Advertisement

ಸಲಿಂಗಕಾಮಿಗಳ ಅದ್ಧೂರಿ ವಿವಾಹ

09:33 PM Dec 19, 2021 | Team Udayavani |

ಹೈದರಾಬಾದ್‌: ಸಲಿಂಗಕಾಮಿಗಳ ವಿವಾಹಕ್ಕೆ ಭಾರತದಲ್ಲಿ ಮಾನ್ಯತೆ ಇಲ್ಲವಾದರೂ ತೆಲಂಗಾಣದ ಸಲಿಂಗಕಾಮಿ ಜೋಡಿ ಶನಿವಾರ ಅದ್ಧೂರಿಯಾಗಿ ವೈವಾಹಿಕ ಜೀವನಕ್ಕೆ ಕಾಲಿಟ್ಟಿದೆ.

Advertisement

ಅಭಯ್‌ ಡಾಂಗೆ ಮತ್ತು ಸುಪ್ರಿಯೋ ಚಕ್ರವರ್ತಿ ದಾಂಪತ್ಯಕ್ಕೆ ಕಾಲಿಟ್ಟಿದ್ದಾರೆ. ಬಿಳಿ ಸೂಟಿನಲ್ಲಿದ್ದ ಅವರಿಬ್ಬರು, ಪರಸ್ಪರ ಉಂಗುರ ಬದಲಾಯಿಸಿಕೊಂಡಿದ್ದಾರೆ.

ಈ ವಿಶೇಷ ಮದುವೆಗೆ ಅವರು “ಪ್ರಾಮಿಸಿಂಗ್‌ ಸೆರ್ಮನಿ’ ಎನ್ನುವ ಹೆಸರನ್ನೂ ಕೊಟ್ಟಿದ್ದರು. ಕುಟುಂಬಸ್ಥರ ಒಪ್ಪಿಗೆಯೊಂದಿಗೆ, ಅವರ ಸಮ್ಮುಖದಲ್ಲೇ ನಡೆದ ಮದುವೆಯಲ್ಲಿ, ನವ ಜೋಡಿಯ ಸ್ನೇಹಿತರು ಸೇರಿ ಅನೇಕ ಆಪ್ತರು ಭಾಗವಹಿಸಿದ್ದರು.

ಈ ಜೋಡಿಯು ದಕ್ಷಿಣ ಭಾರತದಲ್ಲಿ ಅದ್ಧೂರಿಯಾಗಿ ದಾಂಪತ್ಯ ಜೀವನಕ್ಕೆ ಕಾಲಿಟ್ಟ ಮೊದಲನೇ ಸಲಿಂಗಕಾಮಿ ಜೋಡಿಯಾಗಿ ಹೆಸರು ಪಡೆದಿದೆ.

Advertisement

Udayavani is now on Telegram. Click here to join our channel and stay updated with the latest news.

Next