Advertisement

World Cup; ಲಂಕಾಕ್ಕೆ ಸೋಲಿನ ಶಾಕ್: ಅಫ್ಘಾನ್ ಗೆ ಮೂರನೇ ಗೆಲುವಿನ ಕಿಕ್

09:53 PM Oct 30, 2023 | Team Udayavani |

ಪುಣೆ: ಸೋಮವಾರ ಇಲ್ಲಿ ನಡೆದ ವಿಶ್ವಕಪ್ ಪಂದ್ಯದಲ್ಲಿ ಬೌಲಿಂಗ್ ಮತ್ತು ಬ್ಯಾಟಿಂಗ್ ಎರಡರಲ್ಲೂ ಅಮೋಘ ನಿರ್ವಹಣೆ ತೋರಿದ ಅಫ್ಘಾನಿಸ್ಥಾನ ತಂಡ ಶ್ರೀಲಂಕಾ ವಿರುದ್ಧ ಮತ್ತೊಂದು ಸ್ಮರಣೀಯ ಜಯವನ್ನು ತನ್ನದಾಗಿಸಿಕೊಂಡಿದೆ. ಈ ಸೋಲಿನೊಂದಿಗೆ ಶ್ರೀಲಂಕಾದ ಸೆಮಿ ಫೈನಲ್ ಕನಸು ದೂರವಾಗಿದೆ.

Advertisement

ಅಫ್ಘಾನಿಸ್ತಾನ ಟಾಸ್ ಗೆದ್ದು ಬೌಲಿಂಗ್ ಆಯ್ಕೆ ಮಾಡಿಕೊಂಡಿತು. ಶ್ರೀಲಂಕಾ 49.3 ಓವರ್ ಗಳಲ್ಲಿ 241 ರನ್‌ಗೆ ಆಲೌಟ್ ಆಯಿತು. ಗುರಿ ಬೆನ್ನಟ್ಟಿದ ಅಫ್ಘಾನ್ ತಂಡ 45.2 ಓವರ್ ಗಳಲ್ಲಿ 3 ವಿಕೆಟ್ ನಷ್ಟಕ್ಕೆ 242 ರನ್ ಗಳಿಸಿ ಜಯಭೇರಿ ಬಾರಿಸಿತು.

ರಹಮಾನುಲ್ಲಾ ಗುರ್ಬಾಜ್ ಅವರ ವಿಕೆಟನ್ನು ಅಫ್ಘಾನ್ ತಂಡ ರನ್ ಗಳಿಸುವ ಮೊದಲೇ  ಕಳೆದುಕೊಂಡು ಆರಂಭಿಕ ಆಘಾತಕ್ಕೆ ಸಿಲುಕಿತು. ನಂತರ ತಾಳ್ಮೆಯ ಆಟವಾಡಿದ ಇಬ್ರಾಹಿಂ ಜದ್ರಾನ್ 39 ರನ್ ಗಳಿಸಿ ಔಟಾದರು. ಬಳಿಕ ಅಮೋಘ ಅರ್ಧ ಶತಕ ಬಾರಿಸಿದ ರಹಮತ್ ಶಾ 62 ರನ್ ಗಳಿಸಿ ತಂಡಕ್ಕೆ ಗೆಲುವಿನ ಭರವಸೆ ಮೂಡಿಸಿದರು. ಬಳಿಕ ನಾಯಕ ಹಶ್ಮತುಲ್ಲಾ ಶಾಹಿದಿ ಮತ್ತು ಅಜ್ಮತುಲ್ಲಾ ಒಮರ್ಜಾಯ್ ಆಕರ್ಷಕ ಜತೆಯಾಟವಾಡಿದರು. ಶಾಹಿದಿ ರನ್  58* , ಅಜ್ಮತುಲ್ಲಾ73* ರನ್  ದೊಡ್ಡ ಕೊಡುಗೆ ಸಲ್ಲಿಸಿ ಗೆಲುವಿನ ಕೇಕೆ ಹಾಕಿದರು.

