ಮುಂಬಯಿ: ಟೀಮ್ ಇಂಡಿಯಾದ ಸ್ಟಾರ್ ಆಟಗಾರ ವಿರಾಟ್ ಕೊಹ್ಲಿ, ಭರ್ಜರಿ ಶತಕದಿಂದ ಮತ್ತೆ ತಮ್ಮ ಹಳೆಯ ಸ್ಫೋಟಕ ಆಟಕ್ಕೆ ಮರಳಿದ್ದಾರೆ. ಟಿ-20 ವಿಶ್ವಕಪ್ ಗೆ ದಿನಗಣನೆ ಇದ್ದು, ಇಂಥ ಸಮಯದಲ್ಲಿ ಕೊಹ್ಲಿ ಕಂಬ್ಯಾಕ್ ಮಾಡಿರುವುದು ಭಾರತಕ್ಕೆ ಆಶಾದಾಯಕ ಅಂಶವಾಗಿದೆ.
ಏಷ್ಯಾಕಪ್ ನಲ್ಲಿ ವಿರಾಟ್ ಕೊಹ್ಲಿ ಬಹು ಸಮಯದ ಬಳಿಕ ಮೈದಾನಕ್ಕೆ ಇಳಿದಿದ್ದರು. ನಿರೀಕ್ಷೆಯಂತೆ ಬ್ಯಾಟ್ ಬೀಸಲು ಮುಂದಾದ ಕೊಹ್ಲಿಗೆ ಏಷ್ಯಾಕಪ್ ಸಹಾಯವಾಗಿದೆ. ಕೊಹ್ಲಿ ಒಟ್ಟು ಆಡಿದ 5 ಪಂದ್ಯಗಳಲ್ಲಿ ಸರಾಸರಿ 92.00 ರಂತೆ 147.59 ಸ್ಟ್ರೈಕ್ ರೇಟ್ ನಲ್ಲಿ 276 ರನ್ ಗಳಿಸಿದ್ದಾರೆ. ಇದರಲ್ಲಿ ಅಫ್ಘಾನಿಸ್ತಾನದ ವಿರುದ್ಧ ಭರ್ಜರಿ 122 ರನ್ ಗಳಿಸಿದ್ದು, ಅವರ ಶ್ರೇಷ್ಠ ಸಾಧನೆ.
2019 ರ ಬಳಿಕ ಕೊಹ್ಲಿ ಬ್ಯಾಟ್ ನಿಂದ ಸಿಡಿದ ಮೊದಲ ಶತಕಕ್ಕೆ ನೂರಾರು ಆಟಗಾರರು, ಅಭಿಮಾನಿಗಳಿಗೆ ಖುಷಿ ತಂದಿದೆ. ಈ ಬಗ್ಗೆ ಬಿಸಿಸಿಐ ಅಧ್ಯಕ್ಷ, ಭಾರತದ ಮಾಜಿ ಕಪ್ತಾನ ಸೌರಚ್ ಗಂಗೂಲಿ ಕೂಡ ಮಾತನಾಡಿದ್ದಾರೆ.
ಹೋಲಿಕೆಯನ್ನು ಆಟಗಾರನ ಕೌಶಲ್ಯ ದೃಷ್ಟಿಯಿಂದ ಮಾಡಬೇಕು. ನನ್ನ ಪ್ರಕಾರ ವಿರಾಟ್ ಕೊಹ್ಲಿ ನನ್ನಗಿಂತ ಹೆಚ್ಚು ಕೌಶಲ್ಯವುಳ್ಳ ಆಟಗಾರ. ನಾವು ಬೇರೆ – ಬೇರೆ ಜನರೇಷನ್ ನಲ್ಲಿ ಆಡಿರಬಹುದು. ಅವರು ನನಗಿಂತ ಹೆಚ್ಚು ಕ್ರಿಕೆಟ್ ಆಡಿರಬಹುದು. ನಾನು ನನ್ನ ಕಾಲದಲ್ಲಿ ಕ್ರಿಕೆಟ್ ಆಡಿದ್ದೇನೆ.ಬಹುಶ: ಅವರು ನನಗಿಂತ ಹೆಚ್ಚು ಪಂದ್ಯಗಳನ್ನು ಆಡುತ್ತಾರೆ. ನಾನು ಅವರಿಗಿಂತ ಹೆಚ್ಚು ಆಡಿದ್ದೇನೆ. ಆದರೆ ಮುಂದೊಂದು ದಿನ ಅದನ್ನು ಅವರು ಮೀರುತ್ತಾರೆ. ಕೊಹ್ಲಿ ಒಬ್ಬ ಅದ್ಭುತ ಆಟಗಾರ ಎಂದು ಶ್ಲಾಘಿಸಿದ್ದಾರೆ.
ಈ ಹಿಂದೆಯೂ ಸೌರವ ಗಂಗೂಲಿ ವಿರಾಟ್ ಕೊಹ್ಲಿ ಬೆನ್ನಿಗೆ ನಿಂತು ಮಾತಾನಾಡಿದ್ದರು. ಅವರೊಬ್ಬ ದೊಡ್ಡ ಆಟಗಾರ, ಹೆಚ್ಚು ರನ್ ಗಳಿಸುತ್ತಾರೆ ಎಂದು ಹೇಳಿದ್ದರು.