Advertisement

ICC Champions Trophy: ಹೈಬ್ರಿಡ್‌ ಮಾದರಿಯೇ ಅಂತಿಮ

08:50 AM Dec 20, 2024 | Team Udayavani |

ದುಬಾೖ: ಮುಂದಿನ ವರ್ಷದ ಐಸಿಸಿ ಚಾಂಪಿಯನ್ಸ್‌ ಟ್ರೋಫಿ ಕ್ರಿಕೆಟ್‌ ಪಂದ್ಯಾವಳಿಯ ಬಹು ದೊಡ್ಡ ಗೊಂದಲ ವೊಂದು ಬಗೆಹರಿದಿದೆ. ಪಾಕಿಸ್ಥಾನದ ಆತಿಥ್ಯ ದಲ್ಲಿ ನಡೆಯುವ ಈ ಕೂಟದ ಭಾರತದ ಪಂದ್ಯಗಳನ್ನು ತಟಸ್ಥ ತಾಣದಲ್ಲಿ ನಡೆಸಲು ಐಸಿಸಿ ನಿರ್ಧರಿಸಿದೆ. ಆದರೆ ಈ ತಾಣ ಯಾವುದೆಂಬುದನ್ನು ಸೂಚಿಸಿಲ್ಲ. ಶೀಘ್ರದಲ್ಲೇ ವೇಳಾಪಟ್ಟಿ ಅಂತಿಮಗೊಳ್ಳಲಿದೆ ಎಂದು ಐಸಿಸಿ ಗುರುವಾರ ಪ್ರಕಟನೆಯಲ್ಲಿ ತಿಳಿಸಿದೆ.

Advertisement

ಪಿಸಿಬಿ ಐಸಿಸಿ ಚಾಂಪಿಯನ್ಸ್‌ ಟ್ರೋಫಿ ಕ್ರಿಕೆಟ್‌ ಪಂದ್ಯಾವಳಿಯನ್ನು ಹೈಬ್ರಿಡ್‌ ಮಾದ ರಿಯಲ್ಲಿ ನಡೆಸಲು ಒಪ್ಪಿದ ಕಾರಣಕ್ಕಾಗಿ 2028ರ ವನಿತಾ ಟಿ20 ವಿಶ್ವಕಪ್‌ ಕ್ರಿಕೆಟ್‌ ಪಂದ್ಯಾವಳಿಯ ಆತಿಥ್ಯವನ್ನು ಐಸಿಸಿ ಪಾಕಿಸ್ಥಾನಕ್ಕೆ ನೀಡಿತು.

ಕೇವಲ ಚಾಂಪಿಯನ್ಸ್‌ ಟ್ರೋಫಿ ಪಂದ್ಯಾ ವಳಿಗೆ ಮಾತ್ರವಲ್ಲ, 2027ರ ತನಕ ಭಾರತ, ಪಾಕಿಸ್ಥಾನದ ಆತಿಥ್ಯದಲ್ಲಿ ನಡೆಯುವ ಎಲ್ಲ ಐಸಿಸಿ ಪಂದ್ಯಾವಳಿಗೂ ಇದೇ ಮಾದರಿ ಅನ್ವಯವಾಗಲಿದೆ. ವನಿತಾ ಕ್ರಿಕೆಟಿಗೂ ಇದು ಅನ್ವಯಿಸಲಿದೆ. ಅದರಂತೆ ಮುಂದಿನ ವರ್ಷ ಭಾರತದಲ್ಲಿ ನಡೆಯುವ ವನಿತಾ ಏಕದಿನ ವಿಶ್ವಕಪ್‌ ಹಾಗೂ 2028ರ ಪಾಕಿಸ್ಥಾನ ಆತಿಥ್ಯದ ವನಿತಾ ಟಿ20 ವಿಶ್ವಕಪ್‌ ಪಂದ್ಯಾವಳಿಗಳೂ ಹೈಬ್ರಿಡ್‌ ಮಾದರಿಯಲ್ಲೇ ಸಾಗಲಿವೆ.

