Advertisement

World Cup ; ದಕ್ಷಿಣ ಆಫ್ರಿಕಾ ಅಬ್ಬರಕ್ಕೆ ಮಂಕಾಗಿ ಹೋದ ನ್ಯೂಜಿಲ್ಯಾಂಡ್

09:13 PM Nov 01, 2023 | Team Udayavani |

ಪುಣೆ : ಇಲ್ಲಿನ ಮಹಾರಾಷ್ಟ್ರ ಕ್ರಿಕೆಟ್ ಅಸೋಸಿಯೇಷನ್ ​​ಸ್ಟೇಡಿಯಂನಲ್ಲಿ ಬುಧವಾರ ನಡೆದ ವಿಶ್ವಕಪ್ ಪಂದ್ಯಾವಳಿಯಲ್ಲಿ ಬಲಾಢ್ಯ ತಂಡಗಳ ಕದನದಲ್ಲಿ ದಕ್ಷಿಣ ಆಫ್ರಿಕಾ ತಂಡದ ಅಬ್ಬರದೆದುರು ಮಂಕಾದ ನ್ಯೂಜಿಲ್ಯಾಂಡ್ 190 ರನ್ ಗಳ ಭಾರೀ ಸೋಲು ಅನುಭವಿಸಿದೆ.

Advertisement

ನ್ಯೂಜಿಲ್ಯಾಂಡ್ 7 ಪಂದ್ಯಗಳಲ್ಲಿ 3 ನೇ ಸೋಲು ಅನುಭವಿಸಿತು. ದಕ್ಷಿಣ ಆಫ್ರಿಕಾ 7 ಪಂದ್ಯಗಳಲ್ಲಿ 6 ನೇ ಗೆಲುವು ತನ್ನದಾಗಿಸಿಕೊಂಡು ಅಂಕ ಪಟ್ಟಿಯಲ್ಲಿ ಅಗ್ರಸ್ಥಾನಕ್ಕೇರಿತು.

ಟಾಸ್ ಸೋತು ಬ್ಯಾಟಿಂಗ್ ಗೆ ಇಳಿಸಲ್ ಪಟ್ಟ ದಕ್ಷಿಣ ಆಫ್ರಿಕಾ ತಂಡ ಕ್ವಿಂಟನ್ ಡಿ’ ಕಾಕ್ ಮತ್ತು ರಸ್ಸಿ ವ್ಯಾನ್ ಡರ್ ಡಸ್ಸೆನ್ ಅವರ ಅಮೋಘ ಶತಕಗಳ ನೆರವಿನಿಂದ ನ್ಯೂಜಿಲ್ಯಾಂಡ್ ಗೆ ಗೆಲ್ಲಲು 358 ರನ್ ಗಳ ಬೃಹತ್ ಗುರಿ ಎದುರಿಟ್ಟಿತು. ಗುರಿ ಬೆನ್ನಟ್ಟಿದ ನ್ಯೂಜಿಲ್ಯಾಂಡ್ ಬ್ಯಾಟ್ಸ್ ಮ್ಯಾನ್ ಗಳು ಒಬ್ಬರಾದ ಮೇಲೊಬ್ಬರಂತೆ ಪೆವಿಲಿಯನ್ ಪರೇಡ್ ನಡೆಸಿದರು. ದಕ್ಷಿಣ ಆಫ್ರಿಕಾ ತಂಡದ ಬಿಗಿ ಬೌಲಿಂಗ್ ದಾಳಿಗೆ ನಲುಗಿ ರನ್ ಗಳಿಗೆ ಎಲ್ಲಾ ವಿಕೆಟ್ ಕಳೆದುಕೊಂಡು ಸೋಲಿಗೆ ಶರಣಾಯಿತು.

ಆರಂಭಿಕ ಆಟಗಾರ ವಿಲ್ ಯಂಗ್ 33 ರನ್, ಡೇರಿಲ್ ಮಿಚೆಲ್ 24ರನ್, ಗ್ಲೆನ್ ಫಿಲಿಪ್ಸ್ 60 ರನ್ ಹೊರತು ಪಡಿಸಿ ಉಳಿದ ಆಟಗಾರರ್ಯಾರು ಒಂದಂಕಿ ದಾಟಲಿಲ್ಲ.

