ಗುವಾಹಟಿ : ಭೀಕರ ಪ್ರವಾಹದಿಂದ ಅಸ್ಸಾಂ ನಲುಗಿದ್ದು, ಈ ವೇಳೆ ಮಹಾರಾಷ್ಟ್ರದ ಬಂಡಾಯ ಶಿವಸೇನೆಯ ಶಾಸಕರು ರಾಜ್ಯದಲ್ಲಿ ಬೀಡು ಬಿಟ್ಟಿರುವ ಕುರಿತು ಹಲವರು ಅಸ್ಸಾಂ ಮುಖ್ಯಮಂತ್ರಿ ಹಿಮಂತ ಬಿಸ್ವಾ ಶರ್ಮಾ ಅವರನ್ನು ಟೀಕಿಸುತ್ತಿದ್ದಾರೆ.
ಟೀಕೆಗಳ ಕುರಿತು ಪ್ರತಿಕ್ರಿಯಿಸಿದ ಶರ್ಮಾ , ಹೊರಗಿನಿಂದ ಬಂದವರಿಗೆ ಭದ್ರತೆ, ಸೌಕರ್ಯ ಒದಗಿಸುವುದು ನಮ್ಮ ಕೆಲಸ. ಇಂದು ಶಿವಸೇನೆ ಬಂದಿದ್ದು,ನಾಳೆ ಕಾಂಗ್ರೆಸ್ ನವರು ಬಂದರೂ ಇದೇ ರೀತಿ ಸ್ವಾಗತ ಕೋರುತ್ತೇನೆ. ಅಸ್ಸಾಂನ ಪ್ರವಾಹವನ್ನು ಎತ್ತಿ ತೋರಿಸಿದ್ದಕ್ಕಾಗಿ ನಾನು ಕೃತಜ್ಞನಾಗಿದ್ದೇನೆ ಎಂದು ಟೀಕಾಕಾರರ ವಿರುದ್ಧ ಕಿಡಿ ಕಾರಿದ್ದಾರೆ.
ನಾವು ಗುವಾಹಟಿಯಲ್ಲಿ 200 ಹೋಟೆಲ್‌ಗಳನ್ನು ಹೊಂದಿದ್ದೇವೆ ಮತ್ತು ಎಲ್ಲದರಲ್ಲೂ ಅತಿಥಿಗಳು ಇದ್ದಾರೆ. ಪ್ರವಾಹ ಪರಿಸ್ಥಿತಿಯನ್ನು ತಿಳಿಸಿ ಅತಿಥಿಗಳನ್ನು ನಾವು ತೆಗೆದುಹಾಕುತ್ತೇವೆಯೇ? ಮಹಾರಾಷ್ಟ್ರದಲ್ಲಿ ಬಿಜೆಪಿ, ಬಂಡಾಯ ಶಿವಸೇನೆ ಶಾಸಕರಿಗೆ ಬೆಂಬಲ ನೀಡುತ್ತಿದೆ, ನಾನು ಅದರಲ್ಲಿ ಭಾಗಿಯಾಗುವುದಿಲ್ಲ ಎಂದಿದ್ದಾರೆ.
ಇದನ್ನೂ ಓದಿ : ತುರ್ತುಪರಿಸ್ಥಿತಿ: ಅಧಿಕಾರಕ್ಕಾಗಿ ಕಾಂಗ್ರೆಸ್ ಸಾಂವಿಧಾನಿಕ ಹಕ್ಕನ್ನೇ ಕಸಿದುಕೊಂಡಿತ್ತು: ಶಾ