Advertisement

ಐಬಿಪಿಎಸ್‌ ವಿವಿಧ ಹುದ್ದೆಗಳ ನೇಮಕಾತಿ ಅಧಿಸೂಚನೆ ಪ್ರಕಟ

12:38 AM Sep 12, 2020 | mahesh |

ಬ್ಯಾಂಕಿಂಗ್‌ ವಲಯದ ಸಹಿತ ಪ್ರತಿಯೊಂದೂ ಕ್ಷೇತ್ರವೂ ಇಂದು ಉದ್ಯೋಗಿಗಳ ವಿಷಯ ಜ್ಞಾನವನ್ನಷ್ಟೇ ಪರೀಕ್ಷೆಗೊಡ್ಡದೆ ಆತನ ಪೂರ್ಣ ವ್ಯಕ್ತಿತ್ವದ ಬೆಳವಣಿಗೆಯನ್ನು ಅಪೇಕ್ಷಿಸುತ್ತದೆ. ಈ ಹಿನ್ನೆಲೆಯಲ್ಲಿ ಆಯಾ ವಲಯಗಳಲ್ಲಿನ ವಿವಿಧ ಹುದ್ದೆಗಳ ನೇಮಕಾತಿಗಾಗಿ ನಡೆಸುವ ಪರೀಕ್ಷೆಗಳೂ ಕೂಡ ಇದೇ ಮಾದರಿಯಲ್ಲಿರುತ್ತವೆ. ಬ್ಯಾಂಕ್‌ ಸಿಬಂದಿ ನೇಮಕಾತಿ ಸಂಸ್ಥೆ (ಐಬಿಪಿಎಸ್‌) ವಿವಿಧ ಬ್ಯಾಂಕಿಂಗ್‌ ಹುದ್ದೆಗಳ ನೇಮಕಾತಿಗೆ ನಡೆಸುವ ಪರೀಕ್ಷೆಗಳು ಇದಕ್ಕೆ ಉತ್ತಮ ಉದಾಹರಣೆ. ಆದರೆ ಇಂದು ಬಹುಪಾಲು ಅಭ್ಯರ್ಥಿಗಳಿಗೆ ಪರೀಕ್ಷಾ ವಿಷಯ ವಸ್ತುಗಳ ಮಾಹಿತಿ ಕೊರತೆ ಇರುತ್ತದೆ. ಪ್ರತಿ ವರ್ಷ ಪರೀಕ್ಷೆಗಳು ನಡೆಯುತ್ತಿದ್ದರೂ ಅಗತ್ಯವಿರುವ ಅರ್ಹತೆ, ಆಯ್ಕೆ ಪ್ರಕ್ರಿಯೆ, ಅರ್ಜಿ ಸಲ್ಲಿಕೆ, ಕುರಿತು ಗೊಂದಲಗಳು ಇದ್ದೇ ಇರುತ್ತವೆ. ಐಬಿಪಿಎಸ್‌ ಮೂಲಕ ನಡೆಯುವ ಪರೀಕ್ಷೆಗಳು, ಆಯ್ಕೆ ಪ್ರಕ್ರಿಯೆ ಇತ್ಯಾದಿ ಮಾಹಿತಿಗಳು ಇಲ್ಲಿವೆ.

Advertisement

ಮಣಿಪಾಲ: 2021-22ನೇ ಸಾಲಿನ ಕ್ಲರಿಕಲ್‌ ಕೇಡರ್‌ನ ವಿವಿಧ ಹುದ್ದೆಗಳ ಮುಂದಿನ ನೇಮಕಾತಿ ಪ್ರಕ್ರಿಯೆಗಾಗಿ ಐಬಿಪಿಎಸ್‌ ಅಧಿಸೂಚನೆ ಪ್ರಕಟಿಸಿದೆ. ನೇಮಕಾತಿ ಪ್ರಕ್ರಿಯೆಯಲ್ಲಿ ಭಾಗವಹಿಸುವ ಎಲ್ಲ ಬ್ಯಾಂಕ್‌ಗಳಲ್ಲಿ ಖಾಲಿ ಇರುವ ಹುದ್ದೆಗಳಿಗೆ ಉದ್ಯೋಗಿಗಳನ್ನು ನೇಮಕ ಮಾಡಿಕೊಳ್ಳಲಾಗುವುದು.

ಆಯ್ಕೆ ಪ್ರಕ್ರಿಯೆ ಹೇಗಿರುತ್ತದೆ?
ಪ್ರಿಲಿಮಿನರಿ ಪರೀಕ್ಷೆ, ಮೈನ್ಸ್ ಪರೀಕ್ಷೆ ಆಧಾರದಲ್ಲಿ ಅಭ್ಯರ್ಥಿಗಳನ್ನು ಆಯ್ಕೆ ಮಾಡಲಾಗುತ್ತದೆ. ಪ್ರಿಲಿಮಿನರಿ ಪರೀಕ್ಷೆಯು 100 ಅಂಕಗಳನ್ನು ಹೊಂದಿದ್ದು 1 ಗಂಟೆ ಅವಧಿಯದ್ದಾಗಿದೆ. ಮೈನ್ಸ್ ಪರೀಕ್ಷೆಯು 200 ಅಂಕಗಳನ್ನು ಹೊಂದಿದ್ದು, 2ಗಂಟೆ 40 ನಿಮಿಷಗಳ ಅವಧಿಯದ್ದಾಗಿದೆ. ಈ ಪರೀಕ್ಷೆ 24.01.2021ರಂದು ಮೂಲಕ ನಡೆಯಲಿದೆ.

