Advertisement

ಐಸ್ ಸ್ಟಾಕ್ ಚಾಂಪಿಯನ್ ಶಿಪ್ : ಭಾರತದ ಪ್ರಗತಿ ಹುಡೇದ್ ನೇತೃತ್ವದ ತಂಡಕ್ಕೆ ಮೊದಲೆರಡು ಗೆಲುವು

12:24 PM Feb 17, 2022 | Team Udayavani |

ಗಂಗಾವತಿ :ಇಟಾಲಿ ದೇಶದಲ್ಲಿ ಆಯೋಜನೆಗೊಂಡಿರುವ ವಿಶ್ವ ಟಾಪ್ ಚಾಂಪಿಯನ್ ಶಿಫ್ ಸ್ಪರ್ಧೆಯಲ್ಲಿ ಗಂಗಾವತಿಯ ಪ್ರಗತಿ ಮಂಜುನಾಥ ಹುಡೇದ ನೇತೃತ್ವದ ಟೀಮ್ ಮೊದಲೆರಡು ಲೀಗ್ ಸ್ಪರ್ಧೆಯಲ್ಲಿ ಗೆಲುವು ಪಡೆದಿದೆ.

Advertisement

ಐಸ್ಸಾಕ್ಟ್ ಸ್ಪರ್ಧೆ ಪ್ರತಿ ವರ್ಷ ಮಂಜು ಬೀಳುವ ದೇಶದಲ್ಲಿ ನಡೆಯುತ್ತದೆ ಇತ್ತೀಚೆಗೆ ಈ ಕ್ರೀಡೆ ಒಲಿಂಪಿಕ್ಸ್ ಗೆ ಸೇರ್ಪಡೆಯಾಗಿದೆ .ಫೆ.14-19 ರ ವರೆಗೆ ಆಯೋಜನೆಗೊಂಡಿರುವ ವಿಶ್ವ ಐಸ್ಸಾಕ್ಟ್
ಚಾಂಪಿಯನ್ ಸ್ಪರ್ಧೆಯಲ್ಲಿ ಭಾರತವನ್ನು ಪ್ರತಿನಿಧಿಸುತ್ತಿರುವ ಪ್ರಗತಿ ಮಂಜುನಾಥ ಹುಡೇದ, ಧ್ಯಾನ್ ಸಿರಿಗೇರಿ, ಗಗನ್ ಸಿರಿಗೇರಿ ,ಸುಖಾನ ಸಿರಿಗೇರಿ ಸೇರಿದಂತೆ ಭಾರತದಿಂದ 20 ಕ್ರೀಡಾಪಟುಗಳು ಈ ಸ್ಪರ್ಧೆಯಲ್ಲಿ ಪಾಲ್ಗೊಂಡಿದ್ದಾರೆ .

ಗಂಗಾವತಿಯ ಹೆಮ್ಮೆಯ ಕುವರಿ ಪ್ರಗತಿ ಹುಡೇದ್ ಭಾರತದ ಧ್ವಜವನ್ನು ಹಿಡಿದು ಈ ಸ್ಪರ್ಧೆಯಲ್ಲಿ ಪಥಸಂಚಲದಲ್ಲಿ ಪಾಲ್ಗೊಂಡಿದ್ದರು .

ದೂರವಾಣಿ ಮೂಲಕ ಉದಯವಾಣಿ ಜತೆ ಪ್ರಗತಿ ಹುಡೇದ್ ಮಾತನಾಡಿ ವಿಶ್ವ ಐಸ್ ಸ್ಟಾಕ್ ಚಾಂಪಿಯನ್ ಸ್ಪರ್ಧೆಯಲ್ಲಿ ಇಪ್ಪತ್ತು ಜನ ಭಾರತೀಯರು ಸ್ಪರ್ಧೆ ಮಾಡುತ್ತಿದ್ದು ಈ ಬಾರಿ ಪ್ರಶಸ್ತಿ ನಿರೀಕ್ಷೆ ಮಾಡಲಾಗಿದೆ ನಮಗೆ ಉತ್ತಮ ತರಬೇತಿಯನ್ನು ಜಮ್ಮು ಕಾಶ್ಮೀರದಲ್ಲಿ ನೀಡಲಾಗಿದೆ. ಈ ಕ್ರೀಡೆಗೆ ಇನ್ನಷ್ಟು ಪ್ರೋತ್ಸಾಹ ಬೇಕಾಗಿದೆ .

ಪ್ರಸ್ತುತ ಇಟಲಿಯಲ್ಲಿ ನಡೆದಿರುವ ವಿಶ್ವ ಐಸಾಕ್ ಸ್ಪರ್ಧೆಗೆ ಬಂದಿರುವ 20 ಕ್ರೀಡಾಪಟುಗಳಿಗೆ ಕರ್ನಾಟಕ ಸರ್ಕಾರ ,ಭಾರತ ಸರ್ಕಾರ ಮತ್ತು ನಮ್ಮ ಪಾಲಕರು ಶಿಕ್ಷಕರನ್ನು ಪ್ರೋತ್ಸಾಹ ನೀಡಿದ್ದು ಅವರ ನಿರೀಕ್ಷೆಯಂತೆ ಪ್ರಶಸ್ತಿಯನ್ನು ಪಡೆಯುತ್ತಿವೆ. ಖಂಡಿತವಾಗಿ ಈ ಬಾರಿ ಭಾರತಕ್ಕೆ ಪ್ರಶಸ್ತಿಯನ್ನು ತರುವುದಾಗಿ ಹೆಮ್ಮೆಯಿಂದ ಹೇಳಿದರು .

Advertisement

ಇದನ್ನೂ ಓದಿ : ಹಿಜಾಬ್ ವಿವಾದ: ದಾವಣಗೆರೆಯಲ್ಲಿ 60ಕ್ಕೂ ಹೆಚ್ಚು ವಿದ್ಯಾರ್ಥಿಗಳಿಂದ ತರಗತಿ ಬಹಿಷ್ಕಾರ

Advertisement

Udayavani is now on Telegram. Click here to join our channel and stay updated with the latest news.

Next