ನಾನಾಗ ಫಸ್ಟ್ ಪಿಯುಸಿಗೆ ಕಾಲಿಟ್ಟಿದ್ದೆ. ಅವು, ಕಾಲೇಜು ಜೀವನದ ಆರಂಭದ ದಿನಗಳು. ಜಿಟಿಜಿಟಿ ಮಳೆಯಲ್ಲೂ ಪುಟ್ಟದೊಂದು ಬ್ಯಾಗ್ ನೇತಾಡಿಸಿಕೊಂಡು ಕಾಲೇಜಿಗೆ ಹೊರಟಿದ್ದೆ. ಕಾಲೇಜಿನ ಎಂಟ್ರೆನ್ಸ್ ತಲುಪುತ್ತಿದ್ದ ಹಾಗೆ ಕೊಡೆ ಮಡಚಿ ಕ್ಲಾಸ್ ಹುಡುಕುವಲ್ಲಿ ಕೊನೆಗೂ ಸಫಲಳಾಗಿದ್ದೆ. ಕಾಲೇಜ್ ಯಾಕೋ ಬೋರು ಎಂಬ ಭಾವ ಜೊತೆಯಾಗುತ್ತಿದ್ದ ಸಂದರ್ಭದಲ್ಲೇ, ವಾರದ ಬಳಿಕ ಕಾಣಿಸಿ ಬಿಟ್ಟಿದ್ದ ಆ ಕ್ಯೂಟ್ ಹುಡುಗ! ಅವನ ಹೆಸರು ಗೊತ್ತಿಲ್ಲ, ಊರು ಗೊತ್ತಿಲ್ಲ. ಆದರೂ ಅವನು ತುಂಬಾ ಇಷ್ಟ ಆಗಿಬಿಟ್ಟ. ದಿನವೂ ಅವನನ್ನ ನೋಡೋಕೆ ಚಾತಕ ಪಕ್ಷಿಯಂತೆ ಕಾಯ್ತಿದ್ದೆ.
ಅಂತೂ ಇಂತೂ ತುಂಬಾ ಸಂಶೋಧನೆ ಮಾಡಿ ಅವನ ಹೆಸರು, ಕ್ಲಾಸ್ ತಿಳಿದುಕೊಂಡೆ. ಸೀನಿಯರ್ ಬೇರೆ! ಹೋಗಿ ಮಾತಾಡೊಕಂತೂ ಧಂ ಇರ್ಲಿಲ್ಲ. ತಾನಾಯ್ತು ,ತನ್ನ ಗ್ರೂಪ್ ಆಯ್ತು ಅಂತಿದ್ದ “ಅವನ’ನ್ನ ಗೊತ್ತಿಲೆªàನೆ ಪ್ರೀತಿಸೋಕೆ ಶುರು ಮಾಡಿದೆ. “ಅವನು’ ಕೂತ ಜಾಗಗಳಿಗೆ ಹೋಗಿ ಕುಳಿತುಕೊಳ್ಳೋದು , ಯಾದ್ದೇ ಕಪಲ್ಸ್, ಮೂವೀಸ್ ನೋಡಿದ್ರೂ “ಅವನ’ ನೆನಪುಗಳಿಗೆ ಜೀವ ತುಂಬೋದು ಇಷ್ಟದ ಹವ್ಯಾಸವಾಯ್ತು. ಒಂದು ವರ್ಷ ಹೇಗೆ ಕಳೀತೋ ಗೊತ್ತಿಲ್ಲ. ಕೊನೆಗೂ “ಅವನು’ ಕಾಲೇಜಿಗೆ ವಿದಾಯ ಹೇಳ್ಳೋ ದಿನ ಬಂದು ಬಿಡು¤. “ಅವನು’ ಇಲ್ಲದ ಕಾಲೇಜ್ ಬೋರ್ ಅನ್ನಿಸೋದಿಕ್ಕೆ ಸ್ಟಾರ್ಟ್ ಆಯ್ತು. ಛೇ! ಅವನಿಗೆ ಮೊದ್ಲೆ ಮಾತಾಡಿಸಿ ಅಟ್ಲೀಸ್ಟ್ ಮೊಬೈಲ್ ನಂಬರ್ ಆದ್ರೂ ತಗೋಬೇಕಿತ್ತು ಅನ್ನೋ ಸ್ಯಾಡ್ ಫೀಲಿಂಗ್ ಬೇರೆ…
