ದುಬೈ: ಬಹು ನಿರೀಕ್ಷಿತ ಏಕದಿನ ವಿಶ್ವಕಪ್ ನ ಕಾವು ದಿನದಿಂದ ದಿನಕ್ಕೆ ಏರುತ್ತಿದ್ದು, ಇದೀಗ ಐಸಿಸಿ ಕ್ರಿಕೆಟ್ ಲೋಕದ ಬಹುದೊಡ್ಡ ಕೂಟಕ್ಕೆ ವೀಕ್ಷಕ ವಿವರಣೆಗಾರರನ್ನು ಆಯ್ಕೆ ಮಾಡಿದೆ. ಒಟ್ಟು 24 ಮಂದಿ ಕಾಮೆಂಟೇಟರ್ಸ್ ಅನ್ನು ಐಸಿಸಿ ಆಯ್ಕೆ ಮಾಡಿದ್ದು, ಅದರಲ್ಲಿ ಮೂವರು ಭಾರತೀಯರು ಸ್ಥಾನ ಪಡೆದಿದ್ದಾರೆ.
ಒಟ್ಟು 46 ದಿನ ನಡೆಯುವ ಈ ಮಹಾ ಕ್ರಿಕೆಟ್ ಕೂಟದಲ್ಲಿ 10 ತಂಡಗಳು ವಿಶ್ವ ಕ್ರಿಕೆಟ್ ಸಾಮ್ರಾಟನಾಗಲು ಸೆಣಸಾಡಲಿವೆ. ಈ ಮಹಾಕೂಟದ ವೀಕ್ಷಕ ವಿವರಣೆಗಾಗಿ ಐಸಿಸಿ ಶುಕ್ರವಾರ ಬಿಡುಗಡೆ ಮಾಡಿದ ಪಟ್ಟಿ ಇಲ್ಲಿದೆ.
ನಾಸೀರ್ ಹುಸೇನ್, ಇಯಾನ್ ಬಿಷಪ್, ಸೌರವ್ ಗಂಗೂಲಿ, ಮಿಲೇನ್ ಜೋನ್ಸ್, ಕುಮಾರ ಸಂಗಕ್ಕರ, ಮೈಕಲ್ ಕ್ಲಾರ್ಕ್, ಮೈಕಲ್ ಅಥರ್ಟನ್, ಬ್ರೆಂಡನ್ ಮೆಕಲಂ, ಆಲಿಸನ್ ಮೈಕಲ್, ಗ್ರೇಮ್ ಸ್ಮಿತ್, ವಾಸಿಮ್ ಅಕ್ರಮ್, ಹರ್ಷ ಭೋಗ್ಲೆ, ಶಾನ್ ಪೊಲ್ಲಾಕ್, ಮೈಕಲ್ ಸ್ಲಾಟರ್, ಮಾರ್ಕ್ ನಿಕೋಲ್ಸ್, ಮೈಕಲ್ ಹೋಲ್ಡಿಂಗ್, ಇಶಾ ಗುಹಾ, ಪಾಮಿ ಎಂಬಾಗ್ವಾ, ಸಂಜಯ್ ಮಾಂಜ್ರೆಕರ್, ಸೈಮನ್ ಡೌಲ್, ಇಯಾನ್ ಸ್ಮಿತ್, ರಮೀಜ್ ರಾಜಾ, ಅಥರ್ ಆಲಿ ಖಾನ್, ಇಯಾನ್ ವಾರ್ಡ್.
ಐಸಿಸಿ ಟಿವಿ ಇದೇ ಮೊದಲ ಬಾರಿಗೆ ಅಭ್ಯಾಸ ಪಂದ್ಯಗಳನ್ನೂ ನೇರ ಪ್ರಸಾರ ನೀಡಲಿದೆ. ಪ್ರತೀ ಪಂದ್ಯಕ್ಕೂ 32 ಕ್ಯಾಮೆರಾಗಳು, ಅಲ್ಟ್ರಾ ಮೋಷನ್, ಹಾಕ್ ಐ ಕ್ಯಾಮೆರಾ, ಫ್ರಂಟ್ ಆಂಡ್ ರಿವರ್ಸ್ ವೀವ್ ಸ್ಟಂಪ್ ಕ್ಯಾಮೆರಾ ಮತ್ತು ಸ್ಪೈಡರ್ ಕ್ಯಾಮೆರಾಗಳನ್ನು ಉಪಯೋಗಿಸಿ ವಿಶ್ವದಾದ್ಯಂತ ವಿಕ್ಷಕರಿಗೆ ನೇರ ಪ್ರಸಾರದ ಮೂಲಕ ಕ್ರಿಕೆಟ್ ಆಟದ ರಸ ಉಣಿಸಲಿದೆ.