Advertisement

ಐಎಎಸ್‌ ಅಧಿಕಾರಿ ಶಾ ಫೈಸಲ್‌ಗೆ ಕೇಂದ್ರ ಸಚಿವಾಲಯದಲ್ಲಿ ಕೆಲಸ!

10:10 PM Aug 13, 2022 | Team Udayavani |

ನವದೆಹಲಿ:ಐಎಎಸ್‌ ಹುದ್ದೆಗೆ ರಾಜೀನಾಮೆ ನೀಡಿ ರಾಜಕೀಯ ಪ್ರವೇಶ ಮಾಡಿದ್ದ ಐಎಎಸ್‌ ಅಧಿಕಾರಿ ಶಾ ಫೈಸಲ್‌ ಅವರು ಈಗ ಕೇಂದ್ರ ಪ್ರವಾಸೋದ್ಯಮ ಸಚಿವಾಲಯದ ಉಪ ಕಾರ್ಯದರ್ಶಿಯಾಗಿ ನೇಮಕಗೊಂಡಿದ್ದಾರೆ!

Advertisement

ರಾಜೀನಾಮೆ ಬಳಿಕ ಜಮ್ಮು ಮತ್ತು ಕಾಶ್ಮೀರ ಪೀಪಲ್ಸ್‌ ಮೂವ್‌ಮೆಂಟ್‌(ಜೆಕೆಪಿಎಂ) ಪಕ್ಷವನ್ನು ಸ್ಥಾಪಿಸಿದ್ದ ಅವರು, ನಂತರ ಭ್ರಮನಿರಸನಗೊಂಡಿದ್ದರು. ಕೆಲವು ತಿಂಗಳ ಹಿಂದೆ ಸರ್ಕಾರಕ್ಕೆ ಪತ್ರ ಬರೆದಿದ್ದ ಫೈಸಲ್‌, ತಮ್ಮನ್ನು ಮತ್ತೆ ಸೇವೆಗೆ ಸೇರಿಸಿಕೊಳ್ಳುವಂತೆ ಮನವಿ ಮಾಡಿದ್ದರು. ಏಪ್ರಿಲ್‌ ತಿಂಗಳಲ್ಲಿ ಅವರ ಅರ್ಜಿಯನ್ನು ಸರ್ಕಾರ ಪುರಸ್ಕರಿಸಿತ್ತು.

ಈಗ ಅವರನ್ನು ಪ್ರವಾಸೋದ್ಯಮ ಸಚಿವಾಲಯದ ಉಪ ಕಾರ್ಯದರ್ಶಿಯಾಗಿ ನೇಮಕ ಮಾಡಲಾಗಿದೆ. ಐಎಎಸ್‌ ಟಾಪರ್‌ ಆದ ಜಮ್ಮು ಮತ್ತು ಕಾಶ್ಮೀರದ ಮೊದಲ ನಾಗರಿಕ ಎಂಬ ಹೆಗ್ಗಳಿಕೆ ಫೈಸಲ್‌ರದ್ದು.

Advertisement

Udayavani is now on Telegram. Click here to join our channel and stay updated with the latest news.

Next