Advertisement

ಮದುವೆಯಾಗಿ 45 ವರ್ಷ..ನನಗೆ ಸಿಟ್ಟೇ ಬರುವುದಿಲ್ಲ..!; ಖರ್ಗೆ ಮಾತಿಗೆ ಧನ್ ಕರ್ ಪ್ರತಿಕ್ರಿಯೆ

06:14 PM Aug 03, 2023 | Team Udayavani |

ಹೊಸದಿಲ್ಲಿ : ಮಣಿಪುರ ವಿಷಯಕ್ಕೆ ಸಂಬಂಧಿಸಿದಂತೆ ಪ್ರತಿಪಕ್ಷಗಳು ಮತ್ತು ಆಡಳಿತ ಪಕ್ಷದ ಸದಸ್ಯರ ನಡುವೆ ತಾರಕಕ್ಕೇರಿದ ಮಾತಿನ ಚಕಮಕಿಯ ನಡುವೆ, ರಾಜ್ಯಸಭೆಯು ಗುರುವಾರ ಹಾಸ್ಯದ ಕ್ಷಣಗಳಿಗೆ ಸಾಕ್ಷಿಯಾಯಿತು.

Advertisement

ಪ್ರತಿಪಕ್ಷ ನಾಯಕ ಮಲ್ಲಿಕಾರ್ಜುನ ಖರ್ಗೆ ಅವರು ಸಭಾಪತಿ ಜಗದೀಪ್ ಧನ್ ಕರ್ ಅವರಿಗೆ ”ಏಕೆ ಕೋಪಗೊಂಡಿದ್ದೀರಿ” ಎಂದು ಕೇಳಿದರು. ಉತ್ತರಿಸಿದ ಧನ್ ಕರ್ ” ನನಗೆ ಮದುವೆಯಾಗಿ 45 ವರ್ಷವಾಯಿತು, ಎಂದಿಗೂ ಸಿಟ್ಟೇ ಬಂದಿಲ್ಲ” ಎಂದು ಪ್ರತಿಕ್ರಿಯಿಸಿದರು.ಸಭಾಪತಿ ಅವರ ಮಾತು ಕೇಳಿ ಸದನದಲ್ಲಿದ್ದ ಸದಸ್ಯರೆಲ್ಲರೂ ನಗೆಗಡಲಲ್ಲಿ ತೇಲಿದರು.

ಪ್ರತಿಕ್ರಿಯೆ ನೀಡಿದ ಖರ್ಗೆ, ”ನೀವು ನಿಮ್ಮ ಕೋಪವನ್ನು ತೋರಿಸುವುದಿಲ್ಲ, ಆದರೆ ಒಳಗಿನಿಂದ ನೀವು ಕೋಪಗೊಳ್ಳುತ್ತೀರಿ” ಎಂದರು ಇದು ಸದನದಲ್ಲಿ ಮತ್ತೊಂದು ಸುತ್ತಿನ ನಗುವಿನ ಅಲೆಗೆ ಕಾರಣವಾಗುತ್ತದೆ, ಎರಡೂ ಕಡೆಯವರು ಹಾಸ್ಯದ ಕ್ಷಣಗಳನ್ನು ಆನಂದಿಸಿದರು.

ಸಭಾಪತಿ, ಖರ್ಗೆ ಅವರಿಗೆ ಮಾತನಾಡಲು ಅವಕಾಶ ನೀಡಿದ ನಂತರ, ಎರಡು ಸೆಕೆಂಡುಗಳಲ್ಲಿ ಅವರನ್ನು ಕುಳಿತುಕೊಳ್ಳುವಂತೆ ಮಾಡಲಾಗಿದೆ ಎಂದು ಕಾಂಗ್ರೆಸ್ ಮುಖಂಡರು ಆಕ್ರೋಶ ಹೊರ ಹಾಕಿದರು.

Advertisement

Udayavani is now on Telegram. Click here to join our channel and stay updated with the latest news.

Next