ನವದೆಹಲಿ: ನಿಗೂಢವಾಗಿ ನಾಪತ್ತೆಯಾಗಿರುವ ಕಾಫಿ ಡೇ ಮಾಲೀಕ ವಿಜಿ ಸಿದ್ದಾರ್ಥ ಎರಡು ದಿನ ಮೊದಲು ಕಾಫಿ ಡೇ ಆಡಳಿತ ಮಂಡಳಿ ನಿರ್ದೇಶಕರಿಗೆ ಹಾಗೂ ಸಿಬ್ಬಂದಿಗಳಿಗೆ ಬರೆದಿದ್ದಾರೆ ಎನ್ನಲಾದ ಪತ್ರದಲ್ಲಿ ಐಟಿ ಇಲಾಖೆ ಕಿರುಕುಳ ನೀಡಿತ್ತು ಎಂಬ ಆರೋಪಕ್ಕೆ ಮಂಗಳವಾರ ಸ್ಪಷ್ಟನೆ ನೀಡಿದೆ.
ಇದನ್ನೂ ಓದಿ: ಕಾಫಿಗೆ ತಾರುಣ್ಯ ತುಂಬಿದವನು ಎಲ್ಲ ಬಿಟ್ಟು ಎಲ್ಲಿಗೆ ಹೋದ ?
ಸಿದ್ದಾರ್ಥ ಬರೆದಿದ್ದಾರೆ ಎನ್ನಲಾದ ಪತ್ರ ಸಾಮಾಜಿಕ ಜಾಲತಾಣ ಹಾಗೂ ಮಾಧ್ಯಮಗಳಲ್ಲಿ ಪ್ರಕಟಗೊಂಡಿದ್ದು, ಇದೀಗ ಐಟಿ ಇಲಾಖೆಯ ದಾಖಲೆಯಲ್ಲಿರುವ ಸಹಿಗೂ, ಪತ್ರದಲ್ಲಿರುವ ಸಹಿಗೂ ವ್ಯತ್ಯಾಸ ಇದೆ ಎಂದು ಐಟಿ ಇಲಾಖೆ ಮೂಲಗಳು ತಿಳಿಸಿವೆ.
ಇದನ್ನೂ ಓದಿ: ಎಸ್ ಎಂಕೆ ಅಳಿಯ ಸಿದ್ದಾರ್ಥ 24 ಬ್ಯಾಂಕ್ ಗಳಲ್ಲಿ ಪಡೆದಿರುವ ಸಾಲ ಎಷ್ಟು ಗೊತ್ತಾ?
ಹಿಂದಿನ ಆದಾಯ ತೆರಿಗೆ ಇಲಾಖೆ ಡಿಜಿ ತನಗೆ ಭಾರೀ ಕಿರುಕುಳ ನೀಡಿದ್ದು, ತನ್ನ ಕಂಪನಿಯ ಶೇರುಗಳನ್ನು ಜಪ್ತಿ ಮಾಡಿಕೊಂಡಿರುವುದಾಗಿ ಸಿದ್ದಾರ್ಥ ಬರೆದಿದ್ದಾರೆನ್ನಲಾದ ಪತ್ರದಲ್ಲಿ ಆರೋಪಿಸಲಾಗಿತ್ತು.
ಇದನ್ನೂ ಓದಿ: ಇದು ನಮ್ಮಲ್ಲೇ ಮೊದಲು! : ಸಿದ್ದಾರ್ಥ್ ನದಿಗೆ ಹಾರುವುದನ್ನು ನೋಡಿದ್ದ ಆ ವ್ಯಕ್ತಿ ಯಾರು!?
ಆದರೆ ಇದು ಸತ್ಯಕ್ಕೆ ದೂರವಾದ ಆರೋಪ ಎಂದು ಐಟಿ ಇಲಾಖೆ ತಿಳಿಸಿದೆ. ಕರ್ನಾಟಕದ ಪ್ರಭಾವಿ ರಾಜಕಾರಣಿಯೊಬ್ಬರ ಮನೆಯಲ್ಲಿ ಶೋಧ ಕಾರ್ಯ ನಡೆಸುತ್ತಿರುವ ವೇಳೆ ವಿಜಿ ಸಿದ್ದಾರ್ಥಗೆ ಸಂಬಂಧಿಸಿದ ಹಣಕಾಸಿನ ದಾಖಲೆ,ಮಾಹಿತಿ ಸಿಕ್ಕಿತ್ತು. ಈ ಮಾಹಿತಿ ಮೇರೆಗೆ ಐಟಿ ಇಲಾಖೆ ಕಾಫಿ ಡೇ ಮತ್ತು ಸಿದ್ದಾರ್ಥ ಮನೆ ಮೇಲೆ ದಾಳಿ ನಡೆಸಿತ್ತು.
