Advertisement
ಹೊಸ ರಾಜಕೀಯ ಇನ್ನಿಂಗ್ಸ್ ನ ಭಾಗವಾಗಿ ನೂತನ ಪಕ್ಷವನ್ನು ಸ್ಥಾಪನೆ ಮಾಡುವುದಾಗಿ ಜನಾರ್ದನ ರೆಡ್ಡಿ ಅವರು ಘೋಷಣೆ ಮಾಡಿಕೊಂಡಿದ್ದಾರೆ. ಹೊಸ ‘ಕಲ್ಯಾಣ ರಾಜ್ಯ ಪ್ರಗತಿ ಪಕ್ಷ’ವನ್ನು ಸ್ಥಾಪನೆ ಮಾಡಿ ಮುಂದಿನ ಚುನಾವಣೆಗೆ ಸ್ಪರ್ಧೆ ಮಾಡುತ್ತೇನೆ ಎಂದು ಹೇಳಿದ್ದಾರೆ.
Related Articles
Advertisement
ವಿಜಯೇಂದ್ರ ಅವರು ವರುಣಾ ಕ್ಷೇತ್ರದಲ್ಲಿ ಕೆಲಸ ಮಾಡಿಕೊಂಡಿದ್ದರು. ಆದರೆ ವಿಜಯೇಂದ್ರಗೆ ಟಿಕೆಟ್ ಕೊಡುವುದಿಲ್ಲವೆಂದು ಮೊದಲೇ ಹೈಕಮಾಂಡ್ ಹೇಳಬೇಕಿತ್ತು. ನಾಮಪತ್ರ ಸಲ್ಲಿಕೆಗೆ ಅವರು ಸಿದ್ದವಾಗಿದ್ದರು. ರಾಮುಲು ಕೂಡಾ ವಿಜಯೇಂದ್ರ ನಾಮಪತ್ರ ಸಲ್ಲಿಕೆಗೆ ಹೋಗಬೇಕೆಂದು ಹೇಳಿದ್ದರು. ಆದರೆ ವೇದಿಕೆ ಮೇಲೆ ಯಡಿಯೂರಪ್ಪ ವಿಜಯೇಂದ್ರ ಸ್ಪರ್ಧೆ ಮಾಡುವುದಿಲ್ಲ ಅಂದರು. ಯಡಿಯೂರಪ್ಪ ಬಾಯಲ್ಲಿಯೇ ಅದನ್ನ ಹೇಳಿಸಿದರು. ತಂದೆ ಬಾಯಲ್ಲಿ ಹೀಗೆ ಹೇಳಿಸಲು ಏನೆಲ್ಲ ಒತ್ತಡವಿತ್ತು. ಅವತ್ತು ವಿಜಯೇಂದ್ರಗೆ ಟಿಕೆಟ್ ಕೊಟ್ಟಿದ್ದರೆ ಇನ್ನಷ್ಟು ಸ್ಥಾನ ಬಿಜೆಪಿಗೆ ಬರುತ್ತಿತ್ತು. ನನ್ನನ್ನು ಮೊಳಕಲ್ಮೂರಿಗೆ ಸೀಮಿತ ಮಾಡದೇ ಇದ್ದಿದ್ದರೆ 130 ಸ್ಥಾನ ಬಿಜೆಪಿಗೆ ಬರುತ್ತಿತ್ತು ಎಂದು ರೆಡ್ಡಿ ಹೇಳಿದರು.
ಬಿಜೆಪಿಯಲ್ಲಿ ಯಡಿಯೂರಪ್ಪ ಸೈಡ್ ಲೈನ್ ಆಗಿದ್ದಾರಾ ಎಂಬ ಪ್ರಶ್ನಗೆ ಉತ್ತರಿಸಿದ ಅವರು, ಯಡಿಯೂರಪ್ಪನವರ ಅಧಿಕಾರವನ್ನು ಕಿತ್ತುಕೊಳ್ಳಬಹುದು. ಆದರೆ ಅವರ ಶಕ್ತಿ ಯಾರು ಕಿತ್ತುಕೊಳ್ಳಲು ಆಗುವುದಿಲ್ಲ ಎಂದರು.