Advertisement

ನಾಳಿನ ಪಂದ್ಯಕ್ಕೆ ಮಳೆ ಬಂದರೆ? ಒಂದು ವೇಳೆ ದ.ಆಫ್ರಿಕಾ ಸೋತರೆ? ಹೇಗಿದೆ ‘ಸೆಮಿ’ಲೆಕ್ಕಾಚಾರ

10:41 AM Nov 05, 2022 | Team Udayavani |

ಮೆಲ್ಬರ್ನ್: ಕಳೆದ ಬುಧವಾರದ ಪಂದ್ಯದಲ್ಲಿ ಭಾರತ ಕ್ರಿಕೆಟ್ ತಂಡವು  ಬಾಂಗ್ಲಾದೇಶವನ್ನು ಸೋಲಿಸುವ ಮೂಲಕ ಐಸಿಸಿ ಟಿ20 ವಿಶ್ವಕಪ್ ನಲ್ಲಿ ಗ್ರೂಪ್ 2ರ ಸೆಮಿಫೈನಲ್ ಅರ್ಹತಾ ರೇಸ್‌ ನಲ್ಲಿ ದೊಡ್ಡ ಮುನ್ನಡೆ ಸಾಧಿಸಿದೆ. ಆದರೆ, ಪಾಕಿಸ್ತಾನ, ಬಾಂಗ್ಲಾದೇಶ ಮತ್ತು ದಕ್ಷಿಣ ಆಫ್ರಿಕಾ ಇನ್ನೂ ಹೋರಾಟದಲ್ಲಿ ಇರುವುದರಿಂದ ಇದುವರೆಗೆ ಅಧಿಕೃತವಾಗಿ ಸೆಮಿ ಪ್ರವೇಶ ಪಡೆದಿಲ್ಲ.

Advertisement

ದ.ಆಫ್ರಿಕಾ ವಿರುದ್ಧ ಪಾಕಿಸ್ತಾನದ ಗೆಲುವು ಸಾಧಿಸಿದ ಬಳಿಕ ಅವರ ಸೆಮಿ ಫೈನಲ್ ಅರ್ಹತೆಯ ಅವಕಾಶ ವ್ಯಾಪಕವಾಗಿ ತೆರೆದಿದೆ. ಸದ್ಯ ಗ್ರೂಪ್ 2ರಲ್ಲಿ ಯಾವುದೇ ತಂಡ ಸೆಮಿ ಫೈನಲ್ ಪ್ರವೇಶಿಸಿಲ್ಲ. ತನ್ನ ಕೊನೆಯ ಸೂಪರ್ 12 ಪಂದ್ಯದಲ್ಲಿ ಜಿಂಬಾಬ್ವೆ ವಿರುದ್ಧ ಗೆದ್ದರೆ ರೋಹಿತ್ ಶರ್ಮಾ ಬಳಗವು ಗ್ರೂಪ್ ವಿನ್ನರ್ ಸ್ಥಾನದೊಂದಿಗೆ ಸೆಮಿ ಪ್ರವೇಶಿಸಲಿದೆ.

ಆದರೆ ಮೆಲ್ಬರ್ನ್ ನಲ್ಲಿ ಮಳೆಯ ಕಾರಣದಿಂದ ಹಲವು ಪಂದ್ಯಗಳು ರದ್ದಾಗಿದೆ. ಹೀಗಾಗಿ ಜಿಂಬಾಬ್ವೆ ವಿರುದ್ಧ ಒಂದು ವೇಳೆ ಮಳೆ ಬಂದರೆ ಭಾರತದ ಸೆಮಿ ಪ್ರವೇಶ ಹೇಗೆ ಎಂಬ ಚಿಂತೆ ಅಭಿಮಾನಿಗಳಿಗೆ ಕಾಡುತ್ತಿದೆ.

