ರಾಂಚಿ(ಜಾರ್ಖಂಡ್): ಜಾರ್ಖಂಡ್ ಮುಕ್ತಿ ಮೋರ್ಚಾ (JMM) ಮುಖಂಡ, ಮಾಜಿ ಮುಖ್ಯಮಂತ್ರಿ ಚಂಪೈ ಸೋರೆನ್ ಮತ್ತು ಜಾರ್ಖಂಡ್ ಮುಖ್ಯಮಂತ್ರಿ ಹೇಮಂತ್ ಸೋರೆನ್ ಅವರು ಭಾರತೀಯ ಜನತಾ ಪಕ್ಷಕ್ಕೆ (BJP) ಸೇರ್ಪಡೆಗೊಳ್ಳಲೇಬೇಕು ಎಂದು ಅಸ್ಸಾಂ ಮುಖ್ಯಮಂತ್ರಿ, ಜಾರ್ಖಂಡ್ ಬಿಜೆಪಿ ಉಸ್ತುವಾರಿ ಹಿಮಂತ್ ಬಿಸ್ವಾ ಶರ್ಮಾ ಆಹ್ವಾನ ನೀಡಿದ್ದಾರೆ.
ಜಾರ್ಖಂಡ್ ನುಸುಳುಕೋರರ ಹಾಗೂ ಹೊರಗಿನವರ ಸಮಸ್ಯೆಯನ್ನು ಹೆಚ್ಚಾಗಿ ಎದುರಿಸುತ್ತಿದ್ದಿ, ಈ ವಿಚಾರದ ಬಗ್ಗೆ ಬಿಜೆಪಿ ಹೇಮಂತ್ ಜತೆ ಮಾತನಾಡಲು ಸಿದ್ಧವಾಗಿದೆ ಎಂದು ಶರ್ಮಾ ತಿಳಿಸಿದ್ದಾರೆ.
ಚಂಪೈ ಸೋರೆನ್ ಬಿಜೆಪಿಗೆ ಸೇರ್ಪಡೆಯಾಗಬೇಕು ಎಂದು ಬಯಸುತ್ತೇನೆ, ಅವರೊಬ್ಬ ದೊಡ್ಡ ನಾಯಕ, ಆದರೆ ಅವರ ಬಗ್ಗೆ ಪ್ರತಿಕ್ರಿಯೆ ವ್ಯಕ್ತಪಡಿಸುವುದು ಸರಿಯಲ್ಲ ಅಂತ ಎನಿಸುತ್ತಿದೆ ಎಂದು ಶರ್ಮಾ ಹೇಳಿದರು.
ಮುಖ್ಯಮಂತ್ರಿ ಹೇಮಂತ್ ಸೋರೆನ್ ಕೂಡಾ ಬಿಜೆಪಿ ಸೇರಲಿ ಅಂತ ಬಯಸುತ್ತೇನೆ, ಬಿಜೆಪಿ ಅಂದರೆ ದೇಶಭಕ್ತಿ. ಅಲ್ಲದೇ ಜಾರ್ಖಂಡ್ ಗೆ ನೆರೆಯ ದೇಶಗಳಿಂದ ನುಸುಳುಕೋರರು ಬರುವುದನ್ನು ತಡೆಯೋದಕ್ಕೆ ಸಿಎಂ ಹೇಮಂತ್ ಜೊತೆ ಚರ್ಚೆ ನಡೆಸಲು ಸಿದ್ದ ಎಂದು ಬಿಸ್ವಾ ಹೇಳಿದರು.