ಬಿಸಿಸಿಐ ಕಾಯದರ್ಶಿ ಜಯ್ ಶಾ, ಇಂಗ್ಲೆಂಡ್ ಆ್ಯಂಡ್ ವೇಲ್ಸ್ ಕ್ರಿಕೆಟ್ ಬೋರ್ಡ್‌ನ (ಇಸಿಬಿ) ಬೆಂಬಲವನ್ನು ಹೊಂದಿರುವ ಕ್ರಿಕೆಟ್ ಅಸ್ಟ್ರೇಲಿಯ (ಸಿಎ) ಇಂಥದ್ದೊಂದು ಪ್ರಸ್ತಾವನೆಯನ್ನು ಐಸಿಸಿಗೆ ಸಲ್ಲಿಸಿದೆ ಎನ್ನಲಾಗಿದೆ.
Advertisement
ಟೆಸ್ಟ್ ಆಟಗಾರರ ಸಂಭಾವನೆಯನ್ನು ಹೆಚ್ಚಿಸುವ ಮತ್ತು ಸಂಕಷ್ಟದಲ್ಲಿರುವ ಕೆಲವು ದೇಶಗಳ, ವಿದೇಶಿ ಪ್ರವಾಸದ ವೇಳೆ ತಂಡಗಳ ವೆಚ್ಚವನ್ನು ತಗ್ಗಿಸುವ ನಿಟ್ಟಿನಲ್ಲಿ ನಿಧಿಯನ್ನು ಮೀಸಲಿಡುವ ಪ್ರಸ್ತಾವನೆ ಇದಾಗಿದ್ದು, ಇದರಿಂದ ವೆಸ್ಟ್ ಇಂಡೀಸ್‌ನಂಥ ಕೆಲವು ದೇಶಗಳಿಗೆ ಸಹಾಯವಾಗಲಿದೆ ಎಂದು ಹೇಳಲಾಗುತ್ತಿದೆ.
ಈ ಉದ್ದೇಶಿತ ನಿಧಿಯು, ಎಲ್ಲ ಟೆಸ್ಟ್ ಆಟಗಾರರಿಗೆ ಕನಿಷ್ಠ 8.38 ಲಕ್ಷ ರೂ. ಪಂದ್ಯದ ಸಂಭಾವನೆಯಾಗಿ ನೀಡುವುದು ಮತ್ತು ವಿದೇಶಿ ಪ್ರವಾಸದ ವೆಚ್ಚಗಳಿಂದಾಗಿ ಪರಿತಪಿಸುತ್ತಿರುವ ಕೆಲವು ದೇಶಗಳಿಗೆ ವಿದೇಶಿ ಪ್ರವಾಸ ಖರ್ಚಿನ ನೆರವು ನೀಡುವ ಉದ್ದೇಶವನ್ನು ಹೊಂದಿದೆ ಎಂದು ಮೂಲ ತಿಳಿಸಿದೆ. 3 ರಾಷ್ಟ್ರಗಳಿಗೆ ನೆರವು ಇಲ್ಲ?
ಐಸಿಸಿಯ ಈ ನಿಧಿ ಯೋಜನೆಯ ಲಾಭ, ಭಾರತ, ಆಸ್ಟ್ರೇಲಿಯ ಮತ್ತು ಇಂಗ್ಲೆಂಡ್ ದೇಶಗಳಿಗೆ ಸಿಗುವುದಿಲ್ಲ ಎಂದು ಹೇಳಲಾಗುತ್ತಿದೆ. ಈ ರಾಷ್ಟ್ರಗಳು ಈಗಾಗಲೇ ತಮ್ಮ ತಂಡದ ಆಟಗಾರರಿಗೆ ಉತ್ತಮ ಸಂಭಾವನೆಯನ್ನು ನೀಡುತ್ತಿರುವುದು ಇದಕ್ಕೆ ಕಾರಣ ಎನ್ನಲಾಗಿದೆ.