ಭಾರತವು ಪ್ರಸ್ತುತ 6 ಅಂಕಗಳೊಂದಿಗೆ ಗುಂಪಿನಲ್ಲಿ ಮೊದಲ ಸ್ಥಾನದಲ್ಲಿದೆ. ದಕ್ಷಿಣ ಆಫ್ರಿಕಾ (5 ಅಂಕಗಳು) ಮತ್ತು ಪಾಕಿಸ್ತಾನ (4 ಅಂಕಗಳು) ಕ್ರಮವಾಗಿ ಎರಡು ಮತ್ತು ಮೂರನೇ ಸ್ಥಾನದಲ್ಲಿವೆ. ಜಿಂಬಾಬ್ವೆ ವಿರುದ್ಧದ ಪಂದ್ಯದಲ್ಲಿ ಮಳೆ ಬಂದು ರದ್ದಾದರೆ ಉಭಯ ತಂಡಗಳು ತಲಾ ಒಂದು ಪಾಯಿಂಟ್ ಹಂಚಿಕೊಳ್ಳುತ್ತವೆ. ಹೀಗಾದಲ್ಲಿ ಭಾರತದ ಅಂಕ 7ಕ್ಕೆ ಏರಲಿದೆ.

ಇದನ್ನೂ ಓದಿ:ಕೋವಿಡ್‌ ಹೆಸರಿನಲ್ಲಿ ನಡೆದ ಕೊಳ್ಳೆ ಬಗ್ಗೆ ನಿಮ್ಮ ಪಕ್ಷದವರಿಗೆ ಗೊತ್ತು: ಎಚ್ ಡಿಕೆ ಕಿಡಿ

Advertisement

ಅಂತಹ ಸನ್ನಿವೇಶದಲ್ಲಿ, ಭಾರತವು ಸೆಮಿ-ಫೈನಲ್‌ಗೆ ಅರ್ಹತೆ ಪಡೆಯುತ್ತದೆ, ಆದರೆ ಗುಂಪಿನಲ್ಲಿ ಮೊದಲ ಸ್ಥಾನ ಪಡೆಯುವ ಬಗ್ಗೆ ಖಚಿತತೆ ಇರುವುದಿಲ್ಲ. ಆಗ ಉತ್ತಮ ನೆಟ್ ರನ್ ರೇಟ್‌ ಹೊಂದಿರುವ ದ.ಆಫ್ರಿಕಾವು ತನ್ನ ಅಂತಿಮ ಪಂದ್ಯದಲ್ಲಿ ನೆದರ್ಲ್ಯಾಂಡ್ ಅನ್ನು ಸೋಲಿಸಿದರೆ ಅದು ಗುಂಪಿನಲ್ಲಿ ನಂ.1 ಸ್ಥಾನ ಪಡೆಯಲಿದೆ. ಸೆಮಿ ಫೈನಲ್ ನಲ್ಲಿ ಎದುರಾಳಿ ಯಾರೆಂದು ನಿರ್ಣಯವಾಗಲು ಗುಂಪಿನ ಈ ಅಗ್ರಸ್ಥಾನವೂ ಪ್ರಮುಖ ಪಾತ್ರ ವಹಿಸುತ್ತದೆ.

ಒಂದು ವೇಳೆ ನೆದರ್ಲ್ಯಾಂಡ್ ವಿರುದ್ಧ ದ.ಆಫ್ರಿಕಾ ಸೋತರೆ, ಬಾಂಗ್ಲಾ ಮತ್ತು ಪಾಕಿಸ್ಥಾನ ನಡುವಿನ ಪಂದ್ಯದ ವಿಜೇತರು ಸೆಮಿ ಫೈನಲ್ ಪ್ರವೇಶಿಸುತ್ತಾರೆ.

ಒಂದು ವೇಳೆ ಭಾರತವು ಜಿಂಬಾಬ್ವೆ ವಿರುದ್ಧ ಸೋತರೆ, ಅತ್ತ ದ.ಆಫ್ರಿಕಾ ಮತ್ತು  ಪಾಕಿಸ್ಥಾನ ತಮ್ಮ ಪಂದ್ಯಗಳನ್ನು ಗೆದ್ದರೆ ಭಾರತ ಕೂಟದಿಂದ ಹೊರ ಬೀಳುತ್ತದೆ.

Advertisement

Udayavani is now on Telegram. Click here to join our channel and stay updated with the latest news.

Next