ಇದನ್ನೂ ಓದಿ: ಸಿದ್ದಾರ್ಥಗಾಗಿ ಕೋಸ್ಟ್ ಗಾರ್ಡ್, ಹೋವರ್ ಕ್ರಾಫ್ಟ್ ಶೋಧ; ಇನ್ನೂ ಸಿಗಲಿಲ್ಲ ಸುಳಿವು
ಅಲ್ಲದೇ ಶೋಧ ಕಾರ್ಯದಲ್ಲಿ ಸಿಂಗಾಪೂರ್ ಪ್ರಜೆಯಾಗಿರುವ ವ್ಯಕ್ತಿಯೊಬ್ಬರ ಬಳಿ 1.2 ಕೋಟಿ ರೂಪಾಯಿ ಹಣ ಪತ್ತೆಯಾಗಿದ್ದು, ಇದು ವಿಜಿ ಸಿದ್ದಾರ್ಥ ಅವರಿಗೆ ಸೇರಿದ್ದ ಹಣ ಎಂದು ಒಪ್ಪಿಕೊಂಡಿರುವುದಾಗಿ ಐಟಿ ಇಲಾಖೆ ಮಾಹಿತಿ ನೀಡಿದೆ.
ಇದನ್ನೂ ಓದಿ: ಎಸ್ ಎಂಕೆ ಅಳಿಯ ನಾಪತ್ತೆ ನಿಗೂಢ; ಸಿದ್ದಾರ್ಥ ಪತ್ರದಲ್ಲಿ ಕಾರಣ ಬಹಿರಂಗ
ಶೋಧ ಕಾರ್ಯಾಚರಣೆಯಲ್ಲಿ ವಿಜಿ ಸಿದ್ದಾರ್ಥ ಬಳಿ ಲೆಕ್ಕವಿಲ್ಲದ ಸುಮಾರು 362 ಕೋಟಿ ರೂಪಾಯಿ ಹಣ ಇದ್ದಿರುವುದನ್ನು ಕೂಡಾ ಒಪ್ಪಿಕೊಂಡಿದ್ದರು. ಸಿದ್ದಾರ್ಥ ಇತ್ತೀಚೆಗಷ್ಟೇ ಐಟಿ ರಿಟರ್ನ್ ಸಲ್ಲಿಸಿದ್ದರು. ಆದರೆ ಬಹಿರಂಗಪಡಿಸದ ಆದಾಯದ ಬಗ್ಗೆ ಯಾವ ವಿವರವನ್ನೂ ಸಲ್ಲಿಸಿರಲಿಲ್ಲವಾಗಿತ್ತು ಎಂದು ಹೇಳಿದೆ.
ಇದನ್ನೂ ಓದಿ: ಭಗವಂತನ ಇಚ್ಛೆ ಏನಿದೆಯೋ, ಸಿದ್ಧಾರ್ಥ್ ನಾಪತ್ತೆ ಬಗ್ಗೆ ತನಿಖೆ ಆಗಲಿ; ಡಿಕೆ ಶಿವಕುಮಾರ್
ಏತನ್ಮಧ್ಯೆ ಮೈಂಡ್ ಟ್ರೀ ಶೇರುಗಳನ್ನು ರಿಲೀಸ್ ಮಾಡುವಂತೆ ಐಟಿ ಇಲಾಖೆಗೆ ಸಿದ್ದಾರ್ಥ ಮನವಿ ಮಾಡಿಕೊಂಡಿದ್ದು, ಅದಕ್ಕೆ ಬದಲು ಕಾಫಿ ಡೇ ಎಂಟರ್ ಪ್ರೈಸಸ್ ಲಿಮಿಟೆಡ್ ನ ಶೇರುಗಳನ್ನು ಭದ್ರತೆ ಕೊಡುವುದಾಗಿ ತಿಳಿಸಿದ್ದರು ಎಂದು ಐಟಿ ಇಲಾಖೆ ಸ್ಪಷ್ಟನೆಯಲ್ಲಿ ವಿವರಿಸಿದೆ. ಈ ಸಿದ್ದಾರ್ಥ ಮನವಿ ಮೇರೆಗೆ 13-02-19ರಂದು ಜಪ್ತಿ ಮಾಡಿಕೊಂಡಿದ್ದ ಮೈಂಡ್ ಟ್ರಿ ಶೇರುಗಳನ್ನು ನಿರ್ದಿಷ್ಟ ಷರತ್ತುಗಳೊಂದಿಗೆ ರಿವೋಕ್ ಮಾಡಲಾಗಿತ್ತು ಎಂದು ತಿಳಿಸಿದೆ.