Advertisement
ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು ‘ಕಾಮಗಾರಿಗೆ ಹಣ ಬಿಡುಗಡೆ ಮಾಡುವುದನ್ನು ಸರಕಾರ ತಡೆದ ವಿಚಾರಕ್ಕೆ ಸಂಬಂಧಿಸಿ ಪ್ರತಿಕ್ರಿಯಿಸಿ, ಎಷ್ಟು ಪರ್ಸೆಂಟ್ ಕಮೀಷನ್ ವೈಟ್ ಮಾಡುತ್ತಿದ್ದೀರಾ? ಪರ್ಸೆಂಟೆಜ್ ಗಾಗಿ ನೀವು ಇಂಥ ಆದೇಶ ಮಾಡಿದ್ದಿರಾ? ಆಡಳಿತ ನಡೆಸುವವರು ಬದಲಾಗುತ್ತಾರೆ. ಆಡಳಿತ ವ್ಯವಸ್ಥೆ ಬದಲಾಗುವುದಿಲ್ಲ.ವ್ಯವಸ್ಥೆ ಹೀಗಿರುವಾಗ ಕಾಮಗಾರಿಗೆ ಹಣ ಬಿಡುಗಡೆ ಯಾಕೆ ತಡೆದಿದ್ದೀರಿ ಎಂದು ಪ್ರಶ್ನಿಸಿದರು.
Related Articles
Advertisement
ವಿಧಾನಸಭಾ ಚುನಾವಣಾ ಫಲಿತಾಂಶದ ಪರಿಣಾಮ ಲೋಕಸಭಾ ಚುನಾವಣೆ ಮೇಲೆ ಬೀರುವುದಿಲ್ಲ. ದೇಶಕ್ಕೆ ಎಂತಹ ನಾಯಕ ಬೇಕು ಅಂತಾ ಕನ್ನಡಿಗರಿಗೆ ಗೊತ್ತಿದೆ. ಗ್ಯಾರಂಟಿ ಕಾರ್ಡ್ ವಿಚಾರದಲ್ಲಿ ಬಿಜೆಪಿ ಎಚ್ಚೆತ್ತು ಕೊಳ್ಳಬೇಕಿತ್ತು. ಎಚ್ಚೆತ್ತು ಕೊಂಡಿದ್ದರೆ ಬಿಜೆಪಿಗೆ ಇವತ್ತು ಈ ಸ್ಥಿತಿ ಬರುತ್ತಿರಲಿಲ್ಲ.ಗ್ಯಾರಂಟಿ ಸ್ಕಿಂ ಪರ ನಾನು ಇದ್ದೇನೆ. ಆದಾಯದ ಆಧಾರದ ಮೇಲೆ ಖರ್ಚು ಮಾಡಬೇಕು ಎಂಬ ನಿಯಮ ವಿಧಾನಸಭೆಯಲ್ಲಿ ಇದೆ.ವಿತ್ತಿಯ ಹೊಣೆಗಾರಿಕೆ ಬಿಲ್ ಕರ್ನಾಟಕದಲ್ಲಿ ಪಾಸ್ ಆಗಿದೆ. ಮುಂದಿನ ತಲೆ ಮಾರನ್ನು ಅಪಾಯಕ್ಕೆ ತಳ್ಳಬೇಡಿ. ಗ್ಯಾರಂಟಿ ಕಾರ್ಡ್ ಅಲ್ಲಿ ಕಂಡಿಷನ್ ಅಪ್ಲೇ ಎಂದು ಎಲ್ಲೂ ಹಾಕಿಲ್ಲ.ಎಲ್ಲಾ ಮನೆಯ ಯಜಮಾನಿಗೆ 2 ಸಾವಿರ ಕೊಡಬೇಕು. ಎಲ್ಲಾ ಮಹಿಳೆಯರಿಗೆ ಉಚಿತ ಬಸ್ ಪಯಣಕ್ಕೆ ಅವಕಾಶ ಕೊಡಬೇಕು.ಜೂನ್ 1 ರವರೆಗೆ ಕಾಯುತ್ತೇನೆ. ಜೂನ್ 1 ರಿಂದ 200 ಯೂನಿಟ್ ಒಳಗೆ ವಿದ್ಯುತ್ ಬಿಲ್ ಬಂದರೆ ಬಿಲ್ ಕಟ್ಟಬೇಡಿ.200 ಯೂನಿಟ್ ಮೇಲೆ ಎಷ್ಟು ಯೂನಿಟ್ ಬಳಸುತ್ತಿರಾ ಹೆಚ್ಚುವರಿಗೆ ಮಾತ್ರ ಕಟ್ಟಿ. ಕಂಡಿಷನ್ ಹಾಕಿದರೆ ಜೂನ್ 1 ರಿಂದ ಹೋರಾಟ ಮಾಡುತ್ತೇವೆ ಎಂದರು. ನಿಮ್ಮ ಮುಖ ನೋಡಿ ಮತ ಹಾಕಿಲ್ಲ. ಗ್ಯಾರಂಟಿ ಕಾರ್ಡ್ ನೋಡಿ ಮತ ಹಾಕಿದ್ದಾರೆ ಅದು ನೆನಪಿರಲಿ.ನಾವು ಸೋತಿದ್ದೇವೆ. ನಾವು ಸತ್ತಿಲ್ಲ. ಕೊಟ್ಟ ಭರವಸೆ ಈಡೇರಿಸಿ. ರಾಜಸ್ಥಾನದಲ್ಲಿ ಇದೇ ರೀತಿ ಹೇಳಿ ಇವತ್ತಿನವರೆಗೆ ಮಾಡಿಲ್ಲ.ಸಿದ್ದರಾಮಯ್ಯ ಅವರು ಅಥವಾ ನಾನು ಯಾರು ಆರ್ಥಿಕ ತಜ್ಞರಲ್ಲ. ಸಿಎಂ ಕುರ್ಚಿ ಅನ್ನೋದು ಯಾರ ಸ್ವತ್ತೂ ಅಲ್ಲ ಎಂದರು. ಪೊಲೀಸ್ ವ್ಯವಸ್ಥೆ ಅನ್ನೋದು ಶಾಶ್ವತ ಇರುತ್ತದೆ. ವಿಧಾನಸೌಧದದಲ್ಲಿ ಕೂತು ಪೊಲೀಸ್ ಇಲಾಖೆಗೆ ಧಮ್ಕಿ ಹಾಕುತ್ತೀರಾ? ಮೊದಲು ಪೊಲೀಸ್ ಇಲಾಖೆ ಗೆ ಧಮ್ಕಿ ಹಾಕುವುದು ನಿಲ್ಲಿಸಿ.ಫೆಬ್ರವರಿ ಯಲ್ಲಿ ಅಶ್ವಥ್ ನಾರಾಯಣ್ ನೀಡಿದ ಹೇಳಿಕೆಗೆ ಈಗ ಧಮ್ಕಿ ಹಾಕಿ ಎಫ್ಐ ಆರ್ ಮಾಡಿಸಿದ್ದಾರೆ ಎಂದರು. ಸರಕಾರ ಯಾರದ್ದೆ ಇರಬಹುದು ನಾನು ಚಾಮುಂಡಿ ಬೆಟ್ಟದಲ್ಲಿ ಮಹಿಷಾ ದಸರಾ ನಡೆಯುವುದಕ್ಕೆ ಬಿಡಲ್ಲ ಎಂದರು.