Advertisement
ಭಾನುವಾರ ರಾತ್ರಿ ಸರ್ಕಾರಿ ಬಾಲಕರ ಪ್ರೌಢಶಾಲಾ ಮೈದಾನದಲ್ಲಿ ಐ ಲವ್ ಯೂ.. ಚಿತ್ರದ ಆಡಿಯೋ ಬಿಡುಗಡೆ ಸಮಾರಂಭದಲ್ಲಿ ಮಾತನಾಡಿದ ಅವರು, ದಾವಣಗೆರೆಯ ಜನರು ಕನ್ನಡ ಚಿತ್ರಗಳ ಬಗ್ಗೆ ಸಾಕಷ್ಟು ಪ್ರೀತಿ ಹೊಂದಿದ್ದಾರೆ. ಸಾಕಷ್ಟು ಚಿತ್ರಗಳು ಗಲ್ಲಾಪೆಟ್ಟಿಗೆಯಲ್ಲಿ ಕೊಳ್ಳೆ ಹೊಡೆಯಲು ದಾವಣಗೆರೆಯಲ್ಲಿ ಚಿತ್ರ ಗೆದ್ದರೆ ಮುಗಿಯಿತು ಎಂದು ಸಂತಸ ವ್ಯಕ್ತಪಡಿಸಿದರು.
Related Articles
Advertisement
ನಿರ್ದೇಶಕ ಆರ್. ಚಂದ್ರು ಮಾತನಾಡಿ, ಉಪೇಂದ್ರ ಬ್ರೈನ್, ನನ್ನ ಮೈಂಡ್ ಕಾಂಬಿನೇಷನ್‌ನಲ್ಲಿ ಐ ಲವ್ ಯೂ ಚಿತ್ರ ಉತ್ತಮವಾಗಿ ಮೂಡಿಬಂದಿದೆ. ಕನ್ನಡ, ತೆಲುಗು ಎರಡೂ ಭಾಷೆಯಲ್ಲಿ ಆದಷ್ಟು ಬೇಗ ತೆರೆ ಕಾಣಲಿದೆ. ಉಪೇಂದ್ರ ಎರಡು ವರ್ಷಗಳ ನಂತರ ಮೇಲೆ ತೆರೆಯ ಮೇಲೆ ಕಾಣಿಸಿಕೊಳ್ಳುವ ಮೂಲಕ ಎಲ್ಲರನ್ನೂ ರಂಜಿಸಲಿದ್ದಾರೆ ಎಂದರು.
ನಟಿ ಸೋನುಗೌಡ ಮಾತನಾಡಿ, ಉಪೇಂದ್ರ ನಟನೆ, ಚಿಂತನೆ ಅದ್ಭುತ ಎಂದು ಸಂತಸ ವ್ಯಕ್ತಪಡಿಸಿದರು.
ನಟಿ ರಚಿತಾರಾಮ್ ಮಾತನಾಡಿ, ನಮಸ್ಕಾರ ದಾವಣಗೆರೆ. ಲವ್ ಯೂ ಆಲ್ ಎಂದು ಫ್ಲೈಯಿಂಗ್ ಕಿಸ್ ಮಾಡಿದರು. ದಾವಣಗೆರೆಗೆ ಬಂದ ತಕ್ಷಣ ಬೆಣ್ಣೆ ದೋಸೆ ತಿಂದೆ. ಚಿತ್ರದ ಆಡಿಯೋ ಬಿಡುಗಡೆ ಸಮಾರಂಭಕ್ಕೆ ಇಷ್ಟೊಂದು ಜನ ನೋಡಿ ಸಂತಸವಾಗಿದೆ. ಏನು ಮಾತನಾಡಬೇಕು ಎಂದು ಗೊತ್ತಾಗದಷ್ಟು ಜನರನ್ನು ನೋಡ್ತಾ ಇದೀನಿ. ಸ್ಪೀಚ್ ಮರೆತೇ ಹೋಗಿದಿನಿ. ಮೊದಲ ಬಾರಿ ಉಪೇಂದ್ರ ಜೊತೆಗೆ ಕೆಲಸ ಮಾಡಿದ್ದು ತುಂಬಾ ಖುಷಿ. ಚಿತ್ರ ಎಲ್ಲರಿಗೂ ಇಷ್ಟವಾಗುತ್ತೆ ಎಂದರು.
ಐ ಲವ್ ಯೂ.. ಚಿತ್ರದ ಆಡಿಯೋ ಬಿಡುಗಡೆಗೆ ಮೇಯರ್ ಶೋಭಾ ಪಲ್ಲಾಗಟ್ಟೆ, ನಾಯಕ ನಟ ಉಪೇಂದ್ರ, ನಟಿಯರಾದ ರಚಿತಾರಾಮ್, ಸೋನುಗೌಡ, ಮಯೂರಿ, ಸಂಗೀತ ನಿರ್ದೇಶಕ ಗುರುಕಿರಣ್, ಡಾ. ಕಿರಣ್ ತೋಟಂಬೈಲ್, ಚಿತ್ರದ ನಿರ್ದೇಶಕ ಆರ್. ಚಂದ್ರು, ಲಹರಿ ವೇಲು, ಮೋಹನ್, ನಗರ ಪ್ರಭಾರ ಉಪಾಧೀಕ್ಷಕ ಗೋಪಾಲಕೃಷ್ಣ ಗೌಡ, ಕೇಂದ್ರ ವೃತ್ತ ನಿರೀಕ್ಷಕ ಇ. ಆನಂದ್, ಬಡಾವಣಾ ಪೊಲೀಸ್ ಠಾಣಾ ಪಿಎಸ್‌ಐ ವೀರಬಸಪ್ಪ ಕುಸಲಾಪುರ್ ಹಾಗೂ ಚಿತ್ರದ ನಿರ್ದೇಶಕ ಆರ್. ಚಂದ್ರು ಪತ್ನಿ ಯಮುನಾ ಚಂದ್ರು ಸಾಕ್ಷಿಯಾದರು. ಐ ಲವ್ ಯೂ.. ಚಿತ್ರದ ಆಡಿಯೋ ಬಿಡುಗಡೆ ಹಿನ್ನೆಲೆಯಲ್ಲಿ ಸರ್ಕಾರಿ ಬಾಲಕರ ಪ್ರೌಢಶಾಲಾ ಮೈದಾನ ಕಿಕ್ಕಿರಿದು ತುಂಬಿತ್ತು.
ಸೋನು ಗೌಡ, ಐ ಲವ್ ಯೂ ಚಿತ್ರದ ಕಾಣೆಯಾದ.. ನಿಂಗೆ ಕಾದೇನಾ.. ಹಾಡಿಗೆ ಡ್ಯಾನ್ಸ್ ಮಾಡುವ ಮೂಲಕ ರಂಜಿಸಿದರು. ಮಯೂರಿ ಡ್ಯಾನ್ಸ್ ಮೂಲಕ ವೇದಿಕೆಗೆ ರಂಗು ನೀಡಿದರು. ಅನುಶ್ರೀ ನಿರೂಪಿಸಿದರು.