ಯಾವ ರೀತಿಯ ಪ್ರಶ್ನೆಗಳು
ಆಬೆjಕ್ಟಿವ್‌ ಪರೀಕ್ಷೆಯು 200 ಅಂಕಗಳ 200 ಪ್ರಶ್ನೆಗಳನ್ನು ಒಳಗೊಂಡಿದ್ದು, ತಲಾ 50 ಪ್ರಶ್ನೆಗಳ 4 ವಿಭಾಗಗಳನ್ನು ಒಳಗೊಂಡಿರುತ್ತವೆ.

1,558 ಹುದ್ದೆಗಳು
ಒಟ್ಟು 1,558 ಕ್ಲರಿಕಲ್‌ ಕೇಡರ್‌ ಹುದ್ದೆಗಳನ್ನು ಭರ್ತಿ ಮಾಡಲು ಈ ನೇಮಕಾತಿ ಪ್ರಕ್ರಿಯೆ ನಡೆಸುತ್ತಿದ್ದು, ಅರ್ಜಿ ಸಲ್ಲಿಸಿದ ಅಭ್ಯರ್ಥಿಗಳಿಗೆ ಆನ್‌ಲೈನ್‌ ಮೂಲಕ ಪೂರ್ವಭಾವಿ ಪರೀಕ್ಷೆ ಮತ್ತು ಮುಖ್ಯ ಪರೀಕ್ಷೆ ನಡೆಸಲಾಗುತ್ತದೆ. ಹುದ್ದೆಗಳು ಪೂರ್ಣಾವಧಿಯದಾಗಿದ್ದು, ಮಾಸಿಕ 20,000- 39,992ರೂ. ವೇತನವನ್ನು ಹೊಂದಿದೆ.

Advertisement

ಯಾವ್ಯಾವ ಬ್ಯಾಂಕ್‌ಗಳು?
ಬ್ಯಾಂಕ್‌ ಆಫ್ ಬರೋಡಾ, ಕೆನರಾ ಬ್ಯಾಂಕ್‌, ಇಂಡಿಯನ್‌ ಓವರ್‌ಸೀಸ್‌ ಬ್ಯಾಂಕ್‌, ಯುಸಿಒ ಬ್ಯಾಂಕ್‌, ಬ್ಯಾಂಕ್‌ ಆಫ್ ಇಂಡಿಯಾ, ಸೆಂಟ್ರಲ್‌ ಬ್ಯಾಂಕ್‌ ಆಫ್ ಇಂಡಿಯಾ, ಪಂಜಾಬ್‌ ನ್ಯಾಶನಲ್‌ ಬ್ಯಾಂಕ್‌, ಯೂನಿಯನ್‌ ಬ್ಯಾಂಕ್‌ ಆಫ್ ಇಂಡಿಯಾ, ಬ್ಯಾಂಕ್‌ ಆಫ್ ಮಹಾರಾಷ್ಟ್ರ, ಇಂಡಿಯನ್‌ ಬ್ಯಾಂಕ್‌, ಪಂಜಾಬ್‌, ಸಿಂಧ್‌ ಬ್ಯಾಂಕ್‌.

ಅರ್ಹತೆಗಳು
ಭಾರತ ಸರಕಾರದ ಮಾನ್ಯತೆ ಪಡೆದ ವಿಶ್ವವಿದ್ಯಾನಿಲಯದಿಂದ ಯಾವು ದಾದರೂ ಪದವಿ ಪಡೆದಿರಬೇಕು. ಅಧಿಕೃತ ಅಂಕ ಪಟ್ಟಿ ಅಥವಾ ಪದವಿ ಸರ್ಟಿಫಿಕೆಟ್‌ ಕಡ್ಡಾಯ.

ವಯೋಮಿತಿ:
ಅರ್ಜಿ ಸಲ್ಲಿಸಲು ಕನಿಷ್ಠ 20 ವರ್ಷ, ಗರಿಷ್ಠ 28 ವರ್ಷ ವಯೋಮಿತಿ ಮೀರಿರಬಾರದು. ಅರ್ಜಿ ಸಲ್ಲಿಸಲು ಎಸ್ಸಿ/ಎಸ್ಟಿ ಅಭ್ಯರ್ಥಿಗಳಿಗೆ 5 ವರ್ಷಗಳು, ಹಿಂದುಳಿದ ವರ್ಗಗಳ ಅಭ್ಯರ್ಥಿಗಳಿಗೆ 3 ವರ್ಷಗಳು, ಅಂಗವಿಕಲ ಅಭ್ಯರ್ಥಿಗಳಿಗೆ 10 ವರ್ಷಗಳು, ಮಾಜಿ ಸೈನಿಕ ಅಭ್ಯರ್ಥಿಗಳಿಗೆ 8 ವರ್ಷಗಳ ವಯೋಮಿತಿ ಸಡಿಲಿಕೆ ಇರುತ್ತದೆ.

ಹೆಚ್ಚಿನ ಮಾಹಿತಿಗಾಗಿ
https://ibpsonline.ibps.in/crpcl10aug20/

Advertisement

Udayavani is now on Telegram. Click here to join our channel and stay updated with the latest news.

Next