Advertisement

ಐಸಿಸಿ ಸರಣಿ: ಭಾರತದಲ್ಲಿ ನಾಲ್ಕು ವಿಶ್ವ ಕೂಟ

11:20 PM Nov 16, 2021 | Team Udayavani |

ದುಬಾೖ: 2024ರಿಂದ 2031ರ ವರೆಗೆ ನಡೆಯಲಿರುವ ಐಸಿಸಿ ಪಂದ್ಯಾವಳಿಗಳ ಆತಿಥ್ಯ ವಹಿಸಲಿರುವ ದೇಶಗಳ ಪಟ್ಟಿಯನ್ನು ಅಂತಾರಾಷ್ಟ್ರೀಯ ಕ್ರಿಕೆಟ್‌ ಸಂಸ್ಥೆ ಮಂಗಳವಾರ ಬಿಡುಗಡೆ ಮಾಡಿದೆ. ಇದರಲ್ಲಿ 4 ಕೂಟಗಳ ಆತಿಥ್ಯ ಭಾರತದ ಪಾಲಾಗಿದೆ.

Advertisement

ವಿಶೇಷವೆಂದರೆ, 2025ರ ಚಾಂಪಿಯನ್ಸ್‌ ಟ್ರೋಫಿ ಆತಿಥ್ಯ ಪಾಕಿಸ್ಥಾನಕ್ಕೆ ಸಿಕ್ಕಿರುವುದು! ಭದ್ರತಾ ಭೀತಿಯಿಂದ 1996 ಬಳಿಕ ಪಾಕಿಸ್ಥಾನದಲ್ಲಿ ಈ ವರೆಗೆ ಯಾವುದೇ ಜಾಗತಿಕ ಐಸಿಸಿ ಪಂದ್ಯಾವಳಿ ನಡೆದಿಲ್ಲ ಎಂಬುದನ್ನು ಗಮನಿಸಬೇಕು.

2022ರಲ್ಲಿ ಆಸ್ಟ್ರೇಲಿಯದಲ್ಲಿ ಟಿ20 ವಿಶ್ವಕಪ್‌ ಮತ್ತು 2023ರಲ್ಲಿ ಭಾರತದಲ್ಲಿ ಐಸಿಸಿ ಏಕದಿನ ವಿಶ್ವಕಪ್‌ ಪಂದ್ಯಾವಳಿ ನಡೆಯಲಿದೆ. ವಿಶೇಷವೆಂದರೆ, ಇದೇ ಮೊದಲ ಬಾರಿಗೆ ಭಾರತವೊಂದೇ ಏಕದಿನ ವಿಶ್ವಕಪ್‌ನ ಆತಿಥ್ಯ ವಹಿಸಲಿದೆ. ಸಾಮಾನ್ಯವಾಗಿ ಭಾರತ ನೆರೆಯ ದೇಶಗಳಾದ ಶ್ರೀಲಂಕಾ, ಪಾಕಿಸ್ಥಾನ, ಬಾಂಗ್ಲಾದೇಶದೊಂದಿಗೆ ಸೇರಿ ಜಂಟಿ ಆತಿಥ್ಯ ವಹಿಸುತ್ತಿತ್ತು.

ಭಾರತಕ್ಕೆ 4 ಕೂಟಗಳ ಆತಿಥ್ಯ
2022ರಿಂದಲೇ ಲೆಕ್ಕಕ್ಕೆ ತೆಗೆದುಕೊಳ್ಳುವುದಾದರೆ 2031ರ ವರೆಗೆ ಭಾರತ ನಾಲ್ಕು ಐಸಿಸಿ ಪಂದ್ಯಾವಳಿಗಳಿಗೆ ಆತಿಥ್ಯ ವಹಿಸಲಿದೆ. ಆಸ್ಟ್ರೇಲಿಯ ಎರಡು ಬಾರಿ ಆತಿಥ್ಯ ನೀಡಲಿದೆ.

2025ರ ಚಾಂಪಿಯನ್ಸ್‌ ಟ್ರೋಫಿ ಆತಿಥ್ಯವನ್ನು ಪಾಕಿಸ್ಥಾನಕ್ಕೆ ಲಭಿಸಿದೆಯಾದರೂ ಅಲ್ಲಿ ಆಡಲು ಎಷ್ಟು ದೇಶಗಳು ಸಿದ್ಧವಿವೆ ಎಂಬ ಪ್ರಶ್ನೆಯಂತೂ ಇದ್ದೇ ಇದೆ.

Advertisement

ಇದನ್ನೂ ಓದಿ:ಭಾರತದ ಆರ್ಥಿಕತೆ ಚೇತರಿಕೆಯತ್ತ; ಆರ್‌ಬಿಐ ಗವರ್ನರ್‌ ಶಕ್ತಿಕಾಂತ ದಾಸ್‌

ಐಸಿಸಿ ಕೂಟಗಳ ವೇಳಾಪಟ್ಟಿ

2022: ಟಿ20 ವಿಶ್ವಕಪ್‌, ಆಸ್ಟ್ರೇಲಿಯ

2023: ಏಕದಿನ ವಿಶ್ವಕಪ್‌, ಭಾರತ

2024: ಟಿ20 ವಿಶ್ವಕಪ್‌, ಅಮೆರಿಕ ಮತ್ತು ವೆಸ್ಟ್‌ ಇಂಡೀಸ್‌

2025: ಚಾಂಪಿಯನ್ಸ್‌ ಟ್ರೋಫಿ, ಪಾಕಿಸ್ಥಾನ

2026: ಟಿ20 ವಿಶ್ವಕಪ್‌, ಭಾರತ ಮತ್ತು ಶ್ರೀಲಂಕಾ

2027: ಏಕದಿನ ವಿಶ್ವಕಪ್‌, ದಕ್ಷಿಣ ಆಫ್ರಿಕಾ, ಜಿಂಬಾಬ್ವೆ, ನಮೀಬಿಯಾ

2028: ಟಿ20 ವಿಶ್ವಕಪ್‌, ಆಸ್ಟ್ರೇಲಿಯ ಮತ್ತು ನ್ಯೂಜಿಲ್ಯಾಂಡ್‌

2029: ಚಾಂಪಿಯನ್ಸ್‌ ಟ್ರೋಫಿ, ಭಾರತ

2030: ಟಿ20 ವಿಶ್ವಕಪ್‌, ಇಂಗ್ಲೆಂಡ್‌, ಐರ್ಲೆಂಡ್‌, ಸ್ಕಾಟ್ಲೆಂಡ್‌

2031: ಏಕದಿನ ವಿಶ್ವಕಪ್‌, ಭಾರತ ಮತ್ತು ಬಾಂಗ್ಲಾದೇಶ

Advertisement

Udayavani is now on Telegram. Click here to join our channel and stay updated with the latest news.

Next