Advertisement

ಐಸಿಸಿ ಮಹತ್ವದ ಸಭೆ : ಶಶಾಂಕ್‌ ಮನೋಹರ್‌ ಅವರ ಉತ್ತರಾಧಿಕಾರಿ ಯಾರು?

10:34 AM Aug 10, 2020 | sudhir |

ದುಬಾೖ: ಅಂತಾರಾಷ್ಟ್ರೀಯ ಕ್ರಿಕೆಟ್‌ ಕೌನ್ಸಿಲ್‌ ಸಭೆಯೊಂದು ಸೋಮವಾರ ಜರಗಲಿದೆ. ಈಗಾಗಲೇ ಅಧ್ಯಕ್ಷ ಪಟ್ಟದಿಂದ ಕೆಳಗಿಳಿದಿರುವ ಶಶಾಂಕ್‌ ಮನೋಹರ್‌ ಅವರ ಉತ್ತರಾಧಿಕಾರಿ ಯಾರು ಎಂಬುದನ್ನು ನಿರ್ಧರಿಸುವುದು ಈ ಸಭೆಯ ಏಕೈಕ ಅಜೆಂಡಾ ಆಗಿರಲಿದೆ.

Advertisement

ಮುಂದಿನ 4 ವಾರಗಳಲ್ಲಿ ಐಸಿಸಿಗೆ ನೂತನ ಅಧ್ಯಕ್ಷರ ನೇಮಕವಾಗಬೇಕಿದೆ. ಇವರು ಅವಿರೋಧವಾಗಿ ಆಯ್ಕೆ ಆಗುವರೋ ಅಥವಾ ಚುನಾವಣೆ ನಡೆಸಬೇಕಾದೀತೇ ಎಂಬುದರ ಸೂಚನೆಯೊಂದು ಲಭಿಸುವ ಸಾಧ್ಯತೆ ಇದೆ. ಆದರೆ ಈಗಿನ ಪ್ರಕಾರ ಇಲ್ಲಿ ಅವಿರೋಧ ಆಯ್ಕೆ ಅನುಮಾನ.

ಇಸಿಬಿ ಮಾಜಿ ಅಧ್ಯಕ್ಷ ಕಾಲಿನ್‌ ಗ್ರೇವ್ಸ್‌, ವೆಸ್ಟ್‌ ಇಂಡೀಸ್‌ ಕ್ರಿಕೆಟ್‌ ಮಂಡಳಿಯ ಮಾಜಿ ಅಧ್ಯಕ್ಷ ಡೇವ್‌ ಕ್ಯಾಮರಾನ್‌, ದಕ್ಷಿಣ ಆಫ್ರಿಕಾದ ಕ್ರಿಸ್‌ ನೆಂಝಾನಿ, ಭಾರತದ ಸೌರವ್‌ ಗಂಗೂಲಿ ಮೊದಲಾದವರ ಹೆಸರು ಐಸಿಸಿ ಉನ್ನತ ಹುದ್ದೆಗೆ ಕೇಳಿ ಬರುತ್ತಿದೆ.

Advertisement

Udayavani is now on Telegram. Click here to join our channel and stay updated with the latest news.

Next