ಮೈಸೂರು: ರಾಜ್ಯ ಸರ್ಕಾರದ ಮಂತ್ರಿ ಮಂಡಲದಲ್ಲಿ ಹೊಂದಾಣಿಕೆಯಿಲ್ಲ. ಯಡಿಯೂರಪ್ಪ ಒಂದೇ ದಿನಕ್ಕೆ ಖಾತೆ ಬದಲಾವಣೆ ಮಾಡುತ್ತಾರೆ. ಈ ಸರ್ಕಾರ ಯಾವ ಮಟ್ಟದಲ್ಲಿದೆ ಎಂದು ಅದರಿಂದಲೇ ತಿಳಿಯುತ್ತದೆ. ಇಂತಹ ಕೆಟ್ಟ ಸರ್ಕಾರವನ್ನು ನಾನು ನೋಡಿಲ್ಲ ಎಂದು ಕೆಪಿಸಿಸಿ ಕಾರ್ಯಾಧ್ಯಕ್ಷ ಧ್ರುವನಾರಾಯಣ್ ಟೀಕಿಸಿದರು.
ಮೈಸೂರಿನ ಜಲದರ್ಶಿನಿಯಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಬಿಜೆಪಿಯ ಸಚಿವರು, ಶಾಸಕರೇ ಮಾತನಾಡುವುದನ್ನು ನಾವು ನೋಡಿದ್ದೇವೆ. ವಿಶ್ವನಾಥ್ ಪಕ್ಷದ ವಿರುದ್ಧವಾಗಿಯೇ ದಿನ ಮಾತನಾಡ್ತಾರೆ. ಯತ್ನಾಳ್ ವಿರುದ್ಧ ಯಾವುದೇ ಕ್ರಮ ತೆಗೆದುಕೊಳ್ಳಲಿಲ್ಲ. ದಕ್ಷಿಣ ಭಾರತದಲ್ಲಿ ಯಡಿಯೂರಪ್ಪಗೆ ಗೋಲ್ಡನ್ ಸಮಯ ಸಿಕ್ಕಿತ್ತು. ಆದರೆ ಅವರು ಅದನ್ನ ಸರಿಯಾಗಿ ಬಳಸಿಕೊಳ್ಳಲಿಲ್ಲ ಎಂದರು.
ಇದನ್ನೂ ಓದಿ:ವಿಪಕ್ಷದವರು ಏನೇ ಟೀಕೆ ಮಾಡಿದರೂ ನಾವು ಸ್ವಾಗತಿಸುತ್ತೇವೆ: ಬಿ.ಎಸ್.ಯಡಿಯೂರಪ್ಪ
ಪರಿಶಿಷ್ಟ ಜಾತಿ ಮತ್ತು ಪಂಗಡದ ಜನರ ಕಲ್ಯಾಣ ಈ ಸರ್ಕಾರಕ್ಕೆ ಬೇಕಿಲ್ಲ. ಈ ಸರ್ಕಾರಕ್ಕೆ ಇಚ್ಛಾಶಕ್ತಿಯಿಲ್ಲ. ಸಿದ್ದರಾಮಯ್ಯ ಸಿಎಂ ಆಗಿದ್ದಾಗ ಪರಿಶಿಷ್ಟ ಜಾತಿ, ಪಂಗಡಕ್ಕೆ ವಿಶೇಷ ಯೋಜನೆಯನ್ನು ಜಾರಿಗೆ ತಂದಿದ್ದರು. ಮಪ್ರತಿವರ್ಷ ಅವರಿಗೆ ಬಜೆಟ್ ನಲ್ಲಿ ಹಣವನ್ನ ಇಡುತಿದ್ದರು. ಅವರು ಇಟ್ಟ ಹಣವನ್ನ ಸಂಪೂರ್ಣವಾಗಿ ಅವರಿಗೆ ಖರ್ಚು ಮಾಡಿದ್ದರು. ಈ ಹಣ ಖರ್ಚು ಆಗಿದೆಯ ಇಲ್ಲವೇ ಎಂಬುದನ್ನ ನೋಡುವುದು ಸಮಾಜ ಕಲ್ಯಾಣ ಇಲಾಖೆ. ನಾನು ಈ ಇಲಾಖೆಯಲ್ಲಿ ಎರಡು ವರ್ಷ ಕೆಲಸ ಮಾಡಿದ್ದೇನೆ. ಇಲಾಖೆಯಲ್ಲಿ ಸರಿಯಾದ ರೀತಿಯಲ್ಲಿ ಹಣ ಖರ್ಚು ಮಾಡಿಲ್ಲ. ಈ ಹಣವನ್ನ ಬೇರೆ ಉದ್ದೇಶಕ್ಕೆ ಕೆಲಸ ಬಳಸುತ್ತಿದ್ದಾರೆ. ಈ ವಿಷಯ ಅಸೆಂಬ್ಲಿಯಲ್ಲಿಯೂ ಚರ್ಚೆಯಾಗಿದೆ. ಬಿಜೆಪಿ ಶಾಸಕರು ಇದನ್ನು ಮಾಡುತ್ತಿದ್ದಾರೆ ಎಂದರು.
ಈ ಸರ್ಕಾರಕ್ಕೆ ಪರಿಶಿಷ್ಟ ಜಾತಿ, ಪಂಗಡದ ಕಲ್ಯಾಣ ಬೇಕಿಲ್ಲ. ಬಿಜೆಪಿ ನಾಯಕರಿಗೆ ಈ ವರ್ಗದ ಅಭಿವೃದ್ಧಿ ಬೇಕಿಲ್ಲ. ಈ ಇಲಾಖೆಯ ಹಣವನ್ನು ಅವರಿಗೆ ಬಳಸಬೇಕು. ಇಲ್ಲವಾದಲ್ಲಿ ಮುಂದಿನ ದಿನಗಳಲ್ಲಿ ಹೋರಾಟ ಮಾಡಲಾಗುವುದು ಎಂದು ಎಚ್ಚರಿಸಿದರು.
ರಾಜ್ಯ ರಾಜಕೀಯಕ್ಕೆ ಬರುವುದರ ಬಗ್ಗೆ ಇನ್ನೂ ಚಿಂತನೆ ಮಾಡಿಲ್ಲ ಎಂದ ಅವರು, ನಮಗೆ ಯಾವುದೇ ಆಸೆಯಿಲ್ಲ. ನನಗೆ ಜೀವನ ಕೊಟ್ಟಿದ್ದು ಕಾಂಗ್ರೆಸ್ ಪಕ್ಷ. ನಾನು ಕಾಂಗ್ರೆಸ್ ಪಕ್ಷದಿಂದ ಯಾವುದನ್ನು ನಿರೀಕ್ಷೆ ಮಾಡಿಲ್ಲ. ನಾನು ಸೋತಾಗಲೂ ಪಕ್ಷ ನನ್ನ ಬಿಟ್ಟಿಲ್ಲ. ನಾನು ಸೋತೆ ಅಂತ ಕೆಲಸ ಮಾಡುವುದನ್ನು ನಿಲ್ಲಿಸಿಲ್ಲ. ನಾನು ಸದಾ ಜನರ ಜೊತೆ ಇದ್ದೇನೆ. ನಾನು ಯಾವುದಕ್ಕೂ ಆಸೆ ಪಡುವುದಿಲ್ಲ ಎಂದು ಧ್ರುವನಾರಾಯಣ್ ಹೇಳಿದರು.