Advertisement

ಭಾರತಕ್ಕಿಂದು ನೆದರ್ಲ್ಯಾಂಡ್ ಸವಾಲು: ಟಾಸ್ ಗೆದ್ದ ರೋಹಿತ್ ಮೊದಲು ಬ್ಯಾಟಿಂಗ್ ಆಯ್ಕೆ

12:27 PM Oct 27, 2022 | Team Udayavani |

ಸಿಡ್ನಿ: ಐಸಿಸಿ ಟಿ20 ವಿಶ್ವಕಪ್ ನ ಮೊದಲ ಸೂಪರ್ 12 ಪಂದ್ಯದಲ್ಲಿ ಪಾಕಿಸ್ಥಾನ ವಿರುದ್ಧ ಗೆಲುವು ದಾಖಲಿಸಿದ ಭಾರತ ತಂಡವು ಇಂದು ನೆದರ್ಲ್ಯಾಂಡ್ ವಿರುದ್ಧದ ಸವಾಲಿಗೆ ಸಜ್ಜಾಗಿದೆ. ಸಿಡ್ನಿಯಲ್ಲಿ ನಡೆಯುತ್ತಿರುವ ಪಂದ್ಯದಲ್ಲಿ ಟಾಸ್ ಗೆದ್ದ ಭಾರತ ಮೊದಲು ಬ್ಯಾಟಿಂಗ್ ಆಯ್ಕೆ ಮಾಡಿದೆ.

Advertisement

ತನ್ನ ಮೊದಲ ಸೂಪರ್ 12 ಪಂದ್ಯದಲ್ಲಿ ಬಾಂಗ್ಲಾದೇಶ ವಿರುದ್ಧ ಸೋಲನುಭವಿಸಿದ ನೆದರ್ಲ್ಯಾಂಡ್ ಇಂದು ಟೀಂ ಇಂಡಿಯಾಗೆ ಟಫ್ ಕಾಂಪಿಟೇಶನ್ ನೀಡಲು ತಯಾರಿ ನಡೆಸಿದೆ.

ಪಾಕಿಸ್ತಾನದ ಪಂದ್ಯದ ಕೊನೆಯಲ್ಲಿ ಹಾರ್ಡಿಕ್ ಪಾಂಡ್ಯ ಸೆಳೆತದಿಂದ ಬಳಲುತ್ತಿದ್ದರು. ಅವರು ಅರ್ಷದೀಪ್ ಸಿಂಗ್, ಮೊಹಮ್ಮದ್ ಶಮಿ, ಭುವನೇಶ್ವರ್ ಕುಮಾರ್, ಅಕ್ಷರ್ ಪಟೇಲ್ ಮತ್ತು ಸೂರ್ಯಕುಮಾರ್ ಯಾದವ್ ಅವರೊಂದಿಗೆ ಹೆಚ್ಚಿನ ವಿಶ್ರಾಂತಿ ಪಡೆದಿದ್ದರು. ಇತರರು ಐಚ್ಛಿಕ ಅಭ್ಯಾಸದ ಅವಧಿಯನ್ನು ಬಳಸಿದರು.

ಇದನ್ನೂ ಓದಿ:80 ಮತ್ತು 90 ರ ದಶಕದ ಅನೇಕ ಹಿಟ್‌ಗಳ ನಿರ್ದೇಶಕ ಎಸ್ಮಾಯಿಲ್ ಶ್ರಾಫ್ ನಿಧನ

ಇಂದಿನ ಪಂದ್ಯಕ್ಕೆ ಎರಡೂ ತಂಡಗಳು ಯಾವುದೇ ಬದಲಾವಣೆ ಮಾಡಿಕೊಂಡಿಲ್ಲ. ಪಾಕ್ ವಿರುದ್ಧ ಆಡಿದ್ದ ತಂಡವೇ ಇಂದು ನೆದರ್ಲ್ಯಾಂಡ್ ವಿರುದ್ದ ಆಡಲಿದೆ.

Advertisement

ತಂಡಗಳು

ಭಾರತ: ರೋಹಿತ್ ಶರ್ಮಾ (ನಾ), ಕೆಎಲ್ ರಾಹುಲ್, ವಿರಾಟ್ ಕೊಹ್ಲಿ, ಸೂರ್ಯಕುಮಾರ್ ಯಾದವ್, ಹಾರ್ದಿಕ್ ಪಾಂಡ್ಯ, ದಿನೇಶ್ ಕಾರ್ತಿಕ್ (ವಿ.ಕೀ), ಅಕ್ಷರ್ ಪಟೇಲ್, ರವಿಚಂದ್ರನ್ ಅಶ್ವಿನ್, ಭುವನೇಶ್ವರ್ ಕುಮಾರ್, ಮೊಹಮ್ಮದ್ ಶಮಿ, ಅರ್ಷದೀಪ್ ಸಿಂಗ್.

ನೆದರ್ಲ್ಯಾಂಡ್: ವಿಕ್ರಮಜಿತ್ ಸಿಂಗ್, ಮ್ಯಾಕ್ಸ್ ಓಡೌಡ್, ಬಾಸ್ ಡಿ ಲೀಡೆ, ಕಾಲಿನ್ ಅಕರ್ಮನ್, ಟಾಮ್ ಕೂಪರ್, ಸ್ಕಾಟ್ ಎಡ್ವರ್ಡ್ಸ್ (ವಿ.ಕೀ/ನಾ), ಟಿಮ್ ಪ್ರಿಂಗಲ್, ಲೋಗನ್ ವ್ಯಾನ್ ಬೀಕ್, ಶರೀಜ್ ಅಹ್ಮದ್, ಫ್ರೆಡ್ ಕ್ಲಾಸೆನ್, ಪಾಲ್ ವ್ಯಾನ್ ಮೀಕೆರೆನ್

Advertisement

Udayavani is now on Telegram. Click here to join our channel and stay updated with the latest news.

Next