Advertisement

“ಐ ಲವ್‌ ಯು’ಚಿತ್ರಕ್ಕೆ ಸೆನ್ಸಾರ್‌ ಅಸ್ತು

09:12 AM May 10, 2019 | Lakshmi GovindaRaj |

ಈಗಾಗಲೇ ತನ್ನ ಹಾಡುಗಳು ಮತ್ತು ಟ್ರೇಲರ್‌ಗಳ ಮೂಲಕ ಸ್ಯಾಂಡಲ್‌ವುಡ್‌ ಅಂಗಳಲದಲ್ಲಿ ಸಾಕಷ್ಟು ಸದ್ದು ಮಾಡುತ್ತಿರುವ ನಟ ಉಪೇಂದ್ರ ಅಭಿನಯದ “ಐ ಲವ್‌ ಯು’ ಚಿತ್ರಕ್ಕೆ ಸೆನ್ಸಾರ್‌ ಕಡೆಯಿಂದ ಗ್ರೀನ್‌ ಸಿಗ್ನಲ್‌ ಸಿಕ್ಕಿದೆ.

Advertisement

ಇತ್ತೀಚೆಗೆ “ಐ ಲವ್‌ ಯು’ ಚಿತ್ರವನ್ನು ವೀಕ್ಷಿಸಿದ ಪ್ರಾದೇಶಿಕ ಸೆನ್ಸಾರ್‌ ಮಂಡಳಿ ಚಿತ್ರಕ್ಕೆ ಯಾವುದೇ ಕಟ್ಸ್‌ಗಳು ಇಲ್ಲದೆ “ಯು/ಎ’ ಸರ್ಟಿಫಿಕೇಟ್‌ ನೀಡಿ ಬಿಡುಗಡೆಗೆ ಅಸ್ತು ಎಂದಿದೆ. ಇದೇ ಖುಷಿಯಲ್ಲಿರುವ ನಿರ್ದೇಶಕ ಆರ್‌. ಚಂದ್ರು ಇದೇ ತಿಂಗಳ ಅಂತ್ಯಕ್ಕೆ “ಐ ಲವ್‌ ಯು’ ಚಿತ್ರವನ್ನು ಪ್ರೇಕ್ಷಕರ ಮುಂದೆ ತರುವ ಯೋಚನೆಯಲ್ಲಿದ್ದಾರೆ.

ಬಹು ದಿನಗಳ ನಂತರ ತೆರೆಗೆ ಬರುತ್ತಿರುವ ಉಪೇಂದ್ರ ಅಭಿನಯದ “ಐ ಲವ್‌ ಯು’ ಚಿತ್ರದಲ್ಲಿ ಉಪೇಂದ್ರ ಅವರಿಗೆ ನಾಯಕಿಯಾಗಿ ರಚಿತಾ ರಾಮ್‌, ಸೋನು ಗೌಡ ಜೋಡಿಯಾಗಿ ಅಭಿನಯಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next