Advertisement

IAF: ವಿಂಗ್‌ ಕಮಾಂಡರ್‌ ವಿರುದ್ದ ಲೈಂಗಿಕ ದೌರ್ಜನ್ಯ ಆರೋಪ ಮಾಡಿದ ವಾಯು ಸೇನೆ ಮಹಿಳಾ ಅಧಿಕಾರಿ

06:29 PM Sep 10, 2024 | Team Udayavani |

ಹೊಸದಿಲ್ಲಿ: ಭಾರತೀಯ ವಾಯು ಸೇನೆಯ (Indian Air Force) ಮಹಿಳಾ ಫ್ಲೈಯಿಂಗ್ ಆಫೀಸರ್ ( Flying Officer) ಒಬ್ಬರು ಜಮ್ಮು ಕಾಶ್ಮೀರ ವಾಯು ಸೇನಾ ನಿಲ್ದಾಣದ ವಿಂಗ್‌ ಕಮಾಂಡರ್‌ ವಿರುದ್ದ ಲೈಂಗಿಕ ದೌರ್ಜನ್ಯದ ಆರೋಪ ಮಾಡಿದ್ದಾರೆ.

Advertisement

ವಿಂಗ್‌ ಕಮಾಂಡರ್‌ ವಿರುದ್ದ ಅತ್ಯಾಚಾರ, ಮಾನಸಿಕ ಹಿಂಸೆ ಮತ್ತು ಸತತ ಹಿಂಬಾಲಿಸುವಿಕೆ ಆರೋಪಗಳನ್ನು ಮಹಿಳಾ ಅಧಿಕಾರಿ ಮಾಡಿದ್ದಾರೆ. ಘಟನೆಯ ಬಗ್ಗೆ ಭಾರತೀಯ ವಾಯು ಸೇನೆಯು ಆಂತರಿಕ ತನಿಖೆಗೆ ಆದೇಶ ನೀಡಿದೆ ಎಂದು ವರದಿ ತಿಳಿಸಿದೆ.

ವಿಂಗ್ ಕಮಾಂಡರ್ ವಿರುದ್ಧ ಮಹಿಳಾ ಅಧಿಕಾರಿ ನೀಡಿದ ದೂರಿನ ಮೇರೆಗೆ ಜಮ್ಮು ಮತ್ತು ಕಾಶ್ಮೀರ ಪೊಲೀಸರು ಎಫ್‌ಐಆರ್ ದಾಖಲಿಸಿದ್ದಾರೆ.

ಐಪಿಸಿ ಸೆಕ್ಷನ್‌ 376 (2) ಅಡಿಯಲ್ಲಿ ಬುದ್ಗಾಮ್‌ ಪೊಲೀಸ್‌ ಠಾಣೆಯಲ್ಲಿ ವಿಂಗ್‌ ಕಮಾಂಡರ್‌ ವಿರುದ್ದ ಪ್ರಕರಣ ದಾಖಲು ಮಾಡಲಾಗಿದೆ.

Advertisement

2023ರ ಡಿಸೆಂಬರ್‌ 31ರ ರಾತ್ರಿ ಈ ಅತ್ಯಾಚಾರ ಘಟನೆ ನಡೆದಿದೆ. ಅಧಿಕಾರಿಗಳ ಮೆಸ್‌ ನಲ್ಲಿ ನಡೆದಿದ್ದ ಹೊಸ ವರ್ಷದ ಪಾರ್ಟಿಯ ವೇಳೆ ತನ್ನ ಕೊಠಡಿಯಲ್ಲಿ ಅಧಿಕಾರಿ ಅತ್ಯಾಚಾರ ನಡೆಸಿದ್ದ ಎಂದು ಮಹಿಳಾ ಅಧಿಕಾರಿ ದೂರಿನಲ್ಲಿ ತಿಳಿಸಿದ್ದಾರೆ.

2021ರಲ್ಲಿ ಇಂತಹದ್ದೇ ಘಟನೆಯೊಂದು ನಡೆದಿತ್ತು. ಆಗ ಮಹಿಳಾ ಪೈಲಟ್‌ ಒಬ್ಬರು ತನ್ನ ಫ್ಲೈಟ್‌ ಕಮಾಂಡರ್‌ ಲೈಂಗಿಕ ದೌರ್ಜನ್ಯ ಎಸಗಿದ್ದಾಗಿ ಜಮ್ಮು ಕಾಶ್ಮೀರ ಹೈಕೋರ್ಟ್‌ ಮೆಟ್ಟಿಲೇರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next