Advertisement

ನಾನು ಟೀ ಮಾರಿದ್ದೇನೆ ಆದರೆ ದೇಶವನ್ನಲ್ಲ: ಕಾಂಗ್ರೆಸ್ ಗೆ ಮೋದಿ ಟಾಂಗ್

05:21 PM Nov 27, 2017 | Sharanya Alva |

ಗುಜರಾತ್:ಕಾಂಗ್ರೆಸ್ ಪಕ್ಷ ನನ್ನ ಇಷ್ಟಪಡದಿರುವುದಕ್ಕೆ ಕಾರಣ ಏನು ಗೊತ್ತಾ? ನಾನು ಬಡ ಕುಟುಂಬದಿಂದ ಬಂದವನು ಎಂಬುದಕ್ಕಾಗಿ. ಬಡಕುಟುಂಬದ ವ್ಯಕ್ತಿಯೊಬ್ಬ ದೇಶದ ಪ್ರಧಾನಿಯಾದ ಬಗ್ಗೆ ಹೊಟ್ಟೆಕಿಚ್ಚು…ಆದರೆ ಈ ಸತ್ಯವನ್ನು ಮುಚ್ಚಿಡಲು ಅವರಿಂದ (ಕಾಂಗ್ರೆಸ್) ಸಾಧ್ಯವಾಗಿಲ್ಲ..ಹೌದು ನಾನು ಚಾ(ಟೀ)ಮಾರಾಟ ಮಾಡಿದ್ದೇನೆ, ಆದರೆ ನಾನು ದೇಶವನ್ನು ಮಾರಾಟ ಮಾಡಿಲ್ಲ ಎಂದು ಹೇಳುವ ಮೂಲಕ ಪ್ರಧಾನಿ ನರೇಂದ್ರ ಮೋದಿ ಅವರು ಕಾಂಗ್ರೆಸ್ ವಿರುದ್ಧ ಖಡಕ್ ವಾಗ್ದಾಳಿ ನಡೆಸಿದರು.

Advertisement

ಚುನಾವಣೆಯ ಹಿನ್ನೆಲೆಯಲ್ಲಿ ಗುಜರಾತ್ ನಲ್ಲಿ ಸರಣಿ ಪ್ರಚಾರ ಸಭೆಯನ್ನುದ್ದೇಶಿಸಿ ಮಾತನಾಡಿದ ಅವರು ಕಾಂಗ್ರೆಸ್ ಪಕ್ಷದ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದರು.

ಸೋಮವಾರ ಸಂಜೆ ಗುಜರಾತ್ ನ ರಾಜ್ ಕೋಟ್ ನಲ್ಲಿ ಬಹಿರಂಗ ಸಭೆಯನ್ನು ಉದ್ದೇಶಿಸಿ ಮಾತನಾಡಿದ ಪ್ರಧಾನಿ ಮೋದಿ,ಕಾಂಗ್ರೆಸ್ ಅಭಿವೃದ್ಧಿಗೆ ಮಾರಕ ಎಂದು ಆರೋಪಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next