2025ರ ವನಿತಾ ಏಕದಿನ ವಿಶ್ವಕಪ್‌ ಪಂದ್ಯಾವಳಿಯನ್ನು ಭಾರತ ಏಕಾಂಗಿಯಾಗಿ ನಡೆಸಲಿದೆ. ಆದರೆ 2026ರ ಪುರುಷರ ಟಿ20 ವಿಶ್ವಕಪ್‌ ಪಂದ್ಯಾವಳಿಗೆ ಭಾರತ ಮತ್ತು ಶ್ರೀಲಂಕಾದ ಜಂಟಿ ಆತಿಥ್ಯ ಇರಲಿದೆ. ಆಗ ಭಾರತ-ಪಾಕಿಸ್ಥಾನ ನಡುವಿನ ಪಂದ್ಯಗಳು ಲಂಕಾದಲ್ಲಿ ನಡೆಯಲಿವೆ.

ಜಯ್‌ ಶಾ ಪರಿಹಾರ

Advertisement

ಚಾಂಪಿಯನ್ಸ್‌ ಟ್ರೋಫಿ ಪಂದ್ಯಾವಳಿಗಾಗಿ ಪಾಕಿಸ್ಥಾನಕ್ಕೆ ತೆರಳಲು ಭಾರತ ತಂಡಕ್ಕೆ ಅನುಮತಿ ನಿರಾಕರಿಸಿದ್ದರಿಂದ ಐಸಿಸಿ ಮತ್ತು ಪಿಸಿಬಿಗಳೆರಡೂ ಗೊಂದಲಕ್ಕೆ ಸಿಲುಕಿದ್ದವು. ಪಾಕ್‌ ಕ್ರಿಕೆಟ್‌ ಮಂಡಳಿಯಂತೂ ಹೈಬ್ರಿಡ್‌ ಮಾದರಿಯನ್ನು ಸಂಪೂರ್ಣವಾಗಿ ವಿರೋಧಿ ಸಿತ್ತು. ಸಾಕಷ್ಟು ಮಾತುಕತೆ, ಚರ್ಚೆ ನಡೆದರೂ ಗೊಂದಲ ಬಗೆಹರಿದಿರಲಿಲ್ಲ. ಜಯ್‌ ಶಾ ಡಿ. ಒಂದರಂದು ಐಸಿಸಿ ಅಧ್ಯಕ್ಷರಾಗಿ ಅಧಿಕಾರ ವಹಿಸಿಕೊಂಡಾಗ ಅವರ ಮುಂದೆ ಈ ಸಮಸ್ಯೆಯನ್ನು ಬಗೆಹರಿಸಬೇಕಾದ ಒತ್ತಡವಿತ್ತು. ಇದೀಗ ಬಗೆಹರಿದಿದೆ.

ಕೂಟದ ದಿನಾಂಕ

ಮೂಲ ವೇಳಾಪಟ್ಟಿಯಂತೆ ಐಸಿಸಿ ಚಾಂಪಿಯನ್ಸ್‌ ಟ್ರೋಫಿ ಪಂದ್ಯಾವಳಿ ಫೆ. 19ರಿಂದ ಮಾ. 9ರ ತನಕ ನಡೆಯಲಿದೆ. 8 ತಂಡಗಳು ಭಾಗವಹಿಸಲಿವೆ. ಈ ತಂಡಗಳನ್ನು 2 ಗುಂಪುಗಳಾಗಿ ವಿಂಗಡಿಸಲಾಗಿದೆ. ಪ್ರತೀ ಗುಂಪಿನ ಅಗ್ರ 2 ತಂಡಗಳು ಸೆಮಿಫೈನಲ್‌ ಪ್ರವೇಶಿಸಲಿವೆ. ಭಾರತ-ಪಾಕಿಸ್ಥಾನ ತಂಡ ಗಳು ಫೈನಲ್‌ ಪ್ರವೇಶಿಸಿದರೆ ಈ ಪಂದ್ಯ ತಟಸ್ಥ ತಾಣದಲ್ಲಿ ನಡೆಯಲಿದೆ.

Advertisement

Udayavani is now on Telegram. Click here to join our channel and stay updated with the latest news.

Next