ಹಾಲಿ ಚಾಂಪಿಯನ್ ಇಂಗ್ಲೆಂಡ್ ಮತ್ತು ಪಾಕಿಸ್ಥಾನ ತಂಡಗಳಿಗೆ ಸೋಲಿನ ಶಾಕ್ ನೀಡಿದ್ದ ಅಫ್ಘಾನ್ ತಂಡ ಅಮೋಘ ಆಟದ ಮೂಲಕ ಮೂರನೇ ಗೆಲುವನ್ನು ಸಂಭ್ರಮಿಸಿತು.

ಅಫ್ಘಾನ್ ಇನ್ನುಳಿದ ಮೂರು ಪಂದ್ಯಗಳನ್ನು ನೆದರ್ ಲ್ಯಾಂಡ್ಸ್ , ಪ್ರಬಲ ತಂಡಗಳಾದ ಆಸ್ಟ್ರೇಲಿಯ ಮತ್ತು ದಕ್ಷಿಣ ಆಫ್ರಿಕಾ ವಿರುದ್ಧ ಆಡಲಿದೆ. ಶ್ರೀಲಂಕಾ ತಂಡ ಭಾರತ, ಬಾಂಗ್ಲಾದೇಶ ಮತ್ತು ನ್ಯೂಜಿಲ್ಯಾಂಡ್ ವಿರುದ್ಧ ಆಡಲಿದೆ.

Advertisement

ಲಂಕಾ ಪರ ಆರಂಭಿಕ ಆಟಗಾರ ಪಾಥುಮ್ ನಿಸ್ಸಾಂಕ 46ರನ್ , ಕುಸಾಲ್ ಮೆಂಡಿಸ್ 39, ಸದೀರ ಸಮರವಿಕ್ರಮ 36 ರನ್ ಗಳಿಸಿದರೂ ಹೆಚ್ಚು ಹೊತ್ತು ನಿಲ್ಲಲು ಸಾಧ್ಯವಾಗಲಿಲ್ಲ. ಅಫ್ಘಾನ್ ಬೌಲರ್‌ಗಳು ನಿಯಮಿತವಾಗಿ ವಿಕೆಟ್‌ಗಳನ್ನು ಪಡೆಯುವಲ್ಲಿ ಯಶಸ್ವಿಯಾದರು. ಆದಾಗ್ಯೂ, ಮಹೇಶ್ ತೀಕ್ಷಣ 29 ರನ್ ಮತ್ತು ಏಂಜೆಲೊ ಮ್ಯಾಥ್ಯೂಸ್ 23 ರನ್ ಗಳಿಸಿ ಎಂಟನೇ ವಿಕೆಟ್‌ಗೆ 42 ಎಸೆತಗಳಲ್ಲಿ ಅಮೂಲ್ಯ 45 ರನ್ ಸೇರಿಸಿದರು.
ಫಜಲ್ಕ್ ಫಾರೂಕಿ (4/34) ನಾಲ್ಕು ವಿಕೆಟ್‌ಗಳನ್ನು ಕಿತ್ತು ಅಫ್ಘಾನಿಸ್ಥಾನದ ಅತ್ಯಂತ ಯಶಸ್ವಿ ಬೌಲರ್ ಆಗಿ ಹೊರಹೊಮ್ಮಿದರು. ಮುಜೀಬ್ ಉರ್ ರೆಹಮಾನ್ (2/38), ಅಜ್ಮತುಲ್ಲಾ ಒಮರ್ಜಾಯ್ (1/37) ರಶೀದ್ ಖಾನ್ (1/50) ಎಲ್ಲರೂ ಸಾಮೂಹಿಕ ಪ್ರಯತ್ನದಿಂದ ಲಂಕಾ ವನ್ನು ಸಾಧಾರಣ ಮೊತ್ತಕ್ಕೆ ಕಟ್ಟಿ ಹಾಕುವಲ್ಲಿ ಯಶಸ್ವಿಯಾದರು.

Advertisement

Udayavani is now on Telegram. Click here to join our channel and stay updated with the latest news.

Next