ಇವೆಲ್ಲದರ ಮಧ್ಯೆ ನೆನಪಾಗಿದ್ದು ಫೇಸ್‌ಬುಕ್! ತಡ ಮಾಡದೆ “ಅವನ’ ಹೆಸರಿನ ಎಲ್ಲ ಅಕೌಂಟ್‌ಗಳಿಗೂ ರಿಕ್ವೆಸ್ಟ್ ಕಳಿÕದ್ದಾಯ್ತು. ಕೆಲವು ರಿಕ್ವೆಸ್ಟ್ ಅಕ್ಸೆಪ್ಟ್ ಕೂಡ ಆದವು. ಆದರೂ ಅವನನ್ನು ಹೇಗಪ್ಪಾ ಕಂಡುಹಿಡಿಯೋದು ಈ ಅನ್ನೋನ್ ಪ್ರೊಫೈಲ್‌ಗಳಲ್ಲಿ ಅನ್ನೋ ತಲೆಬಿಸಿ. ಪುಣ್ಯಾತ್ಮ ಡಿ.ಪಿ.ನೂ ಹಾಕಿರ್ಲಿಲ್ಲ. ಹೇಗೋ “ಅವನ’ ಫ್ರೆಂಡ್‌ಗಳ ಹೆಸರು ತಿಳ್ಕೊಂಡು, ಅವರ ಪ್ರೊಫೈಲ್‌ಗಳಲ್ಲಿ ಇವನ ರಿಸರ್ಚ್ ಸ್ಟಾರ್ಟ್ ಮಾಡಿದೆ. ಫ‚ೈನಲಿ ಪ್ರಯತ್ನಕ್ಕೆ ಸಿಕ್ಕ ಫಲ ಅನ್ನೋ ಹಾಗೆ ಅವನ ಪ್ರೊಫೈಲ್‌ಗೆ ರಿಕ್ವೆಸ್ಟ್ ಕಳಿಸಿದೆ. ಎರಡು ದಿನ ಆದ್ರೂ ರಿಕ್ವೆಸ್ಟ್ ಅಕ್ಸೆಪ್ಟ್ ಆಗಿಲ್ವಲ್ಲ ಅನ್ನೋ ಯೋಚನೆಯಲ್ಲಿ ಕಾಫಿ ಮಗ್ ಹಿಡಿದು ಕುಳಿತಿದ್ದೆ. ಆಗ್ಲೆà ಬಂತು ಫೇಸ್‌ಬುಕ್ ನೋಟಿಫಿಕೇಶನ್, ರಿಕ್ವೆಸ್ಟ್ ಅಕ್ಸೆಪ್ಟ್ ಆಗಿದೆ ಅಂತ!
ಅಲ್ಲಿಂದ ಆರಂಭವಾಯ್ತು ಅವನೊಂದಿಗಿನ ಚಾಟ್, ನಗು, ಹರಟೆ. ದಿನ ಕಳೆದಂತೆ ಫೋನ್ ನಂಬರ್ ಕೂಡ ಶೇರ್ ಆಯ್ತು. ಹಾಗೇ ನಮ್ಮ ಫ್ರೆಂಡ್‌ಶಿಪ್ ಸ್ಟ್ರಾಂಗ್ ಆಗ್ತಾ ಇತ್ತು ಕಾಲದೊಂದಿಗೆ. “ಅವನು’ ಎಲ್ಲರಂಥಲ್ಲ. ಎಂದಿಗೂ ಎಲ್ಲೆ ಮೀರಿ ವರ್ತಿಸಲಿಲ್ಲ. ನಮ್ಮ ಸ್ನೇಹ, ಪುಟ್ಟ ಕಂದಮ್ಮಗಳ ಮನಸ್ಸಿನಂತೆ ಸ್ವತ್ಛವಾಗಿ ನಿರ್ಮಲ ಪ್ರೀತಿಯಿಂದ ಬೆಳೆಯೋದಿಕ್ಕೆ ಭದ್ರ ಬುನಾದಿಯನ್ನು ನಮ್ಮಿಬ್ಬರ ಮನಸ್ಸು ನಿರ್ಮಿಸಿತ್ತು. ಐದು ವರ್ಷಗಳು ಹೇಗೆ ಕಳೆದವೋ ಗೊತ್ತಿಲ್ಲ. ಒನ್ ಫ‚ೈನ್ ಡೇ “ಅವನ’ ಮೇಲಿದ್ದ ಭಾವನೆಗಳನ್ನೆಲ್ಲ ಹೇಳಿ ಪ್ರಪೋಸ್ ಕೂಡ ಮಾಡಿºಟ್ಟೆ. ಮುದ್ದು ಅವ, ಏನನ್ನಿಸಿತೋ ಏನೋ ಮರುಮಾತಿಲ್ಲದೆ ಅಕ್ಸೆಪ್ಟ್ ಮಾಡಿºಟ್ಟ.
