರಾಡಿದ್ದ ಕಣಗಳು, ಇನ್ನೊಬ್ಬರ ದೇಹ ಸೇರಿದಾಗ ಹೋರಾಟ ಮುಂದುವರಿಸುತ್ತವೆ.
ಜತೆಗೆ ಆ ರೋಗಿಯ ದೇಹದಲ್ಲೂ ರೋಗ ನಿರೋಧಕ ಕಣಗಳನ್ನು ಸಕ್ರಿಯವಾಗಿಸುತ್ತವೆ. ಇದರಿಂದ ಆ ರೋಗಿ ಕೂಡ ಸೋಂಕಿನಿಂದ ಚೇತರಿಸಿಕೊಳ್ಳಬಹುದು.