Advertisement

World Cup ಮೂರು ವಿಕೆಟ್‌ ಬಿದ್ದಾಗ ನಾನು ಆತಂಕಗೊಂಡಿದ್ದೆ: ರೋಹಿತ್‌

11:54 PM Oct 09, 2023 | Team Udayavani |

ಚೆನ್ನೈ: ಪಟಪಟನೆ 3 ವಿಕೆಟ್‌ ಬಿದ್ದಾಗ ತಾನು ತೀವ್ರ ಆತಂಕಗೊಂಡಿದ್ದೆ ಎಂಬುದಾಗಿ ಟೀಮ್‌ ಇಂಡಿಯಾ ನಾಯಕ ರೋಹಿತ್‌ ಶರ್ಮ ಪ್ರತಿ ಕ್ರಿಯಿಸಿದ್ದಾರೆ. ಆಸ್ಟ್ರೇಲಿಯ ವಿರು ದ್ಧದ ಮೊದಲ ವಿಶ್ವಕಪ್‌ ಪಂದ್ಯದ ಬಳಿಕ ಅವರು ತಮ್ಮ ಅನಿಸಿಕೆಯನ್ನು ಹೊರಗೆಡಹಿದರು.

Advertisement

“ಪ್ರಾಮಾಣಿಕವಾಗಿ ಹೇಳಬೇಕೆಂದರೆ ನಾನು ಬಹಳ ಆತಂಕಗೊಂಡಿದ್ದೆ, ನರ್ವಸ್‌ ಆಗಿದ್ದೆ. ಚೇಸಿಂಗ್‌ ವೇಳೆ ಇಂಥ ಸ್ಥಿತಿಯನ್ನು ಯಾವ ತಂಡವೂ ಬಯಸುವುದಿಲ್ಲ. ಇದಕ್ಕಾಗಿ ಆಸ್ಟ್ರೇ ಲಿಯ ಬೌಲರ್‌ಗಳನ್ನು ನಾನು ಪ್ರಶಂಸಿಸುತ್ತೇನೆ. ಆದರೆ ಇದರಲ್ಲಿ ನಮ್ಮ ತಪ್ಪುಗಳೂ ಸಾಕಷ್ಟಿವೆ. ಕೆಟ್ಟ ಹೊಡೆತಗಳು ಮುಳುವಾದವು. ಪವರ್‌ ಪ್ಲೇಯಲ್ಲಿ ಹೆಚ್ಚು ರನ್‌ ಗಳಿಸಬೇಕೆಂಬ ಧಾವಂತದಲ್ಲಿ ಹೀಗಾಗುತ್ತದೆ’ ಎಂಬು ದಾಗಿ ರೋಹಿತ್‌ ಹೇಳಿದರು.
ರೋಹಿತ್‌ ಶರ್ಮ ಏಕದಿನ ವಿಶ್ವಕಪ್‌ನಲ್ಲಿ ಭಾರತವನ್ನು ಮೊದಲ ಸಲ ಮುನ್ನಡೆಸುತ್ತಿದ್ದಾರೆ. ಇಲ್ಲಿ ಅವರು ಕೂಡ ಖಾತೆ ತೆರೆಯಲು ವಿಫ‌ಲರಾದರು. ಕೊನೆಯಲ್ಲಿ ವಿರಾಟ್‌ ಕೊಹ್ಲಿ-ಕೆ.ಎಲ್‌. ರಾಹುಲ್‌ ಅಮೋಘ ಜತೆಯಾಟದ ಮೂಲಕ ತಂಡದ ಗೆಲುವನ್ನು ಸಾರಿದರು. ಆಗಲೇ ರೋಹಿತ್‌ ನಿರಾಳಗೊಂಡದ್ದು.

“ಕೊಹ್ಲಿ-ರಾಹುಲ್‌ ಆಪತಾºಂಧವರ ಪಾತ್ರವನ್ನು ಯಶಸ್ವಿಯಾಗಿ ನಿಭಾಯಿಸಿ ಭಾರತಕ್ಕೆ ಗೆಲುವನ್ನು ತಂದಿತ್ತರು. ಇದೊಂದು ಸ್ಮರಣೀಯ ಇನ್ನಿಂಗ್ಸ್‌ ಆಗಿದೆ. ಅವರು ಒತ್ತಡವನ್ನು ಬಹಳ ಚಾಕಚಕ್ಯತೆಯಿಂದ ಕೊಡವಿಕೊಳ್ಳುತ್ತ ಹೋದರು. ಹಾಗೆಯೇ ತ್ರಿವಳಿ ಸ್ಪಿನ್‌ ಪ್ರಯೋಗವೂ ಯಶಸ್ಸು ಕಂಡಿತು’ ಎಂಬುದಾಗಿ ರೋಹಿತ್‌ ಹೇಳಿದರು.

ವಿಭಿನ್ನ ಸವಾಲು
ಇದೇ ವೇಳೆ ತಂಡದ ಮುಂದಿ ರುವ ಸವಾಲುಗಳ ಬಗ್ಗೆಯೂ ಹೇಳಿ ಕೊಂಡರು. “ಈ ಬಾರಿಯ ವಿಶ್ವಕಪ್‌ 10 ತಾಣಗಳಲ್ಲಿ ನಡೆಯುತ್ತದೆ. ಎಲ್ಲ 10 ಮೈದಾನಗಳಲ್ಲೂ ಭಾರತ ಆಡಲಿದೆ. ಹೀಗಾಗಿ ವಿಭಿನ್ನ ವಾತಾ ವರಣ, ವಿಭಿನ್ನ ಪರಿಸ್ಥಿತಿ ಜತೆಗೆ ವಿಭಿನ್ನ ಸವಾಲುಗಳು ಎದುರಾಗಲಿವೆ. ಇದಕ್ಕೆ ನಾವು ಸೂಕ್ತ ಸಿದ್ಧತೆಗಳನ್ನು ಮಾಡಿ ಕೊಳ್ಳಬೇಕು. ಇದರಿಂದ ತಂಡದ ಸಂಯೋ ಜನೆ ಯಲ್ಲಿ, ಬ್ಯಾಟಿಂಗ್‌ ಕ್ರಮಾಂಕದಲ್ಲಿ ಬದ ಲಾವಣೆ ಮಾಡಿಕೊಳ್ಳುವ ಸಂದರ್ಭ ಎದುರಾಗಲೂಬಹುದು’ ಎಂದರು.

Advertisement

Udayavani is now on Telegram. Click here to join our channel and stay updated with the latest news.

Next