ಬಿಗಿ ಬೌಲಿಂಗ್ ದಾಳಿ ನಡೆಸಿ ಘಾತಕವಾಗಿ ಕಾಡಿದ ಕೇಶವ ಮಹಾರಾಜ್ 4, ಮಾರ್ಕೊ ಜಾನ್ಸೆನ್ 3 ವಿಕೆಟ್ ,ಜೆರಾಲ್ಡ್ ಕೋಟ್ಜಿ 2, ಕಗಿಸೊ ರಬಾಡ ಒಂದು ವಿಕೆಟ್ ಪಡೆದರು.

Advertisement

ಶತಕಗಳ ಧಮಾಕ

ಈ ವಿಶ್ವಕಪ್ ನಲ್ಲಿ ಅತ್ಯದ್ಭುತ ಫಾರ್ಮ್ ನಲ್ಲಿರುವ ಕ್ವಿಂಟನ್ ಡಿ’ ಕಾಕ್ ನಾಲ್ಕನೇ ಶತಕ ಸಿಡಿಸಿ ಸಂಭ್ರಮದಲ್ಲಿ ತೇಲಾಡಿದರು. 116 ಎಸೆತಗಳಿಂದ 114 ರನ್ ಗಳಿಸಿ ಔಟಾದರು. 10 ಬೌಂಡರಿ ಮತ್ತು 3 ಆಕರ್ಷಕ ಸಿಕ್ಸರ್ ಬಾರಿಸಿದ್ದರು. ಈ ವಿಶ್ವಕಪ್ ನಲ್ಲಿ 545 ರನ್ ಗಳಿಸಿದ್ದಾರೆ. ನಾಯಕ ಟೆಂಬಾ ಬವುಮಾ 24 ರನ್ ಗಳಿಸಿ ಔಟಾದರು.

ಡಿ’ ಕಾಕ್ ಅವರಿಗೆ ಸಾಥ್ ನೀಡಿದ ರಾಸ್ಸಿ ವ್ಯಾನ್ ಡೆರ್ ಡಸ್ಸೆನ್ ಕೂಡ ಶತಕ ಸಿಡಿಸಿ ದಕ್ಷಿಣ ಆಫ್ರಿಕಾ ತಂಡದ ಬ್ಯಾಟಿಂಗ್ ವೈಭವ ಮೇಳೈಸಿದರು. 118 ಎಸೆತಗಳಲ್ಲಿ 9 ಬೌಂಡರಿ ಮತ್ತು ಭರ್ಜರಿ 5 ಸಿಕ್ಸರ್ ಒಳಗೊಂದು 133 ರನ್ ಗಳಿಸಿ ಔಟಾದರು. ಆ ಬಳಿಕ ಬಂದ ಡೇವಿಡ್ ಮಿಲ್ಲರ್ ಸ್ಪೋಟಕ ಅರ್ಧ ಶತಕ ಬಾರಿಸಿ ಔಟಾದರು. 30 ಎಸೆತಗಳಲ್ಲಿ 53 ರನ್ ಬಾರಿಸಿದರು. ಹೆನ್ರಿಕ್ ಕ್ಲಾಸೆನ್ ಔಟಾಗದೆ 15, ಐಡನ್ ಮಾರ್ಕ್ರಾಮ್ ಔಟಾಗದೆ 6 ರನ್ ಗಳಿಸಿದರು. ಟಿಮ್ ಸೌಥಿ 2, ಟ್ರೆಂಟ್ ಬೌಲ್ಟ್ ಮತ್ತು ಜೇಮ್ಸ್ ನೀಶಮ್ ತಲಾ ಒಂದು ವಿಕೆಟ್ ಪಡೆದರು.

Advertisement

Udayavani is now on Telegram. Click here to join our channel and stay updated with the latest news.

Next