Advertisement
ಜಸ್‌ಪ್ರೀತ್ ಬುಮ್ರಾ ಮತ್ತು ರವೀಂದ್ರ ಜಡೇಜ ಕ್ರಮವಾಗಿ ಟೆಸ್ಟ್ ಕ್ರಿಕೆಟಿನ ನಂ.1 ಬೌಲರ್ ಹಾಗೂ ನಂ.1 ಆಲ್‌ರೌಂಡರ್ ಸ್ಥಾನವನ್ನು ಕಾಯ್ದುಕೊಂಡಿದ್ದಾರೆ.ಹ್ಯಾರಿ ಬ್ರೂಕ್ 898 ಹಾಗೂ ಜೋ ರೂಟ್ 897 ಅಂಕ ಹೊಂದಿದ್ದಾರೆ. ರೂಟ್ ಕಳೆದ ಜುಲೈಯಲ್ಲಿ ಕೇನ್ ವಿಲಿಯಮ್ಸನ್ ಅವರನ್ನು ಕೆಳಗಿಳಿಸಿ ಅಗ್ರಸ್ಥಾನಕ್ಕೆ ಏರಿದ್ದರು.
ಟಾಪ್-10 ಬ್ಯಾಟಿಂಗ್ ರ್‍ಯಾಂಕಿಂಗ್ ಯಾದಿಯಲ್ಲಿ ಸಾಕಷ್ಟು ಪರಿವರ್ತನೆ ಸಂಭವಿಸಿದೆ. ಅಡಿಲೇಡ್ ಟೆಸ್ಟ್‌ನಲ್ಲಿ ಶತಕ ಸಿಡಿಸಿದ ಟ್ರ್ಯಾವಿಸ್ ಹೆಡ್ 6 ಸ್ಥಾನ ಮೇಲೇರಿದ್ದು, 5ನೇ ರ್‍ಯಾಂಕ್ ಗಳಿಸಿದ್ದಾರೆ. ಟೆಂಬ ಬವುಮ ಅವರಿಗೆ 3 ಸ್ಥಾನಗಳ ಭಡ್ತಿ ಸಿಕ್ಕಿದೆ (7). ಡ್ಯಾರಿಲ್ ಮಿಚೆಲ್ (8) ಮತ್ತು ರಿಷಭ್ ಪಂತ್ (9) 3 ಸ್ಥಾನ ಕುಸಿದಿದ್ದಾರೆ. ಕಮಿಂಡು ಮೆಂಡಿಸ್ ಅವರದು ಒಂದು ರ್‍ಯಾಂಕ್ ಪ್ರಗತಿ (6). ಯಶಸ್ವಿ ಜೈಸ್ವಾಲ್ 4ನೇ ಸ್ಥಾನ ಕಾಯ್ದುಕೊಂಡಿದ್ದಾರೆ (811).
ಟೆಸ್ಟ್ ಬೌಲಿಂಗ್ ರ್‍ಯಾಂಕಿಂಗ್‌ನಲ್ಲಿ ಭಾರೀ ಬದಲಾವಣೆ ಸಂಭವಿಸಿಲ್ಲ. ನಂ.1 ಬುಮ್ರಾ 890 ರೇಟಿಂಗ್ ಅಂಕ ಹೊಂದಿದ್ದಾರೆ.