Advertisement

ಟೆಸ್ಟ್‌ ರ್‍ಯಾಂಕಿಂಗ್‌: ನಿಷೇಧಿತ ಸ್ಟೀವ್‌ ಸ್ಮಿತ್‌ ಈಗಲೂ ನಂ.1

06:00 AM Jun 20, 2018 | Team Udayavani |

ದುಬಾೖ: ಐಸಿಸಿಯ ನೂತನ ಟೆಸ್ಟ್‌ ಕ್ರಿಕೆಟ್‌ ರ್‍ಯಾಂಕಿಂಗ್‌ ಬಿಡುಗಡೆಯಾಗಿದೆ. ಅಚ್ಚರಿಯೆಂದರೆ ಚೆಂಡು ವಿರೂಪ ಪ್ರಕರಣದಡಿ ಒಂದು ವರ್ಷ ನಿಷೇಧಕ್ಕೊಳಗಾಗಿದ್ದರೂ ಆಸ್ಟ್ರೇಲಿಯಾದ ಮಾಜಿ ನಾಯಕ ಸ್ಟೀವ್‌ ಸ್ಮಿತ್‌ ಈಗಲೂ ನಂ.1 ಸ್ಥಾನದಲ್ಲೇ ಇದ್ದಾರೆ. ಭಾರತ ತಂಡದ ನಾಯಕ ವಿರಾಟ್‌ ಕೊಹ್ಲಿ ವಿಶ್ವ ನಂ.2ನೇ ಸ್ಥಾನದಲ್ಲಿದ್ದಾರೆ. 

Advertisement

ಭಾರತ ತಂಡದ ಆರಂಭಿಕ ಆಟಗಾರ ಶಿಖರ್‌ ಧವನ್‌ ಅಫ್ಘಾನಿಸ್ಥಾನ ವಿರುದ್ಧ ದಾಖಲೆಯ ಶತಕ ಬಾರಿಸಿದ ಪರಿಣಾಮ ಜೀವನಶ್ರೇಷ್ಠ 24ನೇ ಸ್ಥಾನಕ್ಕೇರಿದ್ದಾರೆ. ಅದೇ ಪಂದ್ಯದ ಮತ್ತೂಬ್ಬ ಶತಕವೀರ ಮುರಳಿ ವಿಜಯ್‌ 23ನೇ ಸ್ಥಾನಕ್ಕೇರಿದ್ದಾರೆ.  ಅಫ್ಘಾನಿಸ್ಥಾನ ವಿರುದ್ಧ 6 ವಿಕೆಟ್‌ ಗಳಿಸಿದ ರವೀಂದ್ರ ಜಡೇಜ 1 ಸ್ಥಾನ ಮೇಲೇರಿ 3ರಲ್ಲಿ ನಿಂತಿದ್ದಾರೆ. ಮತ್ತೂಂದು ಕಡೆ ವಿಶ್ವವಿಖ್ಯಾತ ರವಿಚಂದ್ರನ್‌ ಅಶ್ವಿ‌ನ್‌ 6ನೇ ಸ್ಥಾನದಲ್ಲೇ ಉಳಿದಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next