Advertisement

ಕಾಂಗ್ರೆಸ್‌ ನಂಬಿ ಮೋಸ ಹೋದೆ: ರಘು ಆಚಾರ್‌

11:24 PM Apr 09, 2023 | Team Udayavani |

ಚಿತ್ರದುರ್ಗ: ಕಾಂಗ್ರೆಸ್‌ ಟಿಕೆಟ್‌ ವಂಚಿತ ಮಾಜಿ ಎಂಎಲ್‌ಸಿ ರಘು ಆಚಾರ್‌ ಬಂಡಾಯದ ಬಾವುಟ ಹಾರಿಸಿದ್ದು ರವಿವಾರ ನಗರದ ಗಾಯತ್ರಿ ಕಲ್ಯಾಣ ಮಂಟಪದಲ್ಲಿ ಬೆಂಬಲಿಗರ ಸಭೆ ನಡೆಸಿದರು.

Advertisement

ಸಭೆಗೆ ಸಾವಿರಾರು ಬೆಂಬಲಿಗರು ಆಗಮಿಸಿ, ಜೆಡಿಎಸ್‌ನಿಂದ ಸ್ಪರ್ಧಿಸುವಂತೆ ಒತ್ತಾಯಿಸಿದರು. ಈ ವೇಳೆ ರಘು ಆಚಾರ್‌ ಮಾತನಾಡಿ, ಚಿತ್ರದುರ್ಗದಲ್ಲಿ ನಾನು ಮಾಡಿರುವ ಅಭಿವೃದ್ಧಿ ಕಾರ್ಯಗಳ ಪಟ್ಟಿ ಕೊಡುತ್ತೇನೆ.

ಧೈರ್ಯವಿದ್ದರೆ ನನ್ನ ಎದುರಾಳಿಯಾಗಿ ನನಗೆ ಟಿಕೆಟ್‌ ತಪ್ಪಿಸಿದ ಮಹಾನುಭಾವರೇ ಬಂದು ನಿಲ್ಲಲಿ. ನಾನು ಅತ್ಯ ಧಿಕ ಮತಗಳಿಂದ ಗೆದ್ದು ತೋರಿಸುತ್ತೇನೆ. ಈ ಬಾರಿ ಚುನಾವಣೆಯಲ್ಲಿ ಕಾಂಗ್ರೆಸ್‌ ಎಲ್ಲಿದೆ ಎಂದು ಹುಡುಕುವಂತಹ ಪರಿಸ್ಥಿತಿ ನಿರ್ಮಾಣವಾಗಲಿದೆ ಎಂದರು.

 

Advertisement

Udayavani is now on Telegram. Click here to join our channel and stay updated with the latest news.

Next