ಕೊಲಂಬೊ: ಕೆಲವೇ ದಿನಗಳಲ್ಲಿ ಆರಂಭವಾಗಲಿರುವ ಐಸಿಸಿ ಏಕದಿನ ವಿಶ್ವಕಪ್ ಗೆ ಶ್ರೀಲಂಕಾ ತಂಡ ಪ್ರಕಟಿಸಲಾಗಿದೆ. ದಾಸುನ್ ಶನಕ ನಾಯಕತ್ವದಲ್ಲಿ 15 ಆಟಗಾರರ ತಂಡ ಪ್ರಕಟಿಸಿದ್ದು, ಗಾಯಗೊಂಡಿರುವ ಸ್ಪಿನ್ನರ್ ಗಳಾದ ವಾನಿಂದು ಹಸರಂಗ, ದಿಲ್ಶನ್ ಮಧುಶನಕ ಮತ್ತು ಮಹೇಶ ತೀಕ್ಷಣ ಅವರನ್ನು ಸೇರಿಸಲಾಗಿದೆ.
ಸಿಂಹಳೀಸ್ ತಂಡವನ್ನು ದಾಸುನ್ ಶನಕ ಅವರು ಮುನ್ನಡೆಸಲಿದ್ದು, ಕುಸಾಲ್ ಮೆಂಡಿಸ್ ಅವರು ಉಪ ನಾಯಕರಾಗಿದ್ದಾರೆ.
ಇದೇ ವೇಳೆ ಹಿರಿಯ ಆಲ್ ರೌಂಡರ್ ಆ್ಯಂಜಲೋ ಮ್ಯಾಥ್ಯೂಸ್ ಅವರಿಗೆ ವಿಶ್ವಕಪ್ ತಂಡದಲ್ಲಿ ಸ್ಥಾನ ಸಿಕ್ಕಿಲ್ಲ. ಏಷ್ಯಾ ಕಪ್ ಗೂ 36ರ ಹರೆಯದ ಆಲ್ ರೌಂಡರ್ ಆಯ್ಕೆಯಾಗಿರಲಿಲ್ಲ. ಉತ್ತಮ ಫಾರ್ಮ್ ನಲ್ಲಿರದ ದಿಮುತ್ ಕರುಣರತ್ನೆ ಅವರು ಸ್ಥಾನ ಉಳಿಸಿಕೊಳ್ಳುವಲ್ಲಿ ಸಫಲರಾಗಿದ್ದಾರೆ.
15 ಜನರ ತಂಡದೊಂದಿಗೆ ದುಶಾನ್ ಹೇಮಂತ ಮತ್ತು ಚಮಿಕ ಕರುಣರತ್ನೆ ಅವರು ಮೀಸಲು ಆಟಗಾರರಾಗಿ ಭಾರತಕ್ಕೆ ಪ್ರಯಾಣಿಸಲಿದ್ದಾರೆ.
ಶ್ರೀಲಂಕಾದ ಏಕದಿನ ವಿಶ್ವಕಪ್ ಅಭಿಯಾನವು ಅಕ್ಟೋಬರ್ 7 ರಂದು ದೆಹಲಿಯಲ್ಲಿ ದಕ್ಷಿಣ ಆಫ್ರಿಕಾ ವಿರುದ್ಧ ಪ್ರಾರಂಭವಾಗಲಿದೆ. ನಂತರ ಅಕ್ಟೋಬರ್ 10 ರಂದು ಹೈದರಾಬಾದ್ ನಲ್ಲಿ ಪಾಕಿಸ್ತಾನ ವಿರುದ್ಧ ಆಡಲಿದೆ.
ಶ್ರೀಲಂಕಾ ತಂಡ: ದಾಸುನ್ ಶನಕ (ನಾ), ಕುಸಲ್ ಮೆಂಡಿಸ್ (ಉ.ನಾ), ಪಾತ್ತುಮ್ ನಿಸ್ಸಾಂಕ, ಕುಸಲ್ ಪೆರೇರಾ, ದಿಮುತ್ ಕರುಣಾರತ್ನ, ಚರಿತ್ ಅಸಲಂಕ, ದನಂಜಯ ಡಿ ಸಿಲ್ವ, ಸದೀರ ಸಮರವಿಕ್ರಮ, ದುನಿತ್ ವೆಲ್ಲಲಗೆ, ಕಸುನ್ ರಜಿತ, ಮತೀಶ ಪತಿರಣ ಮತ್ತು ಲಹಿರು ಕುಮಾರ.
ಫಿಟ್ ನೆಸ್: ವಾನಿಂದು ಹಸರಂಗ, ಮಹೇಶ್ ತೀಕ್ಷಣ ಮತ್ತು ದಿಲ್ಶನ್ ಮಧುಶಂಕ
ಪ್ರಯಾಣ ಮೀಸಲು: ದುಶಾನ್ ಹೇಮಂತ ಮತ್ತು ಚಾಮಿಕಾ ಕರುಣಾರತ್ನೆ