Advertisement

ನಿವೃತ್ತಿ ಅಂಚಿನಲ್ಲಿ ಮಿಗ್‌-21 ಯದ್ಧ ವಿಮಾನ; ವಿಂಗ್‌ ಕಮಾಂಡರ್‌ ಅಭಿನಂದನ್‌ ಬಳಸಿದ್ದ ವಿಮಾನ

09:07 PM Sep 19, 2022 | Team Udayavani |

ನವದೆಹಲಿ: ಭಾರತೀಯ ವಾಯುಪಡೆಯ ಶಸ್ತ್ರಾಗಾರದಲ್ಲಿ ಉಳಿದಿರುವ ಮಿಗ್‌-21 ಯದ್ಧ ವಿಮಾನಗಳ ಪೈಕಿ ಒಂದು ವಿಮಾನವು ಸೆ.30ರಂದು ಬಳಕೆಯಿಂದ ನಿವೃತ್ತಿಯಾಗುತ್ತಿದೆ.

Advertisement

2019ರ ಫೆಬ್ರವರಿಯಲ್ಲಿ ಗಡಿನಿಯಂತ್ರಣ ರೇಖೆಯಲ್ಲಿ ಪಾಕಿಸ್ತಾನದ ಎಫ್-16 ಯುದ್ಧ ವಿಮಾನವನ್ನು ಹೊಡೆದುರುಳಿಸಲು ಈ ವಿಮಾನವನ್ನು ವಿಂಗ್‌ ಕಮಾಂಡರ್‌(ಸದ್ಯ ಗ್ರೂಪ್‌ ಕಮಾಂಡರ್‌) ಅಭಿನಂದನ್‌ ವರ್ಧಮಾನ್‌ ಬಳಸಿದ್ದರು. ಈ ಸಾಹಸಕ್ಕಾಗಿ ಅಭಿನಂದನ್‌ ಅವರಿಗೆ ವೀರ ಚಕ್ರ ಪ್ರದಾನ ಮಾಡಲಾಯಿತು.

ಅಲ್ಲದೇ ಈಗ ನಿವೃತ್ತಿಯಾಗುತ್ತಿರುವ ಮಿಗ್‌-21 ಯುದ್ಧ ವಿಮಾನವು ಪಾಕಿಸ್ತಾನ ವಿರುದ್ಧದ 1999ರ ಕಾರ್ಗಿಲ್‌ ಯುದ್ಧದ “ಅಪರೇಷನ್‌ ಸಫೇದ್‌ ಸಾಗರ್‌’ನ ಭಾಗವಾಗಿತ್ತು.

ಸದ್ಯ ಈ ವಿಮಾನವು “ಸ್ವಾರ್ಡ್‌ ಆಮ್ಸ್‌’ ಎಂದು ಕರೆಯಲ್ಪಡುವ ಶ್ರೀನಗರದ ನಂ.51 ಸ್ಕಾರ್ಡನ್‌ನ ಶಸ್ತ್ರಾಗಾರದಲ್ಲಿದೆ. 2025ರ ವೇಳೆಗೆ ಎಲ್ಲ ಹಳೆಯ ನಾಲ್ಕು ಮಿಗ್‌-21 ಯದ್ಧ ವಿಮಾನಗಳ ನಿವೃತ್ತಿಗೆ ಐಎಎಫ್ ಯೋಜಿಸಿದೆ.

ಮಿಗ್‌-21 ಸೋವಿಯತ್‌ ಕಾಲದ ಸಿಂಗಲ್‌ ಎಂಜಿನ್‌ ಯುದ್ಧ ವಿಮಾನವಾಗಿದೆ. ಇದು ನೆಲ ಮತ್ತು ಆಗಸ ಎರಡು ಕಡೆಯಲ್ಲೂ ಶತ್ರು ವಿಮಾನಗಳನ್ನು ಸದೆಬಡಿಯುವ ಸಾಮರ್ಥ್ಯ ಹೊಂದಿದೆ. ಇದು ಒಂದು ಕಾಲದಲ್ಲಿ ಭಾರತೀಯ ವಾಯು ಪಡೆಯ ಬೆನ್ನೆಲುಬಾಗಿತ್ತು. ಪ್ರಸ್ತುತ 70 ಮಿಗ್‌-21 ಮತ್ತು 50 ಮಿಗ್‌-29 ಯುದ್ಧ ವಿಮಾನಗಳನ್ನು ಐಎಎಫ್ ಹೊಂದಿದೆ.

Advertisement

ಇತ್ತೀಚೆಗೆ ಮಿಗ್‌-21 ವಿಮಾನಗಳ ಅಪಘಾತಗಳು ಹೆಚ್ಚಾಗಿ ಸಂಭವಿಸಿದ್ದು, ಅದರ ಸುರಕ್ಷತೆ ಮತ್ತು ವ್ಯಾಲಿಡಿಟಿ ಬಗ್ಗೆ ಪ್ರಶ್ನೆಗಳು ಮೂಡಿತ್ತು.

Advertisement

Udayavani is now on Telegram. Click here to join our channel and stay updated with the latest news.

Next