Advertisement

ICC World Cup 2023; ಭಾರತ-ಆಸೀಸ್ ಪಂದ್ಯಕ್ಕೆ ಜಾರ್ವೋ ಕಾಟ

03:59 PM Oct 08, 2023 | Team Udayavani |

ಚೆನ್ನೈ: ಎರಡು ವರ್ಷಗಳ ಹಿಂದೆ ಭಾರತ-ಇಂಗ್ಲೆಂಡ್ ಟೆಸ್ಟ್ ಸರಣಿಯಲ್ಲಿ ಕಾಣಿಸಿಕೊಂಡಿದ್ದ ಜಾರ್ವೋ ಎಂಬ ಪಿಚ್ ಆಕ್ರಮಣಕಾರ ಚೆನ್ನೈನಲ್ಲಿ ನಡೆಯುತ್ತಿರುವ 2023 ರ ವಿಶ್ವಕಪ್ ಪಂದ್ಯದಲ್ಲಿ ಆಸ್ಟ್ರೇಲಿಯಾ ವಿರುದ್ಧ ಮತ್ತೆ ಕಾಣಿಸಿಕೊಂಡಿದ್ದಾನೆ. ಪಂದ್ಯ ಆರಂಭವಾದ ಕೆಲವೇ ಕ್ಷಣಗಳಲ್ಲಿ ಅವರು ಮೈದಾನಕ್ಕೆ ಆಗಮಿಸಿದ್ದು, ಭಾರತದ ಬ್ಯಾಟಿಂಗ್ ಸ್ಟಾರ್ ವಿರಾಟ್ ಕೊಹ್ಲಿ ಅವರೊಂದಿಗೆ ಮಾತನಾಡುವು ಕಂಡು ಬಂತು.

Advertisement

2021 ರ ಇಂಗ್ಲೆಂಡ್ ಪ್ರವಾಸದ ಸಮಯದಲ್ಲಿ ಜಾರ್ವೋ ಮೊದಲ ಬಾರಿ ಗಮನ ಸೆಳೆದಿದ್ದ. ಲಂಡನ್‌ ನಲ್ಲಿ ನಡೆದ ಓವಲ್ ಟೆಸ್ಟ್‌ ನಲ್ಲಿ, ಅವರು ಭಾರತೀಯ ಜೆರ್ಸಿಯನ್ನು ಧರಿಸಿ ಪಿಚ್‌ನಲ್ಲಿ ಕಾಣಿಸಿಕೊಂಡಿದ್ದ. ಈ ವೇಳೆ ಇಂಗ್ಲೆಂಡ್ ಕೀಪರ್-ಬ್ಯಾಟರ್ ಜಾನಿ ಬೈರ್‌ಸ್ಟೋವ್‌ ಗೆ ಡಿಕ್ಕಿ ಹೊಡೆದಿದ್ದ. ಈ ಕಾರಣಕ್ಕೆ ಜಾರ್ವೋಗೆ ಶಿಕ್ಷೆ ವಿಧಿಸಲಾಗಿತ್ತು.

ಇದೀಗ ಮತ್ತೆ ಚೆನ್ನೈನಲ್ಲಿ ವಿಶ್ವಕಪ್ ಪಂದ್ಯದ ವೇಳೆ ಜಾರ್ವೋ ಕಾಣಿಸಿಕೊಂಡಿದ್ದಾನೆ. ಭಾರತ ತಂಡದ ಅಭಿಯಾನಿಯಾಗಿರುವ ಜಾರ್ವೋ ಟೀಂ ಇಂಡಿಯಾ ಜೆರ್ಸಿ ಧರಿಸಿದ್ದ. ಕೂಡಲೇ ಅಧಿಕಾರಿಗಳು ಮತ್ತು ಗ್ರೌಂಡ್ ಸ್ಟಾಫ್ ಮೈದಾನದಿಂದ ಜಾರ್ವೋನನ್ನು ಹೊರಕ್ಕೆ ಕಳುಹಿಸಿದರು.

Advertisement
Advertisement

Udayavani is now on Telegram. Click here to join our channel and stay updated with the latest news.

Next