Advertisement

ದಿಲ್ಲಿ ಮಾಳವೀಯ ನಗರ ಅಗ್ನಿ ದುರಂತ: ವಾಯುಪಡೆ ಹೆಲಿಕಾಪ್ಟರ್‌ ಬಳಕೆ

10:57 AM May 30, 2018 | Team Udayavani |

ಹೊಸದಿಲ್ಲಿ : ಇಲ್ಲಿನ ಮಾಳವೀಯ ನಗರದ ರಬ್ಬರ್‌ ಫ್ಯಾಕ್ಟರಿ ಗೋದಾಮಿನಲ್ಲಿ ನಿನ್ನೆ ಸಂಜೆ ಉಂಟಾಗಿದ್ದ ಭಾರೀ ಬೆಂಕಿಯನ್ನು ನಂದಿಸುವ ಕಾರ್ಯಾಚರಣೆಯಲ್ಲಿ ವಾಯು ಪಡೆಯ ಹೆಲಿಕಾಪ್ಟರ್‌ ಗಳನ್ನು ಬಳಸಿಕೊಳ್ಳಲಾಗುತ್ತಿದೆ.  12 ತಾಸುಗಳು ಕಳೆದರೂ ಬೆಂಕಿಯನ್ನು ನಂದಿಸಲು ಸಾಧ್ಯವಾಗಿಲ್ಲ ಎಂದು ವರದಿಗಳು ತಿಳಿಸಿವೆ. ಹಾಗಿದ್ದರೂ ಈ ತನಕ ಯಾವುದೇ ಸಾವು ನೋವು ಉಂಟಾದ ವರದಿಗಳು ಬಂದಿಲ್ಲ. 

Advertisement

ಮಾಳವೀಯ ನಗರದ ರಬ್ಬರ್‌ ಫ್ಯಾಕ್ಟರಿಯಲ್ಲಿ ನಿನ್ನೆ ಮಂಗಳವಾರ ಸಂಜೆ 5 ಗಂಟೆಗೆ ಬೆಂಕಿ ಅವಘಡ ಸಂಭವಿಸಿತ್ತು. ಕೂಡಲೇ ಐದು ಅಗ್ನಿ ಶಾಮಕಗಳು ಸ್ಥಳಕ್ಕೆ ಧಾವಿಸಿ ಬಂದು ಕಾರ್ಯಾಚರಣೆಗೆ ಇಳಿದವು; ಆದರೆ ಬೆಂಕಿ ನಿಯಂತ್ರಣಕ್ಕೆ ಬಾರದ ಪ್ರಯುಕ್ತ ಇನ್ನೂ ಹತ್ತು ಅಗ್ನಿ ಶಾಮಕಗಳನ್ನು ಕಾರ್ಯಾಚರಣೆಗೆ ಬಳಸಿಕೊಳ್ಳಲಾಯಿತು. ಈಗ ಒಟ್ಟು 15 ಅಗ್ನಿ ಶಾಮಕಗಳು ಸ್ಥಳದಲ್ಲಿವೆ. ಇವುಗಳಿಗೆ ನೆರವಾಗಲು ವಾಯು ಪಡೆಯ ಎಂಐ  17 ಹೆಲಿಕಾಪ್ಟರ್‌ ಬಳಸಿಕೊಳ್ಳಲಾಗುತ್ತಿದೆ. 

ಬೆಂಕಿಯನ್ನು ಪೂರ್ತಿಯಾಗಿ ನಂದಿಸಲು ಇನ್ನೂ ನಾಲ್ಕು ಐದು ತಾಸುಗಳು ಬೇಕಾಗಬಹುದೆಂದು ಅಗ್ನಿ ಶಾಮಕ ದಳದ ಅಧಿಕಾರಿಗಳು ತಿಳಿಸಿದ್ದಾರೆ.

ನಿನ್ನೆ ಸಂಜೆ ಬೆಂಕಿ ಅನಾಹುತ ಸಂಭವಿಸಿದಾಕ್ಷಣ ಈ ಪ್ರದೇಶದಲ್ಲಿನ ಪೊಲೀಸರ ಆಟೋ ಪಾಂಡ್‌ನ‌ಲ್ಲಿದ್ದ ಅನೇಕ ವಾಹನಗಳು ಬೆಂಕಿಗೆ ಆಹುತಿಯಾಗಿದ್ದವು. 

Advertisement

Udayavani is now on Telegram. Click here to join our channel and stay updated with the latest news.

Next