Advertisement
ಗೆಲ್ಲಲು 114 ರನ್ ಗಳ ಗುರಿಯನ್ನು ಪಡೆದ ಹರ್ಮನ್ ಪ್ರೀತ್ ಕೌರ್ ಪಡೆ ಶೆಫಾಲಿ ಶರ್ಮಾ (47) ಅವರ ಉತ್ತಮ ಬ್ಯಾಟಿಂಗ್ ನೆರವಿನಿಂದ ಈ ಗುರಿಯನ್ನು ಕೇವಲ 3 ವಿಕೆಟ್ ಗಳನ್ನು ಕಳೆದುಕೊಂಡು 14.4 ಓವರ್ ಗಳಲ್ಲೇ ತಲುಪಿ ಗೆಲುವಿನ ನಗುವನ್ನು ಬೀರಿತು.ಮೊದಲು ಬ್ಯಾಟಿಂಗ್ ಮಾಡಿದ ಶ್ರೀಲಂಕಾ ಮಹಿಳಾ ಕ್ರಿಕೆಟ್ ಆಟಗಾರರು ನಿಗದಿತ 20 ಓವರ್ ಗಳಲ್ಲಿ 9 ವಿಕೆಟ್ ಗಳನ್ನು ಕಳೆದುಕೊಂಡು 113 ರನ್ ಗಳಿಸಿದರು. 33 ರನ್ ಗಳಿಸಿದ ಚಾಮರಿ ಅಟ್ಟಪಟ್ಟು ಅವರದ್ದೇ ಲಂಕಾ ಪರ ಗರಿಷ್ಠ ಗಳಿಕೆ. ಟೈಲ್ ಎಂಡ್ ನಲ್ಲಿ ಕವಿಶಾ ದಿಲ್ಹಾರಿ 16 ಎಸೆತಗಳಲ್ಲಿ 25 ರನ್ ಬಾರಿಸಿದರು.