Advertisement

QS World University Ranking: ಜೆಎನ್‌ಯು ದೇಶದ ನಂ.1 ವಿಶ್ವ ವಿದ್ಯಾಲಯ

11:07 PM Apr 10, 2024 | Team Udayavani |

ಹೊಸದಿಲ್ಲಿ: ಲಂಡನ್‌ ಮೂಲದ ಶಿಕ್ಷಣ ತಜ್ಞ ಸಂಸ್ಥೆ ಕ್ವಾಕೆರಲಿ ಸೈಮಂಡ್ಸ್‌ (ಕ್ಯೂಎಸ್‌) ಜಾಗತಿಕ ವಿಶ್ವ ವಿದ್ಯಾಲಯ ಗಳ 2024ನೇ ಸಾಲಿನ ರ್‍ಯಾಂಕಿಂಗ್‌ ಅನ್ನು ಬಿಡುಗಡೆಗೊಳಿಸಿದ್ದು, ಈ ಪೈಕಿ ಭಾರ ತದ ಜವಾಹರ್‌ ಲಾಲ್‌ ನೆಹರು ವಿಶ್ವ ವಿದ್ಯಾಲಯವು ಅಗ್ರ 20ನೇ ಸ್ಥಾನವನ್ನು ಕಾಯ್ದಿರಿಸಿಕೊಂಡಿದೆ. ಈ ಮೂಲಕ ದೇಶದ ನಂ.1 ವಿವಿ ಎಂಬ ಖ್ಯಾತಿಗೂ ಪಾತ್ರವಾಗಿದೆ. ಮ್ಯಾನೇ ಜ್‌ಮೆಂಟ್‌ ಅಧ್ಯಯನ ವಿಭಾಗದಲ್ಲಿ ಅಹ್ಮದಾ ಬಾದ್‌ನ ಇಂಡಿಯನ್‌ ಇನ್‌ಸ್ಟಿಟ್ಯೂಟ್‌ ಆಫ್ ಮ್ಯಾನೇಜೆ¾ಂಟ್‌ ಅಗ್ರ 25ರಲ್ಲಿ ಸ್ಥಾನ ಪಡೆದರೆ ಐಐಎಂ-ಬೆಂಗಳೂರು, ಐಐಎಂ ಕೋಲ್ಕತಾ ಅಗ್ರ 50ರಲ್ಲಿವೆ.

Advertisement

5 ಪ್ರಮುಖ ವಿಭಾಗದಲ್ಲಿ 55 ಪ್ರಮುಖ ವಿಷಯಗಳನ್ನು ಆಧರಿಸಿ 1,559 ವಿವಿಗಳಿಗೆ ರ್‍ಯಾಂಕಿಂಗ್‌ ನೀಡಲಾ ಗಿದೆ. ಈ ಪೈಕಿ ಡೆವಲಪೆ¾ಂಟ್‌ ಸ್ಟಡೀಸ್‌ ವಿಭಾಗದಲ್ಲಿ 20ನೇ ಸ್ಥಾನವನ್ನು ಜೆಎನ್‌ಯು ಪಡೆದುಕೊಂಡಿದೆ. ಶೈಕ್ಷಣಿಕ ಖ್ಯಾತಿ, ಉದ್ಯೋಗ ಖಾತ್ರಿ ಸೇರಿದಂತೆ ವಿವಿಧ ಅಂಶಗಳನ್ನು ಆಧರಿಸಿ ಈ ರ್‍ಯಾಂಕಿಂಗ್‌ ನೀಡಲಾಗಿದೆ. ಎಲ್ಲಾ ವಿಭಾ ಗದಿಂದಲೂ ಸೇರಿ ಜೆಎನ್‌ಯು 83.1 ಅಂಕ ಗಳಿಸಿದೆ. ಇನ್ನು ದಂತವೈದ್ಯ ಶಾಸ್ತ್ರ ವಿಭಾಗದಲ್ಲಿ ಚೆನ್ನೈ ಮೂಲದ ಸವೀತಾ ಇನ್‌ಸ್ಟಿಟ್ಯೂಟ್‌ ಸಂಸ್ಥೆಗೆ ಜಾಗತಿಕವಾಗಿ 25ನೇ ಸ್ಥಾನ ದೊರೆತಿದೆ.

Advertisement

Udayavani is now on Telegram. Click here to join our channel and stay updated with the latest news.

Next