Advertisement
ಅಧಿಕ ಭಾರದ ಸಾಮಾಗ್ರಿಗಳನ್ನು ಹೊತ್ತೂಯ್ಯಬಲ್ಲ ಸಾಮರ್ಥ್ಯವಿರುವ ಇಂತಹ ನಾಲ್ಕು ಚಿನೂಕ್ ಹೆಲಿಕಾಫ್ಟರ್ ಗಳನ್ನು ಸೋಮವಾರದಂದು ವಾಯಪಡೆಗೆ ಸೇರ್ಪಡೆಗೊಳಿಸಲಾಯಿತು. ವಾಯು ಸೇನಾ ಮುಖ್ಯಸ್ಥ ಏರ್ ಚೀಫ್ ಮಾರ್ಷಲ್ ಬಿ.ಎಸ್. ಧನೋವಾ ಅವರು ಚಂಢಿಗಢದಲ್ಲಿ ಚಿನೂಕ್ ಹೆಲಿಕಾಫ್ಟರ್ ಗಳನ್ನು ವಾಯುಸೇನೆಗೆ ಔಪಚಾರಿಕವಾಗಿ ಸೇರ್ಪಡೆಗೊಳಿಸಿದರು.
2015ರಲ್ಲಿ ಭಾರತವು 15 ಚಿನೂಕ್ ಹೆಲಿಕಾಪ್ಟರ್ ಗಳಿಗಾಗಿ ಅಮೆರಿಕಾದ ಜೊತೆ 1.5 ಬಿಲಿಯನ್ ಡಾಲರ್ ಮೊತ್ತದ ಒಪ್ಪಂದಕ್ಕೆ ಸಹಿ ಮಾಡಿತ್ತು. ಈ ಒಪ್ಪಂದದ ಪ್ರಕಾರ ಮೊದಲ ಕಂತಿನ ನಾಲ್ಕು ಹೆಲಿಕಾಫ್ಟರ್ ಗಳು ಅಮೆರಿಕಾದಿಂದ ಗುಜರಾತ್ ನ ಮುಂದ್ರಾ ಬಂದರಿನ ಮೂಲಕ ಹಡಗಿನಲ್ಲಿ ಭಾರತಕ್ಕೆ ಆಗಮಿಸಿದ್ದವು, ಬಳಿಕ ಅಲ್ಲಿಂದ ಅವುಗಳನ್ನು ಚಂಡೀಗಢಕ್ಕೆ ರವಾನಿಸಲಾಗಿತ್ತು. ಈ ಮೂಲಕ ಚಿನೂಕ್ ಹೆಲಿಕಾಫ್ಟರ್ ಗಳನ್ನು ಬಳಸುತ್ತಿರುವ 19ನೇ ರಾಷ್ಟ್ರವಾಗಿ ಭಾರತ ಗುರುತಿಸಿಕೊಂಡಂತಾಗಿದೆ. ಒಂದು ಬಾರಿಗೆ 23,000 ಕಿಲೋ ಸಾಮರ್ಥ್ಯದ ಭಾರವನ್ನು ಹೊತ್ತೊಯ್ಯಬಲ್ಲ ಸಾಮರ್ಥ್ಯ ಈ ಹೆಲಿಕಾಫ್ಟರ್ ಗಿದೆ ಮತ್ತಿದರ ಗರಿಷ್ಠ ವೇಗ ಗಂಟೆಗೆ 302 ಕಿಲೋಮೀಟರ್ ಗಳಾಗಿದೆ. ಸೇನಾ ಸಾಮಾಗ್ರಿಗಳನ್ನು ರವಾನಿಸಲು ಮಾತ್ರವೇ ಅಲ್ಲಿದೆ ಚಿನೂಕ್ ಹೆಲಿಕಾಫ್ಟರ್ ಗಳನ್ನು ಮಿಲಿಟರಿ ಕಾರ್ಯಾಚರಣೆ ಸಂದರ್ಭದಲ್ಲಿ ಹಾಗೂ ವಿಕೋಪ ಪರಿಹಾರ ಕಾರ್ಯಾಚರಣೆ ಸಂದರ್ಭದಲ್ಲೂ ಬಳಸಬಹುದಾಗಿರುತ್ತದೆ. ಹೀಗೆ ಬಹುಪಯೋಗಿ ಮಾದರಿಯ ಚಿನೂಕ್ ಹೆಲಿಕಾಪ್ಟರ್ ಗಳ ಸೇರ್ಪಡೆಯಿಂದಾಗಿ ಭಾರತೀಯ ವಾಯುಪಡೆಗೆ ವಿಶೇಷ ಬಲ ಬಂದಂತಾಗಿದೆ.