“ಅವನ’ ಡೇಟಿಂಗ್ ನಿಯಮಗಳಿಗೆ ಬದ್ಧಳಾಗಿ ಹೊಸ ಜೀವನಕ್ಕೆ ಕಾಲಿಟ್ಟ ನನಗೆ ಸಿಕ್ಕಿದ್ದು ಅವನನ್ನು ಪೂರ್ತಿಯಾಗಿ ಅರ್ಥ ಮಾಡಿಕೊಳ್ಳೋ ಅವಕಾಶ! ಕಾಲ ಬದಲಾದಂತೆ ಇಬ್ಬರಿಗೂ ಅರಿವಾಗತೊಡಗಿತು ವಿ ಆರ್ ಮೇಡ್ ಫಾರ್ ಈಚ್ ಅದರ್ ಅಂತ. ಅವನ ನಗುವಲ್ಲಿ ನನ್ನ ಖುಷಿ ಕಾಣೋದು, ಅವನೊಂದಿಗೆ ಕನಸುಗಳನ್ನು ಹೆಣೆಯೋದು, ಅವನ ವಾಯ್ಸ ಕೇಳ್ಳೋದು ದಿನಚರಿಯ ಪ್ರಮುಖ ಭಾಗಗಳಾದವು.
ಅಪಕ್ವ ಮನದ ಪ್ರೀತಿ ಈಗ ಪಕ್ವವಾಗಿದೆ. ಮೊದಲ ಕ್ರಶ್ ಈಗ ಬಾಳ ಗೆಳೆಯ. ಅವನೊಂದಿಗೆ ಇರುವಾಗ ಉಸಿರಾಡೋದಕ್ಕಿಂತಲೂ ಜಾಸ್ತಿ ನಗೋ ನಾನು ನಿಜಕ್ಕೂ ಲಕ್ಕಿ. ಅವ ಮುಗ್ಧ ಮನಸ್ಸಿನ ಕಂದಮ್ಮ. ಏಳುಬೀಳುಗಳಲ್ಲಿ ಕೈ ಹಿಡಿದು ನಿಲ್ಲೋ ಮೆಚೂರ್ಡ್ ಹುಡುಗ, ಕೇರ್ ಮಾಡೋದ್ರಲ್ಲಿ ಅಮ್ಮನಿಗೆ ಕಾಂಪಿಟೇಟರ್, ಬೆನ್ನ ಹಿಂದೆ ನಿಂತು ಸಪೋರ್ಟ್ ಮಾಡೋದ್ರಲ್ಲಿ ಅಪ್ಪನ ಜೊತೆಗಾರ, ಪ್ರೀತಿಗೆ ಈ ಮನದೊಡೆಯ… ಈ ಜೀವಕ್ಕೆ ಇಷ್ಟು ಸಾಕು! ಅಂದ ಹಾಗೆ ಇವತ್ತು “ಅವನ’ ಹುಟ್ಟುಹಬ್ಬ. ನೀವೂ ಹರಸಿ, ಹಾರೈಸಿ.
ಪ್ರೀತಿಯಿಂದ,
“ಅವನ’ ಸಾನ್ವಿ