Advertisement

ಜಮ್ಮು ಕಾಶ್ಮೀರದಲ್ಲಿ IAF ಹೆಲಿಕಾಪ್ಟರ್‌ ಪತನ: ಚಾಲಕ ಸಿಬಂದಿ ಪಾರು

03:10 PM May 23, 2018 | Team Udayavani |

ಹೊಸದಿಲ್ಲಿ : ಭಾರತೀಯ ವಾಯು ಪಡೆಯ ಚೀತಾ ಹೆಲಿಕಾಪ್ಟರ್‌ ಜಮ್ಮು ಕಾಶ್ಮೀರದ ನಾಥಾ ತುದಿಯಲ್ಲಿ ಇಂದು ಬುಧವಾರ ಪತನಗೊಂಡಿದೆ.

Advertisement

ಐಎಎಫ್ ಮೂಲಗಳನ್ನು ಉಲ್ಲೇಖೀಸಿ ವರದಿ ಮಾಡಿರುವ ಪಿಟಿಐ, ಹೆಲಿಕಾಪ್ಟರ್‌ ಒಳಗಿದ್ದ ಎಲ್ಲ ಚಾಲಕ ಸಿಬಂದಿಗಳು ಸುರಕ್ಷಿತವಾಗಿ ಪಾರಾಗಿದ್ದಾರೆ; ಆದರೆ ಈ ದುರ್ಘ‌ಟನೆಯ ನಿಖರ ಕಾರಣವೇನೆಂದು ಗೊತ್ತಾಗಿಲ್ಲ ಎಂದು ಹೇಳಿದೆ.

ಕಳೆದ ಎ.3ರಂದು ಪ್ರಬಲ ಬೀಸುಗಾಳಿಯ ಪ್ರತಿಕೂಲ ಸನ್ನಿವೇಶದಲ್ಲಿ ಇಳಿಯಲು ಯತ್ನಿಸಿದ್ದ ಐಎಎಫ್ ಸರಕು ಸಾಗಣೆ ಹೆಲಿಕಾಪ್ಟರ್‌ ಕೇದಾರನಾಥ ದೇವಾಲಯದ ಸಮೀಪ ಪತನಗೊಂಡಿತ್ತು. ಅದಾಗಿ ಎರಡೇ ತಿಂಗಳಲ್ಲಿ ಈ ದುರಂತ ಸಂಭವಿಸಿದೆ. 

ನಾಥಾ ತುದಿಯಲ್ಲಿಂದು ಪತನಗೊಂಡ ಎಂಐ 17 ಹೆಲಿಕಾಪ್ಟರ್‌ ಭಾರತೀಯ ಸೇನೆಗೆ ಆಹಾರ ಸಾಮಗ್ರಿಗಳನ್ನು ಒಯ್ಯುತ್ತಿತ್ತು. ಹೆಲಿಕಾಪ್ಟರ್‌ ಇಳಿಯುತ್ತಿದ್ದಂತೆಯೇ ಅದು ಕಬ್ಬಿಣದ ಗರ್ಡರ್‌ಗೆ ಢಿಕ್ಕಿ ಹೊಡೆಯಿತು. ಪರಿಣಾಮವಾಗಿ ಹೆಲಿಕಾಪ್ಟರ್‌ ಒಳಗಿದ್ದ ಆರು ಮಂದಿಗೆ ಗಾಯಗಳಾದವು ಎಂದು ವರದಿಗಳು ತಿಳಿಸಿವೆ. 

Advertisement

Udayavani is now on Telegram. Click here to join our channel and stay updated with the latest news.

Next