Advertisement
ಹೌದು. 2015ರಲ್ಲಿ ಯುಪಿಎಸ್‌ಸಿ ಪರೀಕ್ಷೆಯಲ್ಲಿ ಅಗ್ರಸ್ಥಾನದಲ್ಲಿದ್ದ ಐಎಎಸ್ ಅಧಿಕಾರಿ ಟೀನಾ ದಾಬಿ ಮತ್ತು ಅವರ ಐಎಎಸ್ ಪತಿ ಅಥರ್ ಅಮೀರ್ ಖಾನ್ ವಿಚ್ಛೇದನಕ್ಕಾಗಿ ಜೈಪುರದ ಕುಟುಂಬ ನ್ಯಾಯಾಲಯದಲ್ಲಿ ಅರ್ಜಿ ಸಲ್ಲಿಸಿದ್ದಾರೆ. ಪರಸ್ಪರ ಒಪ್ಪಿಗೆಯಿಂದ ಈ ವಿಚ್ಛೇದನ ಪಡೆಯಲು ಇಬ್ಬರೂ ನಿರ್ಧರಿಸಿದ್ದಾರೆ. ಇವರು 2018 ರಲ್ಲಿ ವಿವಾಹವಾಗಿದ್ದರು. ಅಥರ್ ಕಾಶ್ಮೀರಿ ಕುಟುಂಬಕ್ಕೆ ಸೇರಿದರಾಗಿದ್ದಾರೆ.
Related Articles
Advertisement
ಟೀನಾ ದಾಬಿ ಅವರು ಮೂಲತಃ ಜೈಪುರದವರು. ಆದರೆ ಅವರು ಜನಿಸಿದ್ದು ಭೋಪಾಲ್‌ನಲ್ಲಿ. ಕಾನ್ವೆಂಟ್ ಶಾಲೆಯಲ್ಲಿ ಓದುತ್ತಿರುವಾಗಿನಿಂದಲೂ ಟೀನಾ ಅಗ್ರಸ್ಥಾನದಲ್ಲಿ ಗುರುತಿಸಿಕೊಂಡವಳು. ಆದರೆ ಅವಳು 7ನೇ ತರಗತಿಯಲ್ಲಿದ್ದಾಗ ಅವಳ ಇಡೀ ಕುಟುಂಬ ದಿಲ್ಲಿಗೆ ಸ್ಥಳಾಂತರಗೊಂಡಿತು. ಟೀನಾ ತಂದೆ ಜಸ್ವಂತ್ ದಾಬಿ ಮತ್ತು ತಾಯಿ ಹಿಮಾನಿ ಇಬ್ಬರೂ ಎಂಜಿನಿಯರ್‌ಗಳಾಗಿದ್ದಾರೆ. ಇಬ್ಬರೂ ಯುಪಿಎಸ್‌ಸಿ ಮತ್ತು ಐಎಎಸ್ ಪರೀಕ್ಷೆಯಲ್ಲಿ ಉತ್ತೀರ್ಣರಾಗಿದ್ದಾರೆ.
ಯುಪಿಎಸ್‌ಸಿಯಲ್ಲಿ ಆಯ್ಕೆಯಾದ ಅನಂತರ, ಟೀನಾ ಮತ್ತು ಅಥರ್ ಮುಸ್ಸೂರಿಯಲ್ಲಿ ಉದ್ಯೋಗದ ತರಬೇತಿ ಪಡೆಯುತ್ತಿದ್ದರು. ಇಲ್ಲಿ ಇವರಿಬ್ಬರ ಮಧ್ಯೆ ಆತ್ಮೀಯತೆ ಬೆಳೆದು ವಿವಾಹದಲ್ಲಿ ಅಂತ್ಯವಾಗಿತ್ತು. ವಿಶೇಷ ಎಂದರೆ ಮದುವೆಗೆ ಮೊದಲೇ ಟೀನಾ ತನ್ನ ಸಾಮಾಜಿಕ ಮಾಧ್ಯಮದಲ್ಲಿ ಖಾನ್ ಜತೆ ಸಂಬಂಧದಲ್ಲಿ ಇರುವುದಾಗಿ ಬರೆದಿದ್ದಳು. ಆದರೆ ಈಗ ಇಬ್ಬರೂ ಜೀವನ ಪರೀಕ್ಷೆಯಲ್ಲಿ ವಿಫಲವಾಗಿದ್ದು ವಿಚ್ಛೇದನದ ಮೊರೆ ಹೋಗಿದ್ದಾರೆ.