Advertisement

ಮತ್ತಷ್ಟು ಸುಖೋಯ್‌ ಯುದ್ಧ ವಿಮಾನಗಳಲ್ಲಿ ಬ್ರಹ್ಮೋಸ್‌ ಕ್ಷಿಪಣಿ

09:45 PM Oct 07, 2022 | Team Udayavani |

ನವದೆಹಲಿ: ಭಾರತೀಯ ವಾಯುಪಡೆ ಇನ್ನೂ ಹೆಚ್ಚಿನ ಸುಖೋಯ್‌ ಯುದ್ಧ ವಿಮಾನಗಳಲ್ಲಿ ಬ್ರಹ್ಮೋಸ್‌ ಕ್ಷಿಪಣಿಗಳನ್ನು ಅಳವಡಿಸಲು ಮುಂದಾಗಿದೆ. ಅದಕ್ಕಾಗಿ, ಬೆಂಗಳೂರಿನಲ್ಲಿ ಇರುವ ಹಿಂದುಸ್ತಾನ್‌ ಏರೋನಾಟಿಕ್ಸ್‌ ಲಿಮಿಟೆಡ್‌ನ‌ಲ್ಲಿ ಇನ್ನೂ 20-25 ಯುದ್ಧ ವಿಮಾನಗಳನ್ನು ಮಾರ್ಪಾಡುಗೊಳಿಸಿ, ಅದರಲ್ಲಿ ಬ್ರಹ್ಮೋಸ್‌ ಕ್ಷಿಪಣಿಗಳನ್ನು ಅಳವಡಿಸುವ ಬಗ್ಗೆ ಯೋಜನೆ ಸಿದ್ಧಪಡಿಸಿದೆ.

Advertisement

ದೇಶೀಯವಾಗಿ ಇರುವ ತಂತ್ರಜ್ಞಾನ ಅಳವಡಿಸಿಕೊಂಡು ಐಎಎಫ್ ಹೊಂದಿರುವ ಎಲ್ಲಾ ವಿಮಾನಗಳಲ್ಲಿ ಕ್ಷಿಪಣಿಯನ್ನು ಅಳವಡಿಸುವುದು ಐಎಎಫ್ ಉದ್ದೇಶ.

ಸದ್ಯ ರಷ್ಯಾ ನಿರ್ಮಿತ ಸುಖೋಯ್‌-30 ಎಂಕೆಐ ಯುದ್ಧ ವಿಮಾನಗಳ ಪೈಕಿ 40ರಲ್ಲಿ ಸೂಪರ್‌ ಸಾನಿಕ್‌ ಕ್ಷಿಪಣಿಗಳನ್ನು ಅಳವಡಿಸಲಾಗಿದೆ.

ಮೇನಲ್ಲಿ ಯುದ್ಧ ವಿಮಾನದಲ್ಲಿ ಕ್ಷಿಪಣಿಯನ್ನು ಅಳವಡಿಸಿ ಯಶಸ್ವಿಯಾಗಿ ಪರೀಕ್ಷೆ ನಡೆಸಲಾಗಿತ್ತು.

Advertisement

Udayavani is now on Telegram. Click here to join our channel and stay updated with the latest news.

Next