Advertisement

ICC ವಿಶ್ವ ಟೆಸ್ಟ್‌ ಚಾಂಪಿಯನ್‌ಶಿಪ್‌ : ಜೂ.2 ರಂದು ಭಾರತ ತಂಡ ಇಂಗ್ಲೆಂಡ್‌ಗೆ

12:05 AM May 09, 2021 | Team Udayavani |

ಹೊಸದಿಲ್ಲಿ : ಐಸಿಸಿ ವಿಶ್ವ ಟೆಸ್ಟ್‌ ಚಾಂಪಿಯನ್‌ಶಿಪ್‌ ಫೈನಲ್‌ ಮತ್ತು ಅನಂತರ ಇಂಗ್ಲೆಂಡ್‌ ವಿರುದ್ಧ ಆಡಲಾಗುವ ಟೆಸ್ಟ್‌ ಸರಣಿಗಾಗಿ ಭಾರತ ತಂಡ ಜೂ. ಎರಡರಂದು ಯು.ಕೆ. ವಿಮಾನ ಏರಲಿದೆ.

Advertisement

ಇದೊಂದು ಸುದೀರ್ಘ‌ ಸರಣಿಯಾದ ಕಾರಣ ಕ್ರಿಕೆಟಿಗರ ಕುಟುಂಬದವರಿಗೂ ಇಂಗ್ಲೆಂಡಿಗೆ ತೆರಳಲು ಅನುಮತಿ ನೀಡಲಾಗಿದೆ. ಆದರೆ ಪತ್ನಿ, ಮಕ್ಕಳೆಲ್ಲ ಆರಂಭದಲ್ಲೇ ಕ್ರಿಕೆಟಿಗರ ಜತೆ ಇರುತ್ತಾರೋ ಅಥವಾ ಪ್ರವಾಸದ ಮಧ್ಯ ಭಾಗದಲ್ಲಿ ಸೇರಿಕೊಳ್ಳುತ್ತಾರೋ ಎಂಬುದು ಇನ್ನೂ ಖಾತ್ರಿಯಾಗಿಲ್ಲ.

ಇಂಗ್ಲೆಂಡಿಗೆ ತೆರಳುವ ಮುನ್ನ ಎಲ್ಲರೂ ಮುಂಬಯಿಯಲ್ಲಿ 8 ದಿನ ಕ್ವಾರಂಟೈನ್‌ಗೆ ಒಳಗಾಗಬೇಕಿದೆ. ಲಂಡನ್‌ಗೆ ಬಂದಿಳಿದ ಬಳಿಕ ಮತ್ತೆ 10 ದಿನಗಳ ಸಾಫ್ಟ್ ಕ್ವಾರಂಟೈನ್‌ ಇರಲಿದೆ. ಆದರೆ “ಬಬಲ್‌ ಟು ಬಬಲ್‌’ ಪ್ರಯಾಣವಾದ ಕಾರಣ ಲಂಡನ್‌ ಕ್ವಾರಂಟೈನ್‌ ಅವಧಿಯನ್ನು ಕಡಿಮೆಗೊಳಿಸಲು ಬಿಸಿಸಿಐ ಪ್ರಯತ್ನಿಸಲಿದೆ.

ಭಾರತದ ಕ್ರಿಕೆಟಿಗರೆಲ್ಲ ಸೌತಾಂಪ್ಟನ್‌ನ “ಹಿಲ್ಟನ್‌ ಹೊಟೇಲ್‌’ ನಲ್ಲಿ ಉಳಿದುಕೊಳ್ಳಲಿದ್ದಾರೆ. ಸಾಫ್ಟ್ ಕ್ವಾರಂಟೈನ್‌ ಅವಧಿಯಲ್ಲಿ ಆಟಗಾರರ ಅಭ್ಯಾಸಕ್ಕೇನೂ ಅಡ್ಡಿ ಇರದು.

ಗಂಗೂಲಿ, ಶಾ ಪಯಣ
ಭಾರತ-ನ್ಯೂಜಿಲ್ಯಾಂಡ್‌ ನಡುವಿನ ಐಸಿಸಿ ವಿಶ್ವ ಟೆಸ್ಟ್‌ ಚಾಂಪಿಯನ್‌ಶಿಪ್‌ ಫೈನಲ್‌ ವೀಕ್ಷಿಸಲು ಬಿಸಿಸಿಐ ಅಧ್ಯಕ್ಷ ಸೌರವ್‌ ಗಂಗೂಲಿ ಮತ್ತು ಕಾರ್ಯದರ್ಶಿ ಜಯ್‌ ಶಾ ಇಂಗ್ಲೆಂಡಿಗೆ ತೆರಳಲಿದ್ದಾರೆ. ಹಾಗೆಯೇ ಉಳಿದ 31 ಐಪಿಎಲ್‌ ಪಂದ್ಯಗಳನ್ನು ಇಂಗ್ಲೆಂಡ್‌ನ‌ಲ್ಲಿ ಆಯೋಜಿಸುವ ಕುರಿತು ಇವರು ಇಸಿಬಿ ಜತೆ ಮಾತುಕತೆ ನಡೆಸಲಿದ್ದಾರೆ ಎಂದು ತಿಳಿದು ಬಂದಿದೆ.

Advertisement

ಲಸಿಕೆ ಕಡ್ಡಾಯ
ಇಂಗ್ಲೆಂಡಿಗೆ ವಿಮಾನ ಏರುವ ಮೊದಲು ಕ್ರಿಕೆಟಿಗರೆಲ್ಲ ಮೊದಲ ಸುತ್ತಿನ ವ್ಯಾಕ್ಸಿನ್‌ ಪಡೆಯಬೇಕೆಂದು ಬಿಸಿಸಿಐ ಸೂಚಿಸಿದೆ. ಆದರೆ ಪಾಸಿಟಿವ್‌ ಫ‌ಲಿತಾಂಶ ಹೊಂದಿರುವ ಪ್ರಸಿದ್ಧ್ ಕೃಷ್ಣ ಅವರಿಗೆ ಇದು ಸಾಧ್ಯವಾಗದು.

ಭಾರತದಲ್ಲೇ ಮೊದಲ ಸುತ್ತಿನಲ್ಲಿ ಕೊವಿಶೀಲ್ಡ್‌ ಲಸಿಕೆ ಪಡೆದರೆ ಇಂಗ್ಲೆಂಡ್‌ನ‌ಲ್ಲಿ ಎರಡನೇ ಸುತ್ತಿನ ಲಸಿಕೆ ಹಾಕಿಸಿಕೊಳ್ಳಬಹುದಾಗಿದೆ. ಆದರೆ ಅದು ಆಕ್ಸ್‌ಫ‌ರ್ಡ್‌ ವ್ಯಾಕ್ಸಿನ್‌ ಆಗಿರುತ್ತದೆ.

Advertisement

Udayavani is now on Telegram. Click here to join our channel and stay updated with the latest news.

Next