Advertisement

“ತೇಜಸ್‌’ಲಘು ಯುದ್ಧ ವಿಮಾನ ಚಲಾಯಿಸಿದ ವಾಯುಪಡೆ ಮುಖ್ಯಸ್ಥ ಚೌಧರಿ

07:48 PM Aug 07, 2022 | Team Udayavani |

ನವದೆಹಲಿ: ಭಾರತೀಯ ವಾಯುಪಡೆ ಮುಖ್ಯಸ್ಥ ಏರ್‌ ಚೀಫ್ ಮಾರ್ಷಲ್‌ ವಿ.ಆರ್‌. ಚೌಧರಿ ಅವರು ಬೆಂಗಳೂರಿನಲ್ಲಿ ಸ್ವದೇಶಿ ನಿರ್ಮಿತ ಲಘು ಯುದ್ಧ ವಿಮಾನ ತೇಜಸ್‌ ಅನ್ನು ಚಲಾಯಿಸಿದ್ದಾರೆ.

Advertisement

ವಾಯುಪಡೆಗೆ ಸೇರ್ಪಡೆಗೊಳ್ಳಲಿರುವ ದೇಶೀಯವಾಗಿ ನಿರ್ಮಿಸಲಾಗಿರುವ ವಿಮಾನಗಳ ಪರಿಶೀಲನೆಗಾಗಿ ಅವರು 2 ದಿನಗಳ ಅವಧಿಗೆ ಬೆಂಗಳೂರಿಗೆ ಭೇಟಿ ನೀಡಿದ್ದಾರೆ.

ಈ ಕುರಿತು ಟ್ವೀಟ್‌ ಮಾಡಿರುವ ವಾಯುಪಡೆ, “ಬೆಂಗಳೂರು ಭೇಟಿಯಲ್ಲಿರುವ ವಾಯುಪಡೆ ಮುಖ್ಯಸ್ಥರಾದ ಚೌಧರಿ ಲಘು ಯುದ್ಧ ವಿಮಾನ ಎಂಕೆ 1 ತೇಜಸ್‌, ಲಘು ಯುದ್ಧ ಹೆಲಿಕಾಪ್ಟರ್‌ ಮತ್ತು ಎಚ್‌ಟಿಟಿ-40ಯನ್ನು ಚಲಾಯಿಸಿದ್ದಾರೆ.

ರಕ್ಷಣಾ ಇಲಾಖೆಯಲ್ಲಿ ಆತ್ಮನಿರ್ಭರ ಭಾರತ ನಿರ್ಮಿಸುವ ಉದ್ದೇಶದಂತೆ ಈ ವಿಮಾನಗಳು ವಾಯುಪಡೆಗೆ ಸೇರ್ಪಡೆಗೊಳ್ಳಲಿವೆ’ ಎಂದು ಬರೆದುಕೊಂಡಿದೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next