Advertisement
ಖಾಸಗಿ ಕ್ಷೇತ್ರದಲ್ಲಿ ಕನ್ನಡಿಗರಿಗೆ ಉದ್ಯೋಗ ದೊರಕಿಸುವ ಹಿನ್ನೆಲೆಯಲ್ಲಿ ಡಾ.ಸರೋಜಿನಿ ಮಹಿಷಿ ವರದಿ ಜಾರಿಗೆ ಸ್ವಾತಂತ್ರ್ಯ ಹೋರಾಟಗಾರ ಎಚ್.ಎಸ್.ದೊರೆಸ್ವಾಮಿ ಸೇರಿದಂತೆ ಹಲವರು ಸಲಹೆ ನೀಡಿದ್ದಾರೆ. ಈ ಹಿನ್ನೆಲೆಯಲ್ಲಿ ವರದಿ ಜಾರಿಗೆ ಪ್ರಯತ್ನಿಸುವುದಾಗಿ ತಿಳಿಸಿದರು. ಈ ನಾಡಿನ ನೆಲ-ಜಲ, ಭಾಷೆಯ ಉಳಿವಿನ ಬಗ್ಗೆ ಆತ್ಮಾವಲೋಕನ ಮಾಡಿಕೊಳ್ಳಬೇಕಾಗಿದೆ.
Related Articles
Advertisement
ಹೇಳಿಕೆ ನೀಡುವಾಗ ತೂಕದ ಪದ ಬಳಸಿ: “ಮನೆ ಹಾಳ್ರು’ ಹೇಳಿಕೆ ವಿಚಾರವಾಗಿ ಸಚಿವ ಸಿ.ಟಿ.ರವಿ ಅವರಿಗೆ ಮುಖ್ಯಮಂತ್ರಿಗಳ ಎದುರೆ ವೇದಿಕೆಯಲ್ಲಿ ಸ್ವಾತಂತ್ರ್ಯ ಹೋರಾಟಗಾರ ಎಚ್.ಎಸ್.ದೊರೆಸ್ವಾಮಿ ಅವರು ತರಾಟೆ ತೆಗೆದುಕೊಂಡರು. ನೀವು ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಚಿವರಿದ್ದೀರಿ. ಹೇಳಿಕೆ ನೀಡುವಾಗ ತೂಕದ ಪದಗಳನ್ನು ಬಳಕೆ ಮಾಡಿರಿ ಎಂದು ಸಲಹೆ ನೀಡಿದರು. ಕನ್ನಡ ಓದಿಕೊಂಡಿದ್ದೀರಿ, ಸಂಸ್ಕೃತಿ ತಿಳಿದುಕೊಂಡಿದ್ದೀರಿ, ಕನ್ನಡದ ಪದದ ಬಗ್ಗೆ ಜ್ಞಾನವಿದೆ. ಹೀಗಾಗಿ, ಕೆಟ್ಟ ಪದಗಳನ್ನು ಬಳಕೆ ಮಾಡದಿರಿ ಎಂದು ಮನವಿ ಮಾಡಿದರು.
ಪ್ರಶಸ್ತಿ ಪಡೆದ ಸಾಧಕರು: ಎಚ್.ಎಸ್.ದೊರೆಸ್ವಾಮಿ (ಬಸವ ಪುರಸ್ಕಾರ ರಾಷ್ಟ್ರೀಯ ಪ್ರಶಸ್ತಿ), ಚನ್ನಮ್ಮ ಹಳ್ಳಿಕೇರಿ ( ಶ್ರೀ ಭಗವಾನ್ ಮಹಾವೀರ ಶಾಂತಿ ರಾಷ್ಟ್ರೀಯ ಪ್ರಶಸ್ತಿ), ಟಿ.ಎನ್.ಕೃಷ್ಣನ್ ( ಟಿ.ಚೌಡಯ್ಯ ರಾಷ್ಟ್ರೀಯ ಪ್ರಶಸ್ತಿ), ಬಿ.ಎಸ್. ಮಠ (ನಿಜಗುಣ ಪುರಂದರ ಪ್ರಶಸ್ತಿ), ಪ್ರಕಾಶ ಕಡಪಟ್ಟಿ ( ಡಾ.ಗುಬ್ಬಿ ವೀರಣ್ಣ ಪ್ರಶಸ್ತಿ), ಸಿ.ಚಂದ್ರಶೇಖರ (ವರ್ಣಶಿಲ್ಪ ವೆಂಕಟಪ್ಪ ಪ್ರಶಸ್ತಿ), ಚಂದ್ರಶಾ ತಮ್ಮಣ್ಣಪ್ಪ ಮಾಳಗೆ ಮತ್ತು ಹಿನಕಲ್ ಮಹದೇವಯ್ಯ ( ಜಾನಪದಶ್ರೀ ಪ್ರಶಸ್ತಿ), ಭಾನುಮತಿ (ಶಾಂತಲಾ ನಾಟ್ಯ ಪ್ರಶಸ್ತಿ), ಲಕ್ಷಿನಾರಾಯಣ ಆಚಾರ್ಯ ಕೋಟೇಶ್ವರ (ಜಕಣಾಚಾರಿ ಪ್ರಶಸ್ತಿ), ಹುಸೇನ್ ಸಾಬ್( ಸಂತ ಶಿಶುನಾಳ ಪ್ರಶಸ್ತಿ),ರೇವಣಸಿದ್ದ ಶಾಸ್ತ್ರೀ ( ಕುಮಾರ ವ್ಯಾಸ ಪ್ರಶಸ್ತಿ), ಪ್ರೊ.ಷ.ಶೆಟ್ಟರ್ (ಪಂಪ ಪ್ರಶಸ್ತಿ), ಪ್ರೊ.ಕೆ.ಜಿ.ಕುಂದಾಣಗಾರ (ಗಡಿನಾಡ ಸಾಹಿತ್ಯ ಪ್ರಶಸ್ತಿ), ಬಿ.ಗಂಗಾಧರಮೂರ್ತಿ, ಎಚ್.ಎಂ.ಬೀಳಗಿ (ದಾನ ಚಿಂತಾಮಣಿ ಅತ್ತಿಮಬ್ಬೆ ಪ್ರಶಸ್ತಿ) ಎಸ್.ಆರ್. ಹಿರೇಮಠ (ಸಂಗೊಳ್ಳಿ ರಾಯಣ್ಣ ಪ್ರಶಸ್ತಿ) ಮತ್ತು ದು.ಸರಸ್ವತಿ (ಅಕ್ಕಮಹಾದೇವಿ ಪ್ರಶಸ್ತಿ).