Advertisement

ಐಬಿಎಂ ಇಂಡಿಯಾ ಆಡಳಿತ ನಿರ್ದೇಶಕರಾಗಿ ಕರಣ್‌ ಬಾಜ್ವಾ ನೇಮಕ

03:14 PM Jan 04, 2017 | udayavani editorial |

ಹೊಸದಿಲ್ಲಿ : ಐಬಿಎಂ ಇಂಡಿಯಾ ಇದರ ಆಡಳಿತ ನಿರ್ದೇಶಕರನ್ನಾಗಿ ಕರಣ್‌ ಬಾಜ್ವಾ ಅವರನ್ನು ನೇಮಿಸಲಾಗಿದೆ. ಬಾಜ್ವಾ ಅವರು ವನಿತಾ ನಾರಾಯಣ ಅವರ ಉತ್ತರಾಧಿಕಾರಿಯಾಗಿದ್ದಾರೆ. ವನಿತಾ ನಾರಾಯಣ ಅವರನ್ನು ಐಬಿಎಂ ಇಂಡಿಯಾದ ಅಧ್ಯಕ್ಷ ಹುದ್ದೆಗೆ ಏರಿಸಲಾಗಿದೆ.

Advertisement

ಬಾಜ್ವಾ ಅವರು ಕಳೆದ ವರ್ಷ ಐಬಿಎಂನ ಏಶ್ಯ ಪೆಸಿಫಿಕ್‌ ವಲಯದ ವ್ಯೂಹಗಾರಿಕೆ ಕಾರ್ಯನಿರ್ವಾಹಕರಾಗಿ ಸೇರಿದ್ದರು. ಹಿಂದೆ ಇವರು ಮೈಕ್ರೋಸಾಫ್ಟ್ ಇಂಡಿಯಾ ಇದರ ಮ್ಯಾನೇಜಿಂಗ್‌ ಡೈರೆಕ್ಟರ್‌ ಆಗಿದ್ದರು. 2001-05ರ ಅವಧಿಯಲ್ಲಿ ಇವರು ಸಿಂಗಾಪುರದಲ್ಲಿ  ಐಬಿಎಂ ನ ನೆಟ್‌ವರ್ಕಿಂಗ್‌ ಉದ್ಯಮದೊಂದಿಗೆ ಇದ್ದರು. 

ಸರಕಾರಗಳು ಹಾಗೂ ಔದ್ಯಮಿಕ ಸಂಸ್ಥೆಗಳಿಗೆ ಡಿಜಿಟಲ್‌ ಟ್ರಾನ್‌ಫಾರ್ಮೇಶನ್‌ ನಲ್ಲಿ ನೆರವಾಗುವಲ್ಲಿ ಮುಂಚೂಣಿಯಲ್ಲಿರುವ ಐಬಿಎಂ ಗೆ ಈ ಕ್ಷೇತ್ರದಲ್ಲಿ ವಿಪುಲವಾದ ಅವಕಾಶಗಳಿದ್ದು ಐಬಿಎಂ ಜತೆಗೆ ಕೆಲಸ ಮಾಡುವ ಅವಕಾಶಕ್ಕಾಗಿ ಸಂತಸವಿದೆ ಎಂದು ಬಾಜ್ವಾ ಹೇಳಿದ್ದಾರೆ. 

Advertisement

Udayavani is now on Telegram. Click here to join our channel and stay updated with